ಸವಿತಾ ಸಮಾಜದ ವಧು–ವರರ ಸಮಾವೇಶ
ಗದಗ, 08 ಜನವರಿ (ಹಿ.ಸ.) : ಆ್ಯಂಕರ್ : ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಪ್ರೊ. ವೆಂಕಟಾಚಲಪತಿ ಅವರ ನೇತೃತ್ವದಲ್ಲಿ ಸವಿತಾ ಸ್ವಯಂವರ ಹಾಗೂ ಅಂತರರಾಜ್ಯ ಮಟ್ಟದ ಸವಿತಾ ಸಮಾಜದ ವಧು–ವರರ ಸಮಾವೇಶ–2026 ಕಾರ್ಯಕ್ರಮವನ್ನು ಇದೇ ಜನವರಿ 25, 2026 ಭಾನುವಾರ ಬೆಳಿಗ್ಗೆ 1
ಫೋಟೋ


ಗದಗ, 08 ಜನವರಿ (ಹಿ.ಸ.) :

ಆ್ಯಂಕರ್ : ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಪ್ರೊ. ವೆಂಕಟಾಚಲಪತಿ ಅವರ ನೇತೃತ್ವದಲ್ಲಿ ಸವಿತಾ ಸ್ವಯಂವರ ಹಾಗೂ ಅಂತರರಾಜ್ಯ ಮಟ್ಟದ ಸವಿತಾ ಸಮಾಜದ ವಧು–ವರರ ಸಮಾವೇಶ–2026 ಕಾರ್ಯಕ್ರಮವನ್ನು ಇದೇ ಜನವರಿ 25, 2026 ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೇರೆಯ ಚನ್ನಗಿರಿ ವಿರುಪಾಕ್ಷಪ್ಪನವರ ಕಲ್ಯಾಣದಲ್ಲಿ ಆಯೋಜಿಸಲಾಗಿದೆ.

ಈ ಮಹತ್ವದ ಸಮಾವೇಶದಲ್ಲಿ ಭಾಗವಹಿಸುವಂತೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಗದಗ ಜಿಲ್ಲೆಯ ಎಲ್ಲಾ ಆಸಕ್ತ ವಧು–ವರರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ಜೀವನದಲ್ಲಿ ಒಮ್ಮೆ ಮಾತ್ರ ಬರುವ ಈ ರೀತಿಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು, ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಕುಟುಂಬದ ಕನಸುಗಳನ್ನು ನನಸಾಗಿಸಲು ಈ ಸಮಾವೇಶ ಒಂದು ಉತ್ತಮ ವೇದಿಕೆಯಾಗಿದೆ” ಎಂದು ಹೇಳಿದರು.

ಸಮಾಜದ ಯುವಕ–ಯುವತಿಯರು ಯಾವುದೇ ಹಿಂಜರಿಕೆ ಇಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಸ್ಪರ ಪರಿಚಯದ ಮೂಲಕ ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜದ ಏಕತೆ, ಪರಸ್ಪರ ಸಹಕಾರ ಮತ್ತು ಸುಸಂಸ್ಕೃತ ವಿವಾಹ ವ್ಯವಸ್ಥೆಗೆ ಇಂತಹ ಸಮಾವೇಶಗಳು ಬಹುಮುಖ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಗದಗ ಜಿಲ್ಲೆಯ ಎಲ್ಲಾ ಆಸಕ್ತ ವಧು–ವರರು ಕುಟುಂಬ ಸಮೇತರಾಗಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಕೃಷ್ಣಾ ಎಚ್. ಹಡಪದ ಅವರು ಮನವಿ ಮಾಡಿದ್ದಾರೆ.

ಗದಗ ಜಿಲ್ಲೆಯ ಎಲ್ಲಾ ಸವಿತಾ ಸಮಾಜದ ಆಸಕ್ತ ವಧು–ವರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಂಘದ ಅಧ್ಯಕ್ಷರಾದ ಪ್ರೊ. ವೆಂಕಟಾಚಲಪತಿ ಅವರ ನಿಯೋಗವು ಮನವಿ ಮಾಡಿದೆ.

ಇನ್ನು ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರೊ. ವೆಂಕಟಾಚಲಪತಿ ಅವರ ನಿಯೋಗವು, ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಸವಿತಾ ಸಮಾಜದ ವಧು–ವರರಿಗೆ ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿದ್ದು, ಸಮಾಜದ ಅಭಿವೃದ್ಧಿ ಹಾಗೂ ಕುಟುಂಬ ನಿರ್ಮಾಣದ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande