ಇಂಡೋ-ಪೆಸಿಫಿಕ್ ಸವಾಲುಗಳ ಕುರಿತು ವೀಮರ್ ರಾಷ್ಟ್ರಗಳೊಂದಿಗೆ ಜೈಶಂಕರ್ ಚರ್ಚೆ
ಪ್ಯಾರಿಸ್, 08 ಜನವರಿ (ಹಿ.ಸ.) : ಆ್ಯಂಕರ್ : ಫ್ರಾನ್ಸ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜರ್ಮನಿ, ಫ್ರಾನ್ಸ್ ಮತ್ತು ಪೋಲೆಂಡ್ ಒಳಗೊಂಡ ವೀಮರ್ ಗುಂಪಿನ ವಿದೇಶಾಂಗ ಸಚಿವರೊಂದಿಗೆ ಮೊದಲ ಬಾರಿಗೆ ಮಹತ್ವದ ಜಾಗತಿಕ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಭೆಯಲ್ಲ
Jaishankar-Paris-Indo-Pacific


ಪ್ಯಾರಿಸ್, 08 ಜನವರಿ (ಹಿ.ಸ.) :

ಆ್ಯಂಕರ್ : ಫ್ರಾನ್ಸ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜರ್ಮನಿ, ಫ್ರಾನ್ಸ್ ಮತ್ತು ಪೋಲೆಂಡ್ ಒಳಗೊಂಡ ವೀಮರ್ ಗುಂಪಿನ ವಿದೇಶಾಂಗ ಸಚಿವರೊಂದಿಗೆ ಮೊದಲ ಬಾರಿಗೆ ಮಹತ್ವದ ಜಾಗತಿಕ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.

ಈ ಸಭೆಯಲ್ಲಿ ಭಾರತ–ಯುರೋಪಿಯನ್ ಒಕ್ಕೂಟದ ಸಂಬಂಧಗಳ ಬಲವರ್ಧನೆ, ಇಂಡೋ-ಪೆಸಿಫಿಕ್ ಪ್ರದೇಶದ ಭೌಗೋಳಿಕ-ರಾಜಕೀಯ ಸವಾಲುಗಳು ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ವಿಶ್ಲೇಷಣೆ ನಡೆಯಿತು. ಈ ಎಲ್ಲಾ ವಿಷಯಗಳ ಕುರಿತು ಭಾರತ ತನ್ನ ನಿಲುವುಗಳನ್ನು ಮುಕ್ತ ಹಾಗೂ ಸ್ಪಷ್ಟ ಚರ್ಚೆಯ ಮೂಲಕ ಮಂಡಿಸಿದೆ ಎಂದು ಡಾ. ಜೈಶಂಕರ್ ತಿಳಿಸಿದ್ದಾರೆ.

ಸಭೆಯ ಬಳಿಕ ವೀಮರ್ ರಾಷ್ಟ್ರಗಳು ಹಾಗೂ ಭಾರತದ ಸಾಮಾನ್ಯ ನಿಲುವುಗಳನ್ನು ಜಾಗತಿಕ ಸಮುದಾಯಕ್ಕೆ ತಿಳಿಸಲು ಜಂಟಿ ಪತ್ರಿಕಾಗೋಷ್ಠಿ ಆಯೋಜಿಸಲಾಯಿತು. ಈ ಕುರಿತು ಡಾ. ಜೈಶಂಕರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಚಿತ್ರಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು ಫ್ರೆಂಚ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್ ಅವರನ್ನು ಭೇಟಿಯಾದ ಡಾ. ಜೈಶಂಕರ್, ಯುರೋಪ್ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಾರತ–ಯುರೋಪ್ ಸಂಬಂಧಗಳ ಬಲವರ್ಧನೆ ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಭಾರತ ಮತ್ತು ಫ್ರಾನ್ಸ್ ಜಾಗತಿಕ ಸ್ಥಿರತೆ ಹಾಗೂ ಸಮತೋಲನಕ್ಕೆ ಮಹತ್ವದ ಕೊಡುಗೆ ನೀಡಬಲ್ಲ ರಾಷ್ಟ್ರಗಳಾಗಿವೆ ಎಂದು ಅವರು ಹೇಳಿದರು.

ಮುಂದಿನ ಕೆಲ ವಾರಗಳಲ್ಲಿ ಭಾರತವು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಯುರೋಪಿಯನ್ ಒಕ್ಕೂಟದ ಉನ್ನತ ನಾಯಕರಿಗೆ ಆತಿಥ್ಯ ವಹಿಸಲಿದೆ ಎಂಬುದನ್ನು ಜೈಶಂಕರ್ ಮಾಹಿತಿ ನೀಡಿದರು.

ಇಂಡೋ-ಪೆಸಿಫಿಕ್‌ನ ಮಹತ್ವ

ಇಂಡೋ-ಪೆಸಿಫಿಕ್ ಪ್ರದೇಶವು ಉದಯೋನ್ಮುಖ ಜಾಗತಿಕ ಭೌಗೋಳಿಕ-ರಾಜಕೀಯ ಹಾಗೂ ಆರ್ಥಿಕ ಕೇಂದ್ರವಾಗಿದ್ದು, ಹಿಂದೂ ಮಹಾಸಾಗರದಿಂದ ಪಶ್ಚಿಮ ಪೆಸಿಫಿಕ್ ವರೆಗೆ ವ್ಯಾಪಿಸಿದೆ. ಪೂರ್ವ ಆಫ್ರಿಕಾದ ಕರಾವಳಿಯಿಂದ ಪಶ್ಚಿಮ ಪೆಸಿಫಿಕ್ ಮಹಾಸಾಗರವರೆಗೆ ಹರಡಿರುವ ಈ ಪ್ರದೇಶವು ಜಾಗತಿಕ ಜನಸಂಖ್ಯೆ, ವ್ಯಾಪಾರ ಮತ್ತು ಸಮುದ್ರ ಮಾರ್ಗಗಳಿಗೆ ಅತ್ಯಂತ ನಿರ್ಣಾಯಕವಾಗಿದೆ.

ಭಾರತ, ಚೀನಾ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳು ಈ ಪ್ರದೇಶದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿವೆ. ಭಾರತವು ಇಂಡೋ-ಪೆಸಿಫಿಕ್ ಅನ್ನು “ಮುಕ್ತ, ತೆರೆಯಾದ ಮತ್ತು ಎಲ್ಲರನ್ನೂ ಒಳಗೊಂಡ” ಪ್ರದೇಶವೆಂದು ಪರಿಗಣಿಸಿದೆ. ಕಡಲ ಭದ್ರತೆ ಮತ್ತು ಸಹಕಾರ ಬಲಪಡಿಸುವ ಉದ್ದೇಶದಿಂದ ಭಾರತ ‘ಐಪಿಒಐ’ ಉಪಕ್ರಮವನ್ನು ಮುಂದಿಟ್ಟಿದೆ.

ಇದಕ್ಕೆ ಸಮಾಂತರವಾಗಿ ಅಮೆರಿಕವು 14 ರಾಷ್ಟ್ರಗಳನ್ನು ಒಳಗೊಂಡ ‘ಐಪಿಇಎಫ್’ ಮೂಲಕ ಆರ್ಥಿಕ ಸಹಕಾರವನ್ನು ವಿಸ್ತರಿಸುವ ಪ್ರಯತ್ನ ನಡೆಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande