
ಧಾರವಾಡ, 06 ಜನವರಿ (ಹಿ.ಸ.) :
ಆ್ಯಂಕರ್ : ಧಾರವಾಡ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ (ಕುಂಬಾಪುರ ಫಾರ್ಮ)ವು ವೈಜ್ಞಾನಿಕ ಪದ್ದತಿಯಿಂದ ಗೋಡಂಬಿ ಬೆಳೆಯ ಕುರಿತು ಉಚಿತ ತರಬೇತಿ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜನವರಿ 19, 2026 ರಂದು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಗೋಡಂಬಿ ಬೆಳೆಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳು, ತಳಿಗಳ ಆಯ್ಕೆ, ತೋಟ ನಿರ್ವಹಣೆ, ಪೋಷಕಾಂಶ ನಿರ್ವಹಣೆ, ಕೀಟ-ರೋಗ ನಿಯಂತ್ರಣ ಹಾಗೂ ಕೋಯ್ಲುತ್ತರ ತಂತ್ರಜ್ಞಾನದ ಕುರಿತು ನುರಿತ ಹಾಗೂ ಅನುಭವವುಳ್ಳ ತಜ್ಞರಿಂದ ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತದೆ.
ಆಸಕ್ತ ರೈತರು ಧಾರವಾಡ ತೋ.ವಿ.ಶಿ.ಕೇಂದ್ರ, ಪ್ರಾ.ತೋ.ಸಂ.ವಿ.ಕೇಂದ್ರದ ಮುಖ್ಯಸ್ಥೆ ಡಾ. ಪಲ್ಲವಿ ಜಿ. ಮೊಬೈಲ್ ನಂ: 7892770955 ಗೆ ಜನವರಿ 17, 2026 ರೊಳಗಾಗಿ ನೊಂದಾಯಿಸಕೊಳ್ಳಬೇಕೇಂದು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa