ಜ.10 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 08 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಯ 220/11ಕೆವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ 20ಎಂವಿಎ ಟ್ರಾನ್ಸ್ ಫಾರ್ಮರ್ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜ.10 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 06 ಗಂಟೆಯವರೆಗ
ಜ.10 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 08 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಯ 220/11ಕೆವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ 20ಎಂವಿಎ ಟ್ರಾನ್ಸ್ ಫಾರ್ಮರ್ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜ.10 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 06 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :

ಎಫ್-33 ವ್ಯಾಪ್ತಿಯ ಕೆಹೆಚ್‌ಬಿ ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್‌ಫ್ಯಾಂಟ್ರಿ ರಸ್ತೆ, ವಾಸವಿ ಶಾಲೆ, ಕೊಳಗಲ್ ರಸ್ತೆ, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರಸ್ತೆ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ಧಾರ್ಥ ನಗರ, ವಿಯಾನಿ ಶಾಲೆ.

ಎಫ್-34 ವ್ಯಾಪ್ತಿಯ ರೈಲ್ವೇ ಫಸ್ಟ್ ಗೇಟ್, ಕೊರಚ ಸ್ಟಿçÃಟ್, ಉರ್ದು ಟ್ರೆöÊನಿಂಗ್ ಸ್ಕೂಲ್, ಕಡಪಗೆರೆ, ಟೈಲರ್ ಸ್ಟಿçÃಟ್, ವಡ್ಡೆ ನಾಗಪ್ಪ ಕಾಲೋನಿ, ತಿಲಕ್ ನಗರ, ವಿನಾಯಕ ನಗರ, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್ ಬಜಾರ್ ಮೇನ್ ರೋಡ್.

ಎಫ್-35 ನ ಜಲ ಶುದ್ಧೀಕರಣ ಕೇಂದ್ರ. ಎಫ್-36 ವ್ಯಾಪ್ತಿಯ ಬಂಡಿಹಟ್ಟಿ, ಆಶ್ರಯ ಕಾಲೋನಿ, ಈದ್ಗಾ ರಸ್ತೆ, ಟೀರ‍್ಸ್ ಕಾಲೋನಿ, ಜಾಗೃತಿ ನಗರ ಸರ್ಕಲ್, ಆಜಾದ್ ನಗರ.

ಎಫ್-40 ವ್ಯಾಪ್ತಿಯ ಕುವೆಂಪು ನಗರ, ರಾಮಾಂಜೀನೇಯ ನಗರ, ಸಿಎಂಸಿ ಕಾಲೋನಿ, ಎಕ್ಸ್-ಸರ್ವೀಸ್‌ಮೆನ್ ಕಾಲೋನಿ. ಎಫ್-72 ವ್ಯಾಪ್ತಿಯ ಕಾಂಟೋನ್ ಮೆಂಟ್, ಸೂರ್ಯ ಕಾಲೋನಿ, ತಿಲಕ್ ನಗರ, ಸುಧಾ ಕ್ರಾಸ್, ನಂದಿ ಕಾಲೋನಿ, ಹೆಚ್‌ಆರ್‌ಜಿ ಕಾಲೋನಿ, ಜಯನಗರ, ರಹಿಮಾಬಾದ್ ಕಾಲೋನಿ, ನಲಂದ ಕಾಲೇಜ್, ವಿಜಯನಗರ ಕಾಲೋನಿ, ಕೆಹೆಚ್‌ಬಿ ಕಾಲೋನಿ, ಜಗನ್ನಾಥ ಮಂದಿರ, ಭಾಸ್ಕರ ನಾಯ್ಡು ಸ್ಟಿçÃಟ್, ಸೆಂಟ್ ಜೋಸೆಫ್ ಸ್ಕೂಲ್, ಬೆಳಗಲ್ ಕ್ರಾಸ್, ಚಂದ್ರ ಕಾಲೋನಿ, ಎಂಕೆ ಗಡಂಗ್.

ಎಫ್-73 ವ್ಯಾಪ್ತಿಯ ಬಸವನಕುಂಟೆ, ಕೋಟೆ ಪ್ರದೇಶ, 1ನೇ ಮತ್ತು 2ನೇ ರೈಲ್ವೇ ಗೇಟ್, ಸಿದ್ಧಾರ್ಥ ನಗರ, ಸುಧಾಕ್ರಾಸ್ ಮತ್ತು ಒಪಿಡಿ.

ಎಫ್-75 ವ್ಯಾಪ್ತಿಯ ಟ್ರಾಮಾ ಕೇರ್ ಸೆಂಟರ್, ಗೋಪಾಲಗೌಡ ನಗರ. ಎಫ್-76 ವ್ಯಾಪ್ತಿಯ ಅರಣ್ಯ ಕ್ವಾಟರ್ಸ್, ಜಾಗೃತಿ ನಗರ, ರೇಷ್ಮೇ ಇಲಾಖೆ, ಟೀರ‍್ಸ್ ಕಾಲೋನಿ, ಈದ್ಗಾ ಮೈದಾನ, ರಾಮಾಂಜೀನೇಯ ನಗರ.

ಎಫ್-77 ವ್ಯಾಪ್ತಿಯ ಒಪಿಡಿ, ಶಾಂತಿ ನಗರ, ಕೊಳಗಲ್ ರಸ್ತೆ, ಬಿಎಂಸಿಆರ್‌ಸಿ ಕ್ಯಾಂಪಸ್.

ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande