ಗವಿಮಠ : ಆಧ್ಯಾತ್ಮಿಕ ಕಾರ್ಯಕ್ರಮ
ಕೊಪ್ಪಳ, 07 ಜನವರಿ (ಹಿ.ಸ.) : ಆ್ಯಂಕರ್ : ಗವಿಮಠದ ಯಾತ್ರಿ ನಿವಾಸದ ಆವರಣದಲ್ಲಿ ಶಾಂತವನದಲ್ಲಿ ಕಜ್ಜಿಡೋಣಿಯ ಪರಮ ಪೂಜ್ಯ ಶ್ರೀ ಕೃಷ್ಠಾನಂದ ಶಾಸ್ತ್ರಿಗಳು ಹಾಗೂ ಬೆನಕನಹಳ್ಳಿ ಪರಮಪೂಜ್ಯ ಶ್ರೀ ದೇವಾನಂದ ಶರಣರು ಇವರುಗಳಿಂದ ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಿತು. ಕಾರ
ಗವಿಮಠ :  ಆಧ್ಯಾತ್ಮಿಕ ಕಾರ್ಯಕ್ರಮ


ಗವಿಮಠ :  ಆಧ್ಯಾತ್ಮಿಕ ಕಾರ್ಯಕ್ರಮ


ಕೊಪ್ಪಳ, 07 ಜನವರಿ (ಹಿ.ಸ.) :

ಆ್ಯಂಕರ್ : ಗವಿಮಠದ ಯಾತ್ರಿ ನಿವಾಸದ ಆವರಣದಲ್ಲಿ ಶಾಂತವನದಲ್ಲಿ ಕಜ್ಜಿಡೋಣಿಯ ಪರಮ ಪೂಜ್ಯ ಶ್ರೀ ಕೃಷ್ಠಾನಂದ ಶಾಸ್ತ್ರಿಗಳು ಹಾಗೂ ಬೆನಕನಹಳ್ಳಿ ಪರಮಪೂಜ್ಯ ಶ್ರೀ ದೇವಾನಂದ ಶರಣರು ಇವರುಗಳಿಂದ ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಗವದ್ಗೀತೆ 3ನೇ ಅಧ್ಯಾಯದ 35ನೇ ಶ್ಲೋಕದ ಬಗ್ಗೆ ಉಪನ್ಯಾಸ ನೀಡಲಾಯಿತು.

ವೇದಿಕೆಯ ಮೇಲೆ ಬಾಗಲಕೋಟೆ ಜಿಲ್ಲಾ ಕಜ್ಜಿಡೋಣಿ ಪರಮಪೂಜ್ಯ ಕೃಷ್ಠಾನಂದ ಶಾಸ್ತ್ರಿಗಳು, ಸುರಪುರ ಬೆನಕನಹಳ್ಳಿ ಪರಮಪೂಜ್ಯ ಶ್ರೀ ದೇವಾನಂದ ಶ್ರೀಗಳು ಅಜ್ಜಂಪುರದ ಪರಮಪೂಜ್ಯ ಚಿದಾನಂದಗಿರಿಗಳು ರಾಯಚೂರು ಜಿಲ್ಲೆಯ ನೀರಮಾನ್ವಿಯ ಪರಮಪೂಜ್ಯ ಹನುಮಂತರಾಯಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೋಂಡಿದ್ದರು. ಇಂದು ಕೂಡಾ ಕಾರ್ಯಕ್ರಮ ಮುಂದುವರೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande