


ಕೊಪ್ಪಳ, 07 ಜನವರಿ (ಹಿ.ಸ.) :
ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರಜಾತ್ರಾ ಮಹೋತ್ಸವದಲ್ಲಿ ದಿನಾಂಕ 5/01/2026 ರಿಂದ 8/01/2026ರವರೆಗೆ 04 ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಹಾಗೂ ಭಾರತೀಯರೆಡ್‍ಕ್ರಾಸ್ ಸಂಸ್ಥೆ, ಜಿಲ್ಲಾಘಟಕ, ಕೊಪ್ಪಳ ಇವರುಗಳ ಸಹಯೋಗದೊಂದಿಗೆ “ಬೃಹತ್‍ರಕ್ತದಾನ ಶಿಬಿರ”ವನ್ನು ಬೆಳೆಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಹಮ್ಮಿಕೊಳ್ಳಲಾಗಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದ ಬೃಹತ್‍ರಕ್ತದಾನ ಶಿಬಿರದಲ್ಲಿ ಇಂದು ವಿದ್ಯಾರ್ಥಿನಿಲಯದ ಹತ್ತಿರ ಇರುವ ಸಂಚಾರಿ ವಾಹನದಲ್ಲಿ-16 ಹಾಗೂ ಮಹಾದಾಸೋಹದ ಹತ್ತಿರ ಇರುವ ಸಂಚಾರಿ ವಾಹನದಲ್ಲಿ-50 ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ 25- ಒಟ್ಟು 91ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ9060896550 ಸಂಪರ್ಕಿಸಲು ಗವಿಮಠದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್