ದೇಹದ ದಾನಗಳಿಂದ ಪಡೆದ ಅಂಗಾಂಗಗಳ ಕಸಿ ಚಿಕಿತ್ಸೆಗೆ ಜಾಗೃತಿ ಅಗತ್ಯ
ದೇಹದ ದಾನಗಳಿಂದ ಪಡೆದ ಅಂಗಾ0ಗಳ ಕಸಿಯ ಚಿಕಿತ್ಸೆಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಥೋರ್ಯಾಸಿಕ್ ವ್ಯಾಸ್ಯಕುಲಾರ್ ಸರ್ಜರಿ ಹಾರ್ಟ್ ಅಂಡ್ ಲಂಗ್ ಟ್ರಾನ್ಸ್ ಪ್ಲ್ಯಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರ ಡಾ. ದೇವಾನಂದ್ ಅಂಗಾ0ಗ ಕಸಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಕೋಲಾರ, ೦೬ ಜನವರಿ (ಹಿ.ಸ) :

ಆ್ಯಂಕರ್ : ಪ್ರಸಕ್ತ ಕಾಲಘಟ್ಟದಲ್ಲಿ ಅಂಗಾಂಗಗಳ ಕಸಿಯ ಚಿಕಿತ್ಸೆಗಳು ದೇಶದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ ಮಾನವನ ದೇಹದಲ್ಲಿನ ಯಾವೂದೇ ಅಂಗಗಳು ವಿವಿಧ ಕಾರಣಗಳಿಗೆ ಸ್ಥಗಿತಗೊಂಡಾಗ ಅದನ್ನು ಕಸಿಯ ಚಿಕಿತ್ಸೆ ಅಥವಾ ಬದಲಿ ಮಾಡುವಂತ ವಿಧಾನಗಳ ವಿಜ್ಞಾನದ ನೂತನ ಸಂಶೋಧನೆಯ ಅವಿಷ್ಕಾರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಥೋರ್ಯಾಸಿಕ್ ವ್ಯಾಸ್ಯಕುಲಾರ್ ಸರ್ಜರಿ ಹಾರ್ಟ್ ಅಂಡ್ ಲಂಗ್ ಟ್ರಾನ್ಸ್ ಪ್ಲ್ಯಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರ ಡಾ. ದೇವಾನಂದ್ ಎನ್.ಎಸ್. ಅಭಿಪ್ರಾಯ ಪಟ್ಟರು.

ಕೋಲಾರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವಿಶ್ವದಲ್ಲಿಂದು ವಿಜ್ಞಾನದ ಅಧುನಿಕ ತಂತ್ರಜ್ಞಾನಗಳ ಜೀವಸೆಲೆಯ ಭರವಸೆ ನೀಡುವ ಹೃದಯ ಕಸಿ ಹಾಗೂ ಶವದ ಅಂಗಾಂಗ ದಾನದ ಭರವಸೆಗಳು ಮತ್ತು ಸವಾಲುಗಳ ಕುರಿತು ಮಾನವನಲ್ಲಿನ ಶ್ವಾಸಕೋಶ, ಹೃದಯ, ಲಿವರ್, ಕಿಡ್ನಿ, ಚರ್ಮ, ಕಣ್ಣು ಸೇರಿದಂತೆ ಅನೇಕ ಅಂಗಾಂಗಗಳನ್ನು ವರ್ಗಾಯಿಸಲು ಸಾಧ್ಯವಿದೆ. ಸಾಮಾನ್ಯವಾಗಿ ಮಾನವನಲ್ಲಿ ಎರಡು ಕಿಡ್ನಿ ಇದ್ದಾಗ ಒಂದನ್ನು ವರ್ಗಾಯಿಸ ಬಹುದು. ಲಿವರ್ ಸ್ವಲ್ಪ ಭಾಗವನ್ನು ಕಸಿ ಮಾಡ ಬಹುದು ಕೆಲವು ಬದುಕಿರುವ ವ್ಯಕ್ತಿಯಿಂದ ಪಡೆಯಬಹುದು ಇನ್ನು ಕೆಲವೊಂದನ್ನು ಮೆದುಳು ನಿಶ್ಕ್ರಿಯೆಗೊಂಡಾಗ ಪಡೆಯಬಹುದಾಗಿದೆ ಎಂದು ಉದಾಹರಿಸಿದ ಓರ್ವ ವ್ಯಕ್ತಿಯು ಮೆದುಳು ನಿಷ್ಕ್ರಿಯೆಗೊಂಡು ಮರಣ ಹೊಂದಿದ ಕೆಲವು ಗಂಟೆಗಳಲ್ಲಿ ಅಂಗಾಂಗಗಳನ್ನು ವರ್ಗಾಯಿಸಬೇಕಾಗುವುದು. ಮರಣ ಹೊಂದು ಬಹಳ ಸಮಯವಾದರೆ ಅಂಗಾ0ಗಗಳು ಪ್ರಯೋಜನಕ್ಕೆ ಬಾರದು ಹಾಗಾಗಿ ಈ ಅವಕಾಶವನ್ನು ಸದ್ಬಳಿಸಿ ಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾದ್ಯಮದ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.

ರೋಗಿಗಳಿಗೆ ದೀರ್ಘಕಾಲದವರೆಗೆ ಡಯಾಲಿಸಿಸ್ ಬೆಂಬಲ ನೀಡುವ ಮೂತ್ರಪಿಂಡ ವೈಫಲ್ಯಕ್ಕಿಂತ ಇದು ಭಿನ್ನವಾಗಿದೆ. ಹೃದಯ ವೈಫಲ್ಯಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಕಡಿಮೆ ಸಮಯ ಇರುತ್ತದೆ. ಒಮ್ಮೆ ಹೃದಯ ವಿಫಲವಾದರೆ ಇತರೆ ಅಂಗಾಂಗಗಳು ಕೂಡ ಬೇಗ ಹಾನಿಯಾಗುತ್ತದೆ ಈ ಸಂದರ್ಭದಲ್ಲಿ ಕಸಿ ಮಾಡುವ ಮೂಲಕ ಜೀವ ಉಳಿಸುವ ಏಕೈಕೆ ಅವಕಾಶವಾಗಿದೆ, ಶಸ್ತ್ರ ಚಿಕಿತ್ಸೆ ದೃಷ್ಠಿಯಿಂದ ಇದು ತುರ್ತು ಸ್ಥಿತಿಯಾಗಿದೆ. ಸಕಾಲದಲ್ಲಿ ದಾನಿಯ ಹೃದಯವು ಜೀವನ ಮತ್ತು ಸಾವಿನ ನಡುವೆ ಸೇತುವೆಯಾಗುತ್ತದೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ವೈದ್ಯಕೀಯ ಲಭ್ಯತೆ ಇದ್ದರೂ ಶವದ ಅಂಗಾಂಗ ದಾನವು ಹಲವು ಸವಾಲುಗಳನ್ನು ಒಡ್ಡುವುದು ತ್ವರಿತವಾಗಿ ವೈದ್ಯಕೀಯ ಕಾನೂನು

ಅನುಮತಿಗಳು ದಾನಿ ಮತ್ತು ಸ್ವೀಕರಿಸುವ ಆಸ್ಪತ್ರೆಗಳ ನಡುವಿನ ಸಮನ್ವತೆ ಸಹಕಾರ ನಿಯಂತ್ರಿತ ಅಂಗಾಂಗ ಹಂಚಿಕೆ ಪ್ರೋಟೋಕಾಲನ್ನು ಕಟ್ಟುನಿಟ್ಟಾಗಿ

ಪಾಲಿಸುವ ಬದ್ದತೆ, ಇದರೊಂದಿಗೆ ದುಃಖಿತ ಕುಟುಂಬದೊ0ದಿಗೆ ಸೂಕ್ಷ್ಮ ಸಮಾಲೋಚನೆಗಳನ್ನು ಸಾಮಾನ್ಯವಾಗಿ ದುರಂತ ನಡೆದ ಕೆಲವೇ ಗಂಟೆಗಳಲ್ಲಿ

ನಡೆಯ ಬೇಕಾಗಿರುವುದು ಒಂದು ಸವಾಲಾಗಿ ಪರಿಗಣಿಸ ಬೇಕಾಗುತ್ತದೆ ಎಂದರು.

ಉದಾಹರಣೆಯಾಗಿ ಕೋಲಾರದ ೨೯ ವರ್ಷದ ಕೃಷಿ ಪದವೀದರೆ ಮತ್ತು ಮಾಜಿ ರಾಷ್ಟೀಯ ಕಾರ್ಫ್ಬಾಲ್ ಕ್ರೀಡಾ ಪಟು ಚೇತನಾ ಅವರಿಗೆ ಹೇರಿಗೆಯ ೫ ತಿಂಗಳ ನಂತರ ಅವರಿಗೆ ಹಠಾತ್ ಉಸಿರಾಟದ ತೊಂದರೆ ಉಂಟಾಗಿ ಕಾರ್ಡಿಯೋಜೆನಿಕ್ ಅಘಾತಕ್ಕೆ ಒಳಗಾದರು. ಅವರಿಗೆ ತಪಾಸಣೆಯಲ್ಲಿ ಇ.ಸಿ.ಎಂ.ಓ ಸೇರಿದಂತೆ ದೀರ್ಘಕಾಲದ ಜೀವ ಬೆಂಬಲದ ಅಗತ್ಯವಿತ್ತು. ಕಾರ್ಡಿಯೋಜೆನಿಕ್ ಅಘಾತದಲ್ಲಿದ ಅವರಿಗೆ ಮೂತ್ರ ವಿಸರ್ಜನೆಯ ತೊಂದರೆ ಅನುಭವಿಸುತ್ತಿದ್ದರು ಹಲವು ಐನೋಟ್ರೋಫಿಕ್ ಬೆಂಬಲಗಳ ಅಗತ್ಯವಿತ್ತು. ಎಂದು ಹೇಳಿದರು.

ಮುಂದುವರೆಸಿದ ಕಾಡಿಯೋಥೋರಾಸಿಕ್ ನಾಳಿಯ ಶಸ್ತ್ರ ಚಿಕಿತ್ಸೆ ಹೃದಯ ಮತ್ತು ಶ್ವಾಸ ಕೋಶ ಕಸಿ ಶಸ್ತ್ರ ಚಿಕಿತ್ಸೆಯ ಸಲಹೆಗಾರರಾದ ಡಾ. ಭಾಸ್ಕರ್ ಬಿ.ವಿ ಹಾಗೂ ನಾರಾಯಣ ಹೃದಯಾಲಯದ ಡಾ. ಯಶ್ವಂತ್ ಅವರು ಮಾತನಾಡಿ, ಈ ರೀತಿಯ ಹಲವು ವೈದ್ಯಕೀಯ ಬೆಂಬಲದ ಹೊರತಾಗಿಯೂ

ಇಸಿವರ್‌ನಲ್ಲಿ ೫೦ ದಿನಗಳ ಬಳಿಕವೂ ಇವರ ಹೃದಯ ಕಾರ್ಯದಲ್ಲಿ ಯಾವೂದೇ ಸುಧಾರಣೆ ಕಂಡು ಬಾರದ ಹಿನ್ನಲೆಯಲ್ಲಿ ಸಂಬAಧಿಸಿದ ಇತರೆ ತಜ್ಞರೊಂದಿಗೆ ಚರ್ಚಿಸಿ ಅವರನ್ನು ಹೃದಯದ ಕಸಿಯ ಪಟ್ಟಿಗೆ ಸೇರ್ಪಡೆ ಮಾಡಲಾಯಿತು.

ನಂತರದಲ್ಲಿ ಸೂಕ್ತವಾದ ಶವದ ದಾನಿಯ ಹೃದಯ ಪಡೆದು ಕಸಿ ಮಾಡಲಾಯಿತು ನಂತರದಲ್ಲಿ ಅವರ ಹೃದಯವು ಕಾರ್ಯವು ತಕ್ಷಣವೇ ಸುಧಾರಣೆ ಕಂಡು ಬಂದಿತು ಇತರೆ ಅಂಗಾಂಗಗಳ ಕಾರ್ಯವು ಸಮರ್ಪವಾಗಿ ಪುನಾರಂಭಗೊ0ಡಿತು ಈವರೆಗೆ ನೀಡಲಾಗಿದ್ದ ವೆಂಟಿಲೇಟರ್ ಸಂರ್ಪಕ ಕಡಿತ ಗೊಳಿಸಿ ಸಹಜದ ಸ್ಥಿತಿಗೆ ಮರಳುವಂತಾಯಿತು ಎಂದು ವಿವರಿಸಿದರು.

ದಾನಿಯ ಒಂದು ಹೃದಯದಿಂದ ಚೇತನ ಅವರು ಬದುಕುವಂತೆ ಇನ್ನು ಹಲವಾರು ಅಂಗಾ0ಗಗಳಿ0ದ ಸುಮಾರು ೬ ಮಂದಿಗೆ ಮರು ಜೀವ ನೀಡ ಬಹುದಾಗಿದೆ. ಅದರೆ ಈ ರೀತಿ ಅಂಗಾಂಗಗಳ ದಾನದ ಪ್ರಮಾಣವು ತೀವ್ರ ಕಡಿಮೆ ಇರುವುದು. ಮೆದುಳು ನಿಷ್ಕ್ರಿಯೆಗೊಂಡು ಮರಣವನ್ನಾಪ್ಪಿದವರು ಸಾಕಷ್ಟು ಮಂದಿ ಇದ್ದರೂ ಅವರ ಕುಟುಂಬದವರು ಅಥವಾ ಮರಣ ಹೊಂದುವ ಮುನ್ನ ಆ ವ್ಯಕ್ತಿಯು ತನ್ನ ದೇಹವನ್ನು ವೈದ್ಯಕೀಯ ಕ್ಷೇತ್ರಕ್ಕೆ ದಾನ ಮೂಲಕ ಅರ್ಪಿಸಿದರೆ ಹಲವಾರು ಮಂದಿಯ ಪುನರ್ ಜೀವಕ್ಕೆ ಅವಕಾಶ ನೀಡಿದಂತಾಗುವುದು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಂದಿ ಮೆದುಳಿನ ಸಾವು. ಅಪಘಾತಗಳ ಸಾವುಗಳು ಮತ್ತು ಅನಿಯಂತ್ರಿತ ಅಧಿಕ ರಕ್ತದೊತ್ತಡದಿಂದ ಉಂಟಾಗುವ0ತ ಸಾವುಗಳು ಸಾಕಷ್ಟು ಇದ್ದರೂ ರಾಷ್ಟ್ರೀಯ ಶವ ದಾನ ದರವು ಪ್ರತಿ ದಶ ಲಕ್ಷ ಜನಸಂಖ್ಯೆಗೆ ಒಂದಕ್ಕಿ0ತ ಕಡಿಮೆ ಇದೆ ಇದು ನಮ್ಮ ಜಾಗತಿಕ ಮಾನದಂಡಗಳಿಗಿ0ತ ತೀರ ಕಡಿಮೆಯಾಗಿದೆ. ಮೂತ್ರ ಪಿಂಡ ಹಾಗೂ ಯಕೃತಿನ ಕಸಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒಪ್ಪಿಗೆ ನೀಡಿದರು ಸಹ ವಿವಿಧ ಕಾರಣಗಳಿಗೆ ಹೃದಯದ ದಾನಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ತಿಳಿಸಿದರು.

ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ಮುಖ್ಯಸ್ಥರು ಮತ್ತು ಸಲಹೆಗಾರ ಡಾ. ಸುನಿಲ್ ಕಾರಂತ್ ಮಾತನಾಡಿ, ಹೃದಯ ವೈಫಲ್ಯ ಗೊಂಡಿರುವ ರೋಗಿಗಳು ಚಿಕಿತ್ಸೆ ಅಥವಾ ಕಸಿಗಾಗಿ ಕಾಯುತ್ತಿರುವಂತ ಗಂಭೀರ ಸ್ಥಿತಿಯಲ್ಲಿ ಹೇಗೆ ಸ್ಥಿರವಾಗಿರುತ್ತಾರೆ ಎಂದು ವಿವರಿಸಿದ ಅವರು ಪ್ರಮುಖ ರಕ್ಷಣ ಕ್ರಮವಾದ ಇ.ಸಿ.ಎಂ.ಓ. ಒಂದಾಗಿದೆ. ಹೃದಯವು ತುಂಭ ದುರ್ಬಲವಾಗಿರುವ ರೋಗಿಗಳಲ್ಲಿ ರಕ್ತದೊತ್ತಡ ಮತ್ತು ಆಮ್ಲಜನಕ ಮಟ್ಟವನ್ನು ಸ್ಥಿರವಾಗಿಡಲು ಇವುಗಳ ಸಹಾಯ ಮಾಡಲಿದೆ ಎಂದು ವಿವರಿಸಿದರು.

ಚೇತನಾ ಅವರು ಮಾತನಾಡಿ, ಚಿಕಿತ್ಸೆ ಮತ್ತು ವೈದ್ಯರ ಮಾರ್ಗದರ್ಶನ ಪಾಲನೆ ಮಾಡಿದ್ದ ರಿಂದ ನಾನು ಸಾಕಷ್ಟು ಚೇತರಿಸಿ ಕೊಂಡಿದ್ದು ನನ್ನ ಮಗುವನ್ನು ಆರೈಕೆ ಮಾಡಲು ಮತ್ತು ಮರಳಿ ಕೃಷಿ ಇಲಾಖೆಯೊಂದಿಗೆ ಕೆಲಸ ನಿರ್ವಹಿಸುವಷ್ಟು ಸುಧಾರಣೆಯಾಗಿದ್ದೇನೆ. ಕಸಿ ಎಂಬುವುದು ನಿಮ್ಮ ಜೀವನವನ್ನು ಕೊನೆಗೊಳಿಸುವುದಿಲ್ಲ ನಿಮ್ಮ ಹೊಸ ಜೀವನವನ್ನು ಆರಂಭಿಸಲಿದೆ ಯಾರೋ ದಾನಿಗಳು ಅಂಗಾ0ಗಗಳು ದಾನ ಮಾಡಿದ್ದರಿಂದ ನಾನು ಇಂದು ನಿಮ್ಮ ಮುಂದೆ ಇರುವಂತಾಗಿದೆ. ನನ್ನ ಮಗುವನ್ನು ಆರೈಕೆ ಮಾಡಿಕೊಂಡು ಕುಟುಂಬದೊ0ದಿಗೆ ಬಂಧು ಬಳಗದೊಂದಿಗೆ ಇರುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಕಸಿ ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗಲಿದೆ ನಿಜ ಕೆಲವು ಸರ್ಕಾರದ ಯೋಜನೆಗಳಿಂದ ನೆರವು ಸಿಗಲಿದೆ ಇದರ ಜೂತೆಗೆ ಕೆಲವು ಸಂಘಟನೆಗಳು ಹಾಗೂ ದಾನಿಗಳಿಂದ ನೆರವು ಸಿಗಲಿದೆ. ಎಂದ ಅವರು ಕೆಲವೊಂದು ಅನಾಥ ಶವಗಳು ಹಾಗೂ ಗುರುತು ಪತ್ತೆ ಹಚ್ಚಲಾಗದ ಶವಗಳಿಂದ ಅಂಗಾಂಗಗಳು ಪಡೆಯಬೇಕಾದರೆ ಹಲವಾರು ಕಾನೂನುಗಳಿದ್ದು ಅನುಮತಿಗಳನ್ನು ಪಡೆಯ ಬೇಕಾಗಿದೆ ಎಂದು ಸ್ವಷ್ಟಪಡಿಸಿದರು.

ಚಿತ್ರ : ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಥೋರ್ಯಾಸಿಕ್ ವ್ಯಾಸ್ಯಕುಲಾರ್ ಸರ್ಜರಿ ಹಾರ್ಟ್ ಅಂಡ್ ಲಂಗ್ ಟ್ರಾನ್ಸ್ ಪ್ಲ್ಯಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರ ಡಾ. ದೇವಾನಂದ್ ಅಂಗಾಂಗ ಕಸಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande