ಸ್ವದೇಶಿ ಜಾಗರಣ ಮಂಚ್ ವತಿಯಿಂದ ಸ್ವದೇಶಿ ಮೇಳ
ಬೆಂಗಳೂರು, 07 ಜನವರಿ (ಹಿ.ಸ.) : ಆ್ಯಂಕರ್ : ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬೆಂಗಳೂರಿನ‌‌ ಟಿ‌ ದಾಸರಹಳ್ಳಿಯ ಎಂ.ಇ.ಐ ಮೈದಾನದಲ್ಲಿ ಇಂದಿನಿಂದ ಜನವರಿ 11 ರವರೆಗೆ ‘ಸ್ವದೇಶಿ ಮೇಳ’ ನಡೆಯಲಿದೆ.‌ ಈ ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭವು ಇಂದು ಸಂಜೆ 5.00 ಗಂಟೆಗೆ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ
Swdeshi mela


ಬೆಂಗಳೂರು, 07 ಜನವರಿ (ಹಿ.ಸ.) :

ಆ್ಯಂಕರ್ : ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬೆಂಗಳೂರಿನ‌‌ ಟಿ‌ ದಾಸರಹಳ್ಳಿಯ ಎಂ.ಇ.ಐ ಮೈದಾನದಲ್ಲಿ ಇಂದಿನಿಂದ ಜನವರಿ 11 ರವರೆಗೆ ‘ಸ್ವದೇಶಿ ಮೇಳ’ ನಡೆಯಲಿದೆ.‌

ಈ ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭವು ಇಂದು ಸಂಜೆ 5.00 ಗಂಟೆಗೆ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕರಾದ ಎಸ್. ಮುನಿರಾಜು, ಖ್ಯಾತ ಚಿಂತಕರಾದ ಚಕ್ರವರ್ತಿ‌ ಸೂಲಿಬೆಲೆ ಯವರು ಉಪಸ್ಥಿತರಿರಲಿದ್ದಾರೆ ಎಂದು ಸ್ವದೇಶಿ ಜಾಗರಣ ಮಂಚ ಸಂಚಾಲಕ ಭರತ್ ಸೌಂದರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande