ಕಲಬುರಗಿ-ಮೈಸೂರು ನಾನ್ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ
ಬಳ್ಳಾರಿ, 07 ಜನವರಿ (ಹಿ.ಸ.) : ಆ್ಯಂಕರ್ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1ರ ಕಲಬುರಗಿ ಘಟಕ-1 ರಿಂದ ಕಲಬುರಗಿ-ಮೈಸೂರು (ಅಮೋಘವರ್ಷ) ಮತ್ತು ಕಲಬುರಗಿ-ಚಿತ್ರದುರ್ಗ ನಾನ್ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ
ಕಲಬುರಗಿ-ಮೈಸೂರು ನಾನ್ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ


ಬಳ್ಳಾರಿ, 07 ಜನವರಿ (ಹಿ.ಸ.) :

ಆ್ಯಂಕರ್ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1ರ ಕಲಬುರಗಿ ಘಟಕ-1 ರಿಂದ ಕಲಬುರಗಿ-ಮೈಸೂರು (ಅಮೋಘವರ್ಷ) ಮತ್ತು ಕಲಬುರಗಿ-ಚಿತ್ರದುರ್ಗ ನಾನ್ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲುಬುರಗಿ ವಿಭಾಗ-1 ರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

ಕಲಬುರಗಿ-ಮೈಸೂರು ಬಸ್ ಸಂಚಾರವು ಕಲುಬುರಗಿ ಬಸ್ ನಿಲ್ದಾಣದಿಂದ ಸಂಜೆ 05 ಗಂಟೆಗೆ ನಿರ್ಗಮಿಸಿ ವಯಾ ಜೇವರ್ಗಿ, ಶಹಾಪೂರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ನಾಗಮಂಗಲ ಮತ್ತು ಪಾಂಡವಪುರ ಮಾರ್ಗದ ಮೂಲಕ ಬೆಳಿಗ್ಗೆ 07 ಗಂಟೆಗೆ ಮೈಸೂರು ತಲುಪುತ್ತದೆ. ಪುನಃ ಮೈಸೂರು ಬಸ್ ನಿಲ್ದಾಣದಿಂದ ಸಂಜೆ 05.30 ಗಂಟೆಗೆ ನಿರ್ಗಮಿಸಿ ಬೆಳಿಗ್ಗೆ 07.30 ಗಂಟೆಗೆ ಕಲಬುರಗಿ ಗೆ ತಲುಪುತ್ತದೆ.

ಕಲಬುರಗಿ-ಚಿತ್ರದುರ್ಗ ಬಸ್ ಸಂಚಾರವು ಕಲುಬುರಗಿ ಬಸ್ ನಿಲ್ದಾಣದಿಂದ ರಾತ್ರಿ 10.45 ಗಂಟೆಗೆ ನಿರ್ಗಮಿಸಿ ವಯಾ ಜೇವರ್ಗಿ, ಶಹಾಪೂರ, ಲಿಂಗಸೂರು, ಸಿಂಧನೂರು, ಗಂಗಾವತಿ ಮತ್ತು ಹೊಸಪೇಟೆ ಮಾರ್ಗದ ಮೂಲಕ ಬೆಳಿಗ್ಗೆ 08 ಗಂಟೆಗೆ ಚಿತ್ರದುರ್ಗ ತಲುಪುತ್ತದೆ. ಪುನಃ ಚಿತ್ರದುರ್ಗ ಬಸ್ ನಿಲ್ದಾಣದಿಂದ ರಾತ್ರಿ 07.40 ಗಂಟೆಗೆ ನಿರ್ಗಮಿಸಿ ಬೆಳಿಗ್ಗೆ 05.20 ಗಂಟೆಗೆ ಕಲಬುರಗಿ ಗೆ ತಲುಪುತ್ತದೆ.

ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕಲಬುರಗಿ ವಿಭಾಗ-1 ರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande