ಗವಿಮಠ : ಕುಸ್ತಿ ಪಂದ್ಯಾವಳಿ
ಕೊಪ್ಪಳ, 07 ಜನವರಿ (ಹಿ.ಸ.) : ಆ್ಯಂಕರ್ : ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕøತಿಕ ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ಒದಗಿಸುವ ಸೇವಾ ಕಾರ್ಯವನ್
ಗವಿಮಠ :  ಕುಸ್ತಿ ಪಂದ್ಯಾವಳಿ


ಗವಿಮಠ :  ಕುಸ್ತಿ ಪಂದ್ಯಾವಳಿ


ಗವಿಮಠ :  ಕುಸ್ತಿ ಪಂದ್ಯಾವಳಿ


ಗವಿಮಠ :  ಕುಸ್ತಿ ಪಂದ್ಯಾವಳಿ


ಗವಿಮಠ :  ಕುಸ್ತಿ ಪಂದ್ಯಾವಳಿ


ಗವಿಮಠ :  ಕುಸ್ತಿ ಪಂದ್ಯಾವಳಿ


ಕೊಪ್ಪಳ, 07 ಜನವರಿ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕøತಿಕ ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ಒದಗಿಸುವ ಸೇವಾ ಕಾರ್ಯವನ್ನು ಮಾಡುತ್ತಿದೆ.

ಗವಿಮಠದ ಆವರಣದಲ್ಲಿ ಆಹ್ವಾನಿತ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು ಕುಸ್ತಿ ಪಂದ್ಯಾವಳಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ನಾಗವೇಣಿ ಅವರು ಉದ್ಘಾಟಿಸಿ ಮಾತನಾಡಿದರು.

ಕುಸ್ತಿ ಕ್ರೀಡೆಯು ಪುರಾತನ ಕ್ರೀಡೆಯಾಗಿದ್ದು ಇದು ಒಂದು ದೇಹದಾಡ್ರ್ಯ ಚಟುವಟಿಕೆಯಾಗಿದೆ ಈ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೈಹಿಕಹಾಗೂ ಮಾನಸಿಕ ಸಮತೋಲನ ಬೆಳವಣಿಗೆಗೆ ಸಹಕಾರಿಯಾಗುವುದರ ಮೂಲಕ ಸದೃಢ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವುದರಲ್ಲಿ ಈ ಕುಸ್ತಿಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಭಾಗವಹಿಸಿದ ಪುರುಷರ ವಿಭಾಗದಲ್ಲಿ ಆಹ್ವಾನಿತ16 ತಂಡಗಳಲ್ಲಿಪ್ರಥಮ ಪಂದ್ಯದಲ್ಲಿ ಅಭಿ ಹನುಮನಹಳ್ಳಿ ಪ್ರಥಮ ತಾಯಪ್ಪ ಹೊಸಪೇಟೆ ದ್ವಿತೀಯ, ದ್ವಿತೀಯ ಪಂದ್ಯದಲ್ಲಿಪ್ರಜ್ವಲ್ ಹಂಪಿಕಟ್ಟಿ ಪ್ರಥಮ ಸ್ಥಾನ ಮೌಲಾ ಗಂಗಾವತಿ ದ್ವಿತೀಯ ಸ್ಥಾನ,ತೃತೀಯ ಪಂದ್ಯದಲ್ಲಿ ಪರಶುರಾಮ ಹೊಸಪೇಟೆ ಪ್ರಥಮ ಸ್ಥಾನ ಮಹೇಂದ್ರ ಅಗ್ರಿಬೊಮ್ಮನಹಳ್ಳಿ ದ್ವಿತೀಯ ಸ್ಥಾನ,ಚಥುರ್ತ ಪಂದ್ಯದಲ್ಲಿಹರೀಶ್ ಹೊಸಪೇಟೆ ಪ್ರಥಮ ಸ್ಥಾನ,ಅಲ್ತಾಫ್ ಹಗರಿಬೊಮ್ಮನಹಳ್ಳಿ ದಿತೀಯ, ಐದನೇ ಪಂದ್ಯದಲ್ಲಿ ರಮೇಶ್,ಹೊಸಪೇಟೆ ಪ್ರಥಮ ಸ್ಥಾನ ಶ್ರೀ ಎಚ್ ಬಿ ಹಳ್ಳಿ ಇರ್ಫಾನ್ ದ್ವಿತೀಯ ಸ್ಥಾನ,ಆರನೇ ಪಂದ್ಯದಲ್ಲಿಇರ್ಫಾನ್ ಹೆಚ್.ಬಿ.ಹಳ್ಳಿ ಪ್ರಥಮ ಸ್ಥಾನ ಕೀರ್ತಿ ಹೊಸಪೇಟೆ ದ್ವಿತೀಯ ಸ್ಥಾನ,ಏಳನೇ ಪಂದ್ಯದಲ್ಲಿಹುಲ್ಕಜ್ಜಿ ಎಚ್ ಬಿ ಹಳ್ಳಿ ಪ್ರಥಮ ಸ್ಥಾನ ಅಲ್ತಾಫ್ ಕೊಪ್ಪಳ ದ್ವಿತೀಯ ಸ್ಥಾನ ಎಂಟನೇ ಪಂದ್ಯದಲ್ಲಿ ಗಂಗಾಧರ್ ಎಚ್ಪಿ ಹಳ್ಳಿ ಪ್ರಥಮ ಸ್ಥಾನ ಸುರೇಶ್ ಬೆಳಗಾವಿ ದ್ವಿತೀಯ ಸ್ಥಾನ ಒಂಬತ್ತನೇಯ ಪಂದ್ಯದಲ್ಲಿ ಸಚಿನ್ ಮೌಲಿ ಪ್ರಥಮ ಸ್ಥಾನ ಮಹೇಶ್ ಶರಣಯ್ಯ ಗುಲ್ಬರ್ಗಾ ದ್ವಿತೀಯ, ಹತ್ತನೇ ಪಂದ್ಯದಲ್ಲಿ ಯೋಗೇಶ್‍ಪೈ ಪ್ರಥಮ ಸ್ಥಾನ ಶ್ರೀಕಾಂತ್ ದ್ವಿತೀಯ ಸ್ಥಾನ ಹನ್ನೋಂದನೇ ಪಂದ್ಯದಲ್ಲಿ ಅಮರೇಶ್ ಗುಲ್ಬರ್ಗ ಪ್ರಥಮ ಸ್ಥಾನ ಶ್ರೀ ಪವರ್ ದ್ವಿತೀಯ ಸ್ಥಾನ ಹನ್ನರಡನೇಯ ಪಂದ್ಯದಲಿ ಹನುಮಂತ್ ಅರಸಿಕೆರೆ ಪ್ರಥಮ ಸ್ಥಾನ ಮಂಜುನಾಥ್ ಹೊಸಪೇಟೆ ದ್ವಿತೀಯ ಸ್ಥಾನ ಹದಿಮೂರನೇಯ ಪಂದ್ಯದಲ್ಲಿ ಕೆಂಚಪ್ಪ ಹರಪನಹಳ್ಳಿ ಪ್ರಥಮ ಸ್ಥಾನ ಬಾಬುರಾವ್ ಕೊಲ್ಲಾಪುರ ದ್ವಿತೀಯ, ಹದಿನಾಲ್ಕನೇಯ ಪಂದ್ಯದಲ್ಲಿ ಬಸವರಾಜ ಪಾಟೀಲ್ ಪ್ರಥಮ ಪಪ್ಪು ಕೊಲ್ಲಾಪುರ ದ್ವಿತೀಯ ಸ್ಥಾನ, ಹದಿನೈದನೇಯ ಪಂದ್ಯದಲ್ಲಿ ಹನುಮಂತ ಮರಿಯಮ್ಮನಹಳ್ಳಿ ಪ್ರಥಮ, ಬಾಲಾಜಿ ಪಾಟೀಲ್ ದಿತೀಯ, ಹದಿನಾರನೇ ಪಂದ್ಯದಲ್ಲಿ ಕಾರ್ತಿಕ್ ಕಾಟಿ ರಾಣೆಬೆನ್ನೂರು ಪ್ರಥಮ ಸ್ಥಾನ ಸತೀಶ್ ಮಹಾರಾಷ್ಟ್ರ ದ್ವಿತೀಯ ಸ್ಥಾನ ಪಡೆದರು.

ಪಂದ್ಯಾವಳಿಯಲ್ಲಿ ದೈಹಿಕ ನಿರ್ದೇಶಕರಾದ ಜಯರಾಮ ಮರಡಿತೋಟದ,ಮಂಜುನಾಥ ಆರೆಂಟನೂರ, ಈಶಪ್ಪ ದೊಡ್ಡಮನಿ.ವಿನೋದ ಮುದಿಬಸನಗೌಡ್ರ, ದೈಹಿಕ ಶಿಕ್ಷಕರಾದ ರಾಜು.ಮಗಿಮಾವಿನಹಳ್ಳಿ ಹಾಗೂ ರಾಜು ಎಸ್ ಭಾಗವಹಿಸಿದ್ದರು.

ಭಾಗವಹಿಸಿದ ಮಹಿಳಾ ವಿಭಾಗದಲ್ಲಿ ಆಹ್ವಾನಿತ 8 ತಂಡಗಳಲ್ಲಿಪ್ರಥಮ ಪಂದ್ಯದಲ್ಲಿಗದಗನ ಐಶ್ವರ್ಯ ಪ್ರಥಮ, ದ್ವಿತೀಯ ಪಂದ್ಯದಲ್ಲಿಕುಕನೂರಿನ ಅರಿಫಾ ಪ್ರಥಮ ಸ್ಥಾನ, ತೃತೀಯ ಪಂದ್ಯದಲ್ಲಿ ಹೋಸಪೇಟೆಯ ಸಿಂಧೂ ಪ್ರಥಮ ಸ್ಥಾನ, ಚಥುರ್ತ ಪಂದ್ಯದಲ್ಲಿ ಹೊಸಪೇಟೆಯ ಕವಿತಾ ಪ್ರಥಮ ಐದನೇ ಪಂದ್ಯದಲ್ಲಿ ಜಲಜಾಕ್ಷಿ ಪ್ರಥಮ ಸ್ಥಾನ ಆರನೇ ಪಂದ್ಯದಲ್ಲಿ ಶಿವಮೊಗ್ಗದ ಸಾತಿಯಾ ಪ್ರಥಮ ಸ್ಥಾನ ಏಳನೇ ಪಂದ್ಯದಲ್ಲಿ ಗದಗನ ವೈಷ್ಣವಿ ಪ್ರಥಮ ಸ್ಥಾನ ಎಂಟನೇ ಪಂದ್ಯದಲ್ಲಿ ಕಂಪ್ಲಿಯ ಬಿಂದಿಯಾ ಪ್ರಥಮ ಸ್ಥಾನ ಪಡೆದಿದ್ದಾರೆ.

ಪಂದ್ಯಗಳ ರೆಫರಿಯಾಗಿ ಸಣ್ಣದುರುಗಪ್ಪ ಹಾಗೂ ಈರಣ್ಣ ಈಮ್ಮಡಿಯವರ ಕಾರ್ಯನಿರ್ವಹಿಸಿದರು. ಕುಸ್ತಿ ಪಂದ್ಯಾವಳಿಗಳು ಜಾತ್ರೆಗೆ ಬಂದ ಭಕ್ತಾಧಿಗಳಿಗೆ ಮನರಂಜನೆ ನೀಡಿದವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande