ಡಿಜಿಟಲ್ ಇ-ಸ್ಟ್ಯಾಂಪ್ ಕುರಿತು ತರಬೇತಿ
ಶಿವಮೊಗ್ಗ, 07 ಜನವರಿ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸದಾಗಿ ಅನುಷ್ಠಾನಗೊಳಿಸುತ್ತಿರುವ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿ, ಜಿಲ್ಲೆಯ ಎಲ್ಲಾ ತಾಲೂಕು ಉಪನೊಂದಣಿ ಕಚೇರಿಗಳಲ್ಲಿ ವಿವಿಧ ದಿನಾಂಕಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ
ಡಿಜಿಟಲ್ ಇ-ಸ್ಟ್ಯಾಂಪ್ ಕುರಿತು ತರಬೇತಿ


ಶಿವಮೊಗ್ಗ, 07 ಜನವರಿ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸದಾಗಿ ಅನುಷ್ಠಾನಗೊಳಿಸುತ್ತಿರುವ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿ, ಜಿಲ್ಲೆಯ ಎಲ್ಲಾ ತಾಲೂಕು ಉಪನೊಂದಣಿ ಕಚೇರಿಗಳಲ್ಲಿ ವಿವಿಧ ದಿನಾಂಕಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜ.08ರಂದು ಬೆಳಿಗ್ಗೆ 11.30ಕ್ಕೆ ತೀರ್ಥಹಳ್ಳಿ, ಮಧ್ಯಾಹ್ನ 3.30ಕ್ಕೆ ಹೊಸನಗರ ಹಾಗೂ ಸಂಜೆ 5.00ಕ್ಕೆ ಸಾಗರ ಉಪನೊಂದಣಿ ಕಚೇರಿಗಳಲ್ಲಿ ತರಬೇತಿ ನಡೆಯಲಿದೆ. ಜ.09ರಂದು ಮಧ್ಯಾಹ್ನ 12.00ಕ್ಕೆ ಸೊರಬ ಮತ್ತು ಮಧ್ಯಾಹ್ನ 2.20ಕ್ಕೆ ಶಿಕಾರಿಪುರದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.13ರಂದು ಬೆಳಿಗ್ಗೆ 11.00ಕ್ಕೆ ಭದ್ರಾವತಿ ಮತ್ತು ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ಉಪನೊಂದಣಿ ಕಚೇರಿಗಳಲ್ಲಿ ತರಬೇತಿ ನಡೆಯಲಿದೆ.

ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯ ಕುರಿತು ಆಸಕ್ತ ಸಾರ್ವಜನಿಕರು, ಪತ್ರ ಬರಹಗಾರರು ಹಾಗೂ ವಕೀಲರು ಈ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande