ಜನ ಹಿತಾಸಕ್ತಿ ಕಾಪಾಡುವಲ್ಲಿ ಉಸ್ತುವಾರಿ ಸಚಿವರು ವಿಫಲ : ಬಸವರಾಜ ಸೂಳಿಭಾವಿ
ವಿಜಯಪುರ, 06 ಜನವರಿ (ಹಿ.ಸ.) : ಆ್ಯಂಕರ್ : ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟವನ್ನು ಸರ್ಕಾರದ ಅಣತಿಯೊಂದಿಗೆ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ಜನ ಹಿತಾಸಕ್ತಿ ಕಾಪಾಡುವಲ್ಲಿ ಸಚಿವ ಎಂ.ಬಿ ಪಾಟೀಲರ ವಿಫಲರಾಗಿದ್ದು, ಕೂಡಲೇ ಜನಸಾಮನ್ಯರ ಹಿತ ಕಾಪಾಡಲು ಮುಖ್ಯ ಮಂತ್ರಿಗಳು ಈ ಜಿಲ್ಲೆಗೆ ಉಸ್ತುವಾರಿ ಸಚಿ
ಪಿಪಿಪಿ


ವಿಜಯಪುರ, 06 ಜನವರಿ (ಹಿ.ಸ.) :

ಆ್ಯಂಕರ್ : ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟವನ್ನು ಸರ್ಕಾರದ ಅಣತಿಯೊಂದಿಗೆ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ಜನ ಹಿತಾಸಕ್ತಿ ಕಾಪಾಡುವಲ್ಲಿ ಸಚಿವ ಎಂ.ಬಿ ಪಾಟೀಲರ ವಿಫಲರಾಗಿದ್ದು, ಕೂಡಲೇ ಜನಸಾಮನ್ಯರ ಹಿತ ಕಾಪಾಡಲು ಮುಖ್ಯ ಮಂತ್ರಿಗಳು ಈ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಒತ್ತಾಯಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಸರ್ಕಾರಿ ಮೆಡಿಕಲ್ ಕಾಲೇಜ್ ವಿಷಯವಾಗಿ ಸಚಿವ ಡಾ.ಎಂ.ಬಿ. ಪಾಟೀಲ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದು, ಅವರನ್ನು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ದೂರ ಸರಿಯಬೇಕು, ಜನಸಾಮನ್ಯರ ಹಿತ ಕಾಪಾಡುವ ಮಂತ್ರಿಯನ್ನು ಈ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಎಂದು ಆಗ್ರಹಿಸಿದರು.

ಎಂ.ಬಿ ಪಾಟೀಲ ಗೃಹ ಕಚೇರಿ ಮುಂದೆ ಪ್ರತಿಭಟನೆ ಸಮಯದಲ್ಲಿ ಪೊಲೀಸರು ಸಮವಸ್ತ್ರ ಇಲ್ಲದೇ ಅಲ್ಲಿಗೆ ಏಕೆ ಹೋದರು? ಇದರ ಹಿಂದೆ ಯಾರ ಕೈವಾಡವಿದೆ, ಈ ಬಗ್ಗೆ ತನಿಖೆ ನಡೆಸಲು ಐಜಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕರೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಹೋರಾಟಗಳನ್ನು ಸಹಿಸಿಕೊಂಡಿಯೇ ಇಲ್ಲ, ರೈತ ವಿರೋಧಿ ಕಾಯ್ದೆ ಹಿಂದಕ್ಕೆ ಪಡೆಯಲು ರೈತರು ವರ್ಷಗಟ್ಟಲೇ ಹೋರಾಟವನ್ನು ದಮನಗೊಳಿಸಲು ಕೇಂದ್ರ ಸರ್ಕಾರ ಅನೇಕ ಷಡ್ಯಂತ್ರ ರೂಪಿಸಿತು, ಇದೇ ಮಾದರಿಯಲ್ಲಿ ಈಗ ರಾಜ್ಯ ಸರ್ಕಾರ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ದಲಿತರು ಜೈಲಿನಲ್ಲಿರಬೇಕು, ಪಾಟೀಲರು ಆಡಳಿತದಲ್ಲಿರಬೇಕೆ? ಹಿರಿಯ ದಲಿತ ಹೋರಾಟಗಾರ, ತನ್ನ ಜೀವನವನ್ನೇ ಚಳವಳಿ, ಜನಪರ ಹೋರಾಟಕ್ಕೆ ಮೀಸಲಿರಿಸಿದ ಹಿರಿಯ ಪತ್ರಕರ್ತ ಹೊಸಮನಿ ಅವರನ್ನು ಜೈಲಿಗೆ ಕಳುಹಿಸಿರುವುದು ಎಷ್ಟು ಸರಿ? ಎಂದರು.

ಖಾಸಗಿ ಮೆಡಿಕಲ್ ಕಾಲೇಜ್ ಬಂಡವಾಳ ಹೂಡುವುದಾಗಿ ಹೇಳಿದ ನಗರ ಶಾಸಕರು ಈ ಹೋರಾಟ ದಮನಿಸುವ ಕೆಲಸ ಮಾಡಿರಬಹುದು, ಈ ಎಲ್ಲ ವಿದ್ಯಮಾನಗಳನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದರು.

ಈ ವಿಷಯದಲ್ಲಿ ಸಚಿವ ಶಿವಾನಂದ ಪಾಟೀಲರಿರು ಸೇರಿದಂತೆ ಎಲ್ಲರಿಗೂ ಈ ವಿಷಯದಲ್ಲಿ ಜವಾಬ್ದರಿ ಇದೆ, ಸಚಿವ ಶಿವಾನಂದ ಪಾಟೀಲರು ಹಾವೇರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸಿ ಹೆಸರು ಗಳಿಸಿದ್ದಾರೆ, ಇದೇ ರೀತಿ ಹೆಸರು ಗಳಿಸುವ ಚಿಂತನೆ ಸಚಿವ ಡಾ.ಎಂ.ಬಿ. ಪಾಟೀಲರಲ್ಲಿ ಏಕೆ ಬರುತ್ತಿಲ್ಲ ಎಂದರು. ನಮಗೆ ಎಂ.ಬಿ. ಪಾಟೀಲರ ವಿರೋಧವಿಲ್ಲ, ಹೋರಾಟಗಾರರ, ಜನರ ಟಾರ್ಗೆಟ್ ಆಗಬಾರದು ಎಂದರು.

ಹೋರಾಟಗಾರರನ್ನು ಜೈಲಿಗೆ ಹಾಕಿದರೂ ಅಲ್ಲಿಯೂ ಹೋರಾಟ ನಡೆಸಲಿದ್ದಾರೆ, ಇದನ್ನು ದಮನಗೊಳಿಸುವ ಪ್ರಯತ್ನದಿಂದ ಹೋರಾಟ ನಿಲ್ಲದು, ಮುಖ್ಯಮಂತ್ರಿಗಳು ದಿ.೯ ರಂದು ಜಿಲ್ಲೆಗೆ ಆಗಮಿಸಲಿದ್ದು, ಅಲ್ಲಿ ಸ್ಪಷ್ಟವಾದ ಸಂದೇಶವನ್ನು ರವಾನಿಸಬೇಕು, ಒಂದು ವರ್ಷ ಬೇಕಾದರೂ ತೆಗೆದುಕೊಳ್ಳಲಿ, ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿಯೇ ಹೋಗಬೇಕು ಎಂದು ಒತ್ತಾಯಿಸಿದರು.

ಬಂಧನಕ್ಕೊಳಗಾಗಿರುವ ಎಲ್ಲ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು, ಎಫ್‌ಐಆರ್ ನೋಡಿದಾಗ ಅಲ್ಲಿ ಸುಳ್ಳು ತಾಂಡವವಾಡುತ್ತಿದೆ, ಪೊಲೀಸರು ಸುಳ್ಳು ಎಫ್‌ಐಆರ್ ದಾಖಲಿಸುವ ಮೂಲಕ ಸಿದ್ಧರಾಮಯ್ಯ ಸರ್ಕಾರವನ್ನು ಬೆತ್ತಲೆಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಪೊಲೀಸರಿಗೆ ಮೊದಲು ಸಂವಿಧಾನ ಓದಿಸಬೇಕು, ಈ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ, ಸಂವಿಧಾನದ ಪ್ರತಿಯನ್ನು ಪ್ರತಿ ಪೊಲೀಸ್ ಠಾಣೆಯಲ್ಲಿ ಇರಿಸಬೇಕು, ಅದನ್ನು ಓದಲು ಹೇಳಬೇಕು, ನಾವು ಯಾರನ್ನೂ ಅವಮಾನಿಸುತ್ತಿಲ್ಲ, ಜಿಲ್ಲೆಯ ಹಿತಾಸಕ್ತಿಗಾಗಿ ಹೋರಾಟ ನಡೆಯುತ್ತಿದೆ, ಈ ಬೇಡಿಕೆ ಈಡೇರಲಿ ಎಂಬುದು ನಮ್ಮ ಸದಾಶಯ, ಜನಪ್ರತಿನಿಧಿಗಳು ಈ ಆಶಯವನ್ನು ಈಡೇರಿಕೆಗೆ ಆದ್ಯತೆ ನೀಡಬೇಕು ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗೆ ಯಾವ ವ್ಯತ್ಯಾಸವೂ ಇಲ್ಲ, ಪಿಪಿಪಿ ಎನ್ನುವುದು ಬಿಜೆಪಿ ಬಳವಳಿ, ಬಿಜೆಪಿ ನಾಯಕರು ಪಿಪಿಪಿ ವ್ಯವಸ್ಥೆಯನ್ನು ಮೊದಲು ಧಿಕ್ಕರಿಸಿ ಮಾತನಾಡಬೇಕು, ಪಿಪಿಪಿ ಇಲ್ಲಿ ಅಷ್ಟೇ ಅಲ್ಲ ಎಲ್ಲಿಯೂ ಪಿಪಿಪಿ ಇರಬಾರದು ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರ ಪ್ರಭುಗೌಡ ಪಾಟೀಲ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಅಕ್ಷಯಕುಮಾರ ಅಜಮನಿ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande