
ಕೊಪ್ಪಳ, 07 ಜನವರಿ (ಹಿ.ಸ.) :
ಆ್ಯಂಕರ್ : ಹಿರೇಬಗನಾಳ ಗ್ರಾಮದ ಶ್ರೀ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘ ಇವರಿಂದ ಮಠದ ಆವರಣದಲ್ಲಿರುವ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹತ್ತಿರವಿರುವ ಪಾದಗಟ್ಟಿಯ ಹತ್ತಿರ ಶ್ರೀ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು.
ನಾಟಕ ಉದ್ಘಾಟಿಸಿ ಮಾತನಾಡಿದ ಭೂಕೈಲಾಸ ಮೇಲು ಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮಿಗಳು ಮಾತನಾಡಿ ನಾವುಗಳು ಗವಿಸಿದ್ಧೇಶನನ್ನು ನೋಡುವದಕ್ಕೆ ಸಾಧ್ಯವಾಗಿಲ್ಲ. ಈ ನಾಟಕದ ಮೂಲಕ ಅವರ ಪವಾಡ ಮತ್ತು ಲೀಲೆಗಳನ್ನು ಅರ್ಥೈಸಿಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ. ಕಾರಣ ಭಕ್ತಿಪ್ರಧಾನ ನಾಟಕ ವೀಕ್ಷಣೆ ಮಾಡುವುದರ ಮೂಲಕ ಗವಿಸಿದ್ಧೇಶನ ಕೃಪೆಗೆ ಪಾತ್ರರಾಗಿರಿ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್