ಸಿಎಂ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಐತಿಹಾಸಿಕ ನಗರಿ
ವಿಜಯಪುರ, 08 ಜನವರಿ (ಹಿ.ಸ.); ಆ್ಯಂಕರ್: ವಿಜಯಪುರ ನಗರಕ್ಕೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ನೂತನ ಯೋಜನೆಗಳಿಗೆ ಭೂಮಿ ಪೂಜೆ ನೆರವೇರ
ಸಿಎಂ


ವಿಜಯಪುರ, 08 ಜನವರಿ (ಹಿ.ಸ.);

ಆ್ಯಂಕರ್: ವಿಜಯಪುರ ನಗರಕ್ಕೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ನೂತನ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರ ಮದವಣಗಿತ್ತಿಯಂತೆ ಶೃಂಗಾರ ಗೊಳ್ಳುತ್ತಿದೆ. ಇನ್ನೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿಎಂ ಗೆ ಸನ್ಮಾನ ಹಮ್ಮಿಕೊಳ್ಳಾಗಿದೆ. ನಾಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಜಯಪುರ ನಗರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರನ್ನು ನಾಮಕರಣ ಮಾಡಿ, ರಾಣಿ ಚೆನ್ನಮ್ಮನವರ ಭವ್ಯ ಪುತ್ಥಳಿಯನ್ನು ಅನಾವರಣ ಗೊಳಿಸಲಿದ್ದಾರೆ. ನಾಳೆ ಬೆಳಿಗ್ಗೆ 11.30ಕ್ಕೆ ಸಿಎಂ, ಡಿಸಿಎಂ ಹಾಗೂ ಸಚಿವರಾದ ಸುರೇಶ ಭೈರತಿ, ರಾಮಲಿಂಗಾರೆಡ್ಡಿ, ಎಚ್‌.ಸಿ.ಮಹದೇವಪ್ಪ,ಡಾ.ಎಂ.ಸಿ.ಸುಧಾಕ‌ರ್, ಶಿವರಾಜ ತಂಗಡಗಿ, ಕೆ.ಜೆ.ಜಾರ್ಜ್ ಸೇರಿದಂತೆ ಅನೇಕ ಸಚಿವರು ಆಗಮಿಸಲಿದ್ದಾರೆ. ಆಗಮಿಸಿದ ಬಳಿಕ 11.45ಕ್ಕೆ ರಾಣಿ ಚನ್ನಮ್ಮ ಮೂರ್ತಿ, ನಾಮಫಲಕ ಅನಾವರಣವನ್ನು ಸಿಎಂ ಸೇರಿ ಗಣ್ಯರು ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 12.30ಕ್ಕೆ ದರಬಾರ್ ಶಾಲಾ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸೇರಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ‌.

ಇನ್ನೂ ಇದೇ ವೇಳೆ ನಾಡಿನ ಮುಖ್ಯಮಂತ್ರಿಗಳಾಗಿ ಡಿ.ದೇವರಾಜ ಅರಸು ಅವರು ಸ್ಥಾಪಿಸಿದ್ದ ದೀರ್ಘಾವಧಿ ಸಿಎಂ ದಾಖಲೆಯನ್ನು ಸಿದ್ದರಾಮಯ್ಯ ನವರು ಮೀರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲೇ ಸಿದ್ದರಾಮಯ್ಯನವರಿಗೆ ಅತ್ಯಂತ ಆತ್ಮೀಯ, ಗೌರವ ಅರ್ಪಣೆ ಮಾಡಲಾಗುತ್ತಿದೆ.ಇನ್ನೂ ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣಗಳಾದ ಮನಗೂಳಿಯ ಕೆನರಾ ಬ್ಯಾಂಕ್ ದರೋಡೆ ಹಾಗೂ ಚಡಚಣ ಪಟ್ಟಣದ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣಗಳನ್ನು ಸಮರ್ಥವಾಗಿ ಪತ್ತೆಹಚ್ಚಿದ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಗುತ್ತಿದೆ. ಸಾರ್ವಜನಿಕ ರಸ್ತೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳಲು ಸಂಚಾರ ಮಾರ್ಗ ಬದಲಾಯಿಸಿ, ಪರ್ಯಾಯ ಮಾರ್ಗಗಳ ವ್ಯವಸ್ಥೆ ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಸಿಎಂ ಸ್ವಾಗತಕ್ಕಾಗಿ ಬ್ಯಾನರ್, ಕಟೌಟ್ ಗಳ ನ್ನು ಹಾಕುವ ಕಾರ್ಯ ಭರ್ಜರಿಯಾಗಿ ನಡೆದಿದೆ. ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಲ್ಲಾ ವೃತ್ತಗಳಲ್ಲಿ ರಾಣಿ ಚೆನ್ನಮ್ಮ ಇರುವ ಧ್ವಜ ಹಾಗೂ ಬಂಟಿಂಗ್ ಹಾಕಲಾಗಿದೆ. ಸ್ವಾಗತ ಕಮಾನುಗಳಿಂದ ವಿಜಯಪುರ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಒಟ್ಟಾರೆ ನಾಡಿನ ದೊರೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸದಸ್ಯರನ್ನು ಸ್ವಾಗತಿಸಲು ವಿಜಯಪುರ ದಲ್ಲಿ ಭರ್ಜರಿಯಾಗಿ ಸಿದ್ಧತೆಗಳು ನಡೆಯುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande