
ಗದಗ, 08 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರದ 2025-26 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಡಿಜಿಟಲ್ ಇ - ಸ್ಟಾಂಪ್ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಘೋಷಿಸಲಾಗಿರುತ್ತದೆ. ಈ ಕಾರಣದಿಂದಾಗಿ ಡಿಜಿಟಲ್ ಇ- ಸ್ಟಾಂಪ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಸ್ತರಿಸಲು ನಿರ್ಧರಿಸಲಾಗಿದೆ.
ನಾಗರಿಕರಿಗೆ ಆಗುವ ಪ್ರಯೋಜನೆಗಳು : ಡಿಜಿಟಲ್ ಇ - ಸ್ಟಾಂಪ್ ವ್ಯವಸ್ಥೆಯು ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗುವುದು, ನೋಂದಣಿಯೇತರ ದಸ್ತಾವೇಜಿನಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಡಿಜಿಟಲ್ ಇ ಸ್ಟಾಂಪ್ ವಿಳಂಬವನ್ನು ತಡೆಗಟ್ಟುತ್ತದೆ. ಸ್ಥಳೀಯ ನಾಗರಿಕರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಸ್ವತ: ಆನ್‌ಲೈನ್ ನಲ್ಲಿ ಕರಡು ತಯಾರಿಸಿ ಇ ಸ್ಟಾಂಪ್ ಸೃಜಿಸಿಕೊಳ್ಳಬಹುದು. ಈ ಸೇವೆ 24x7 ಲಭ್ಯ. ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಆಗಿದ್ದು ಸುರಕ್ಷತೆ, ವೇಗದ ಎಲೆಕ್ಟ್ರಾನಿಕ್ ಪಾವತಿಗಳನ್ನು 24x
7 ಮಾಡಬಹುದು. ಸ್ಟಾಂಪ್ ವಿಷಯವು ದಸ್ಥಾವೇಜಿನ ಅವಿಭಾಜ್ಯವಾಗುತ್ತದೆ.
ಇದು ದುರುಪಯೋಗವನ್ನು ತಡೆಯುತ್ತದೆ. ಆಧಾರ ಆಧಾರಿತ ಅಥವಾ ಡಿಎಸ್‌ಸಿ ಬಳಸಿ ದಸ್ತಾವೇಜುಗಳಿಗೆ ಡಿಜಿಟಲ್ ಸಹಿ ಮಾಡಬಹುದು. ಈ ವ್ಯವಸ್ಥೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ನಿರಂತರವಾಗಿ 24x7 ಲಭ್ಯವಿದೆ.
ಸಾರ್ವಜನಿಕರು ಡಿಜಿಟಲ್ ಇ - ಸ್ಟಾಂಪ್ ಸದುಪಯೋಗಪಡಿಸಿಕೊಂಡು ನೋಂದಣಿಯೇತರ ದಸ್ತಾವೇಜುಗಳಿಗೆ ಉಪಯೋಗಿಸಲು ತಿಳಿಸಿದೆ. ಈ ಲಿಂಕನ್ನು ಬಳಸಿ ಡಿಜಿಟಲ್ ಇ - ಸ್ಟಾಂಪ್ ನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP