



ಕೊಪ್ಪಳ, 06 ಜನವರಿ (ಹಿ.ಸ.) :
ಆ್ಯಂಕರ್ : ಪರಮ ಪೂಜ್ಯ ಶ್ರೀ ಮ ನಿ ಪ್ರ ಮಹಾಂತಪ್ರಭು ಮಹಾಸ್ವಾಮಿಗಳು, ವಿರಕ್ತಮಠ, ಶೇಗುಣಸಿ
ಕರ್ನಾಟಕದ ಗಡೀ ಭಾಗದ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಪರಮ ಪೂಜ್ಯರು ಇಂಗ್ಲಿಷ ಸಾಹಿತ್ಯದಲ್ಲಿ ಉನ್ನತ ವ್ಯಾಸಂಗಗೈದು ಪ್ರವಚನಕಾರರಾಗಿ, ವಾಗ್ಮಿಗಳಾಗಿ ಮತ್ತು ಕೃತಿಗಳ ರಚನಕಾರರಾಗಿ ನಾಡಿನಾಧ್ಯಂತ ಹೆಸರು ವಾಸಿಯಾಗಿದ್ದಾರೆ. ನಾಡಿನ ಐತಿಹಾಸಿಕ, ಧಾರ್ಮಿಕ ಮತ್ತು ಚಾರಿತ್ರಿಕ ಸಂಗತಿಗಳ ಬಗ್ಗೆ ತಮ್ಮ ಪ್ರವಚನಗಳಲ್ಲಿ ಮಾಹಿಗಳನ್ನು ನೀಡುತ್ತಾ ಭಕ್ತರಿಗೆ ನಾಡಿನ ಇತಿಹಾಸದ ಅರಿವು ಮೂಡಿಸುತ್ತಿದ್ದಾರೆ. ಇದರೊಂದಿಗೆ ಸರ್ವಧರ್ಮದ ಆಲೋಚನಾ ಸರಣಿಗಳನ್ನು, ವಿಚಾರಧಾರೆಗಳನ್ನು ತಮ್ಮ ಪ್ರವಚನದಲ್ಲಿ ಪ್ರಭಾವಶಾಲಿಯಾಗಿ ವಿವರಿಸುತ್ತಾರೆ. ತಮ್ಮ ಶ್ರೀಮಠದ ಮೂಲಕ ಭಕ್ತಿಯ ಬೆಳಗು ಮತ್ತು ಇತರ ಧಾರ್ಮಿಕ ಸೇವಾ ಕಾರ್ಯಕ್ರಮದ ಮೂಲಕ ನಿರಂತರ ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ.
------------------------------------------------------------
ಪರಮ ಪೂಜ್ಯ ಶ್ರೀ ಮ ಘ ಚ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಬೃಹನ್ಮಠ, ರಾಜೂರು-ಅಡ್ನೂರು, ಗದಗ
ಪರಮ ಪೂಜ್ಯ ಗುರುವರ್ಯರಾದ ಪರಮ ಪೂಜ್ಯ ಶ್ರೀ ಮ ಘ ಚ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದ ಫಲದಿಂದಾಗಿ ಶ್ರೀಮಠದ ಏಳಿಗೆಗೆ ಪ್ರಯತ್ನಿಸುತ್ತಿರುವ ಪರಮ ಪೂಜ್ಯರು ತಮ್ಮ ಗುರುಗಳ ಐದನೇ ಪುಣ್ಯಸ್ಮರಣದ ಕಾರ್ಯಕ್ರಮದ ಅಂಗವಾಗಿ ಅನೇಕ ಸಾಮಾಜಮುಖಿ ಚಟುವಟಿಕೆಗಳನ್ನು ಆಯೋಜನೆ ಮಾಡಿ ಇವುಗಳಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ, ನಿವೃತ್ತ ಯೋಧರಿಗೆ ಸನ್ಮಾನ, ನಿವೃತ್ತ ಶಿಕ್ಷರಿಗೆ ಸನ್ಮಾನ, ರೈತರಿಗೆ ಸನ್ಮಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರಲ್ಲದೇ ಅನೇಕ ಕನ್ನಡ ಶಾಲೆಗಳಲ್ಲಿ ಗುರುಗಳ ಹೆಸರಿನಿಂದ ದತ್ತನಿಧಿಯನ್ನು ಸ್ಥಾಪಿಸಿ ಬಡ ಪ್ರತಿಭಾವಂತ ಮಕ್ಕಳಿಗೆ ಧನ ಸಹಾಯ ಗೈಯುತ್ತಿರುವ ಪೂಜ್ಯರ ಸೇವೆ ಅನನ್ಯ.
------------------------------------------------------------------------------------------------------
ಬಹುಮುಖ ವ್ಯಕ್ತಿತ್ವದ ಹಿರಿಯ ಕಲಾವಿದ ದತ್ತಣ್ಣ (ಕೆ. ದತ್ತಾತ್ರೇಯ)
ಅವರ ಪೂರ್ಣ ಹೆಸರು ಹರಿಹರ ಗುಂಡುರಾವ್ ದತ್ತಾತ್ರೆಯ. ದತ್ತಣ್ಣ ಎಂದೇ ಪ್ರಸಿದ್ದರು. ತಮ್ಮ ಸರಳತೆ, ಸ್ವಾಭಾವಿಕ ಅಭಿನಯ ಮತ್ತು ಅರ್ಥಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಹಿರಿಯ ಕಲಾವಿದರಲ್ಲಿ ಪ್ರಮುಖರು. ರಂಗಭೂಮಿ, ದೂರದರ್ಶನ ಮತ್ತು ಚಲನಚಿತ್ರ — ಈ ಮೂರು ಕ್ಷೇತ್ರಗಳಲ್ಲೂ ಸಮಾನವಾಗಿ ತಮ್ಮ ಪ್ರತಿಭೆಯನ್ನು ದತ್ತಣ್ಣರವರು ಪ್ರದರ್ಶಿಸಿದ್ದಾರೆ. ದತ್ತಣ್ಣವರು ಕನ್ನಡ ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂಗಾರು ಮಳೆ, ಮೊಗ್ಗಿನ ಮನಸು, ನೆನಪಿರಲಿ, ಬುದ್ಧಿವಂತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕೆ.ಜಿ.ಎಫ್ (ರಾಜೇಂದ್ರ ದೇಸಾಯಿ ಪಾತ್ರ), ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ, ಬೆಲ್ ಬಾಟಮ್, ರಾಮ ಶಾಮ ಭಾಮ ಮೊದಲಾದ ಚಿತ್ರಗಳಲ್ಲಿ ಅವರ ಅಭಿನಯ ಮೆಚ್ಚುಗೆ ಪಡೆದಿದೆ. ಅಭಿನಯದ ಜೊತೆಗೆ ದತ್ತಣ್ಣವರ ವ್ಯಕ್ತಿತ್ವವೂ ಅತ್ಯಂತ ಪ್ರೇರಣಾದಾಯಕವಾಗಿದೆ. ಒದಿದ್ದು ಎಂಜಿನೇರಿಂಗ್ ಭಾರತದ ವಾಯುಪಡೆಯ ಕಮಾಂಡರ್ ರಾಗಿ, ಏರೋನಾಟಿಕ್ ಸಂಸ್ಥೆ ದೆಪ್ಯೂಟಿ ಜನರಲ್ ಮ್ಯಾನೆಜರರಾಗಿ ಸೇವೆಸಲ್ಲಿಸಿದ ದತ್ತಣ್ಣ ವಿದ್ಯಾರ್ಥಿದಶೆಯಲ್ಲೇ ಅವರು ರಾಜ್ಯಮಟ್ಟದ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದವರು. ಸಹಜ ಅಭಿನಯದ ಮೂಲಕ ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಘನತೆ ತಂದ ಕಲಾವಿದ ದತ್ತಣ್ಣ.
----------------------------------------------------------------
ನಾ. ಸೊಮೇಶ್ವರ (ಡಾ.ನಾರಪ್ಪ ಸೋಮೇಶ್ವರ)
ಸೋಮೇಶ್ವರ್ ಅವರು ನಾರಪ್ಪ ಹಾಗೂ ತಾಯಿ ಅಂಜನಾರವರ ಮಗನಾಗಿ 14 ಮೇ 1955 ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾಗಿದ್ದಾರೆ. ಡಾ|| ನಾ. ಸೋಮೇಶ್ವರರವರು ಮೂಢನಂಬಿಕೆಗಳ ನಿವಾರಣೆ, ಆರೋಗ್ಯ ಜಾಗೃತಿ, ಏಡ್ಸ್ ಕುರಿತು ಅನೇಕ ಸಂಘ-ಸಂಸ್ಥೆ, ಕಾಲೇಜುಗಳಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಅಸ್ಟ್ರಾಜೆನಿಕ್ ಫಾರ್ಮಾ ಇಂಡಿಯಾ ಲಿಮಿಟೆಡ್ ಸಂಸ್ಥೆಯುಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮದ ಮೂಲಕ ಜನರ ಹೃದಯ ತಟ್ಟಿದವರು. ‘ಜೀವನಾಡಿ’ ಆರೋಗ್ಯ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಬರವಣಿಗೆಗೆ ಮತ್ತು ಉಪನ್ಯಾಸಗಳೆರಡರಲ್ಲಿಯೂ ತಮ್ಮದೇ ಆದ ಶೈಲಿ ರೂಢಿಸಿಕೊಂಡವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ವೈದ್ಯವಿಶ್ವಕೋಶದಲ್ಲಿ ಇವರು ಬರೆದ ಅನುವಂಶಿಕ ರೋಗಗಳನ್ನು ಕುರಿತು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರು ದೂರದರ್ಶನದಲ್ಲಿ ವಿಜ್ಞಾನ ಹಾಗೂ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆಕಾಶವಾಣಿಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.ಇವರ ಒಟ್ಟು ಹತ್ತು ಪುಸ್ತಕಗಳು ಪ್ರಕಟಗೊಂಡಿದ್ದು ಅವುಗಳಲ್ಲಿ ಬಹಿರಂಗ ಶುದ್ಧ, ಏಳುಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು, ಬದುಕು ನೀಡುವ ಬದಲೀ ಜೋಡಣೆ, “ಪ್ರಕೃತಿಯ ಸೂಪರ್ ಕಂಪ್ಯೂಟರ್-ಮಿದುಳು, ಪ್ರಮುಖವಾದವುಗಳು. 2003 ರಲ್ಲಿ ವೈದ್ಯಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ್ಟ ಅಂತಾರಾಷ್ಟ್ರೀಯ ಪ್ರಶಸ್ತಿ, ವಿದ್ಯಾರತ್ನ-ರಾಷ್ಟ್ರೀಯ ಪ್ರಶಸ್ತಿ ಡಾ|| ಬಿ.ಸಿ. ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಎಂ. ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ, ಸ್ನೇಹ-ಸೇತು ಪ್ರಶಸ್ತಿಗಳಿಗೆ ಭಾಜನರಾದ ಮಹನಿಯರಾಗಿದ್ದಾರೆ.
------------------------------------------------------------------------------------------------------
ಜಾನಪದ ಗಾರುಡಿಗ ಕಡುಬಗೆರೆ ಮುನಿರಾಜು
ಆಧುನಿಕ ಸಂಗೀತದ ಭರಾಟೆಯಲ್ಲಿ ಜಾನಪದ ಸಂಗೀತವು ಒಂದಿಷ್ಟು ಕಣ್ಮರೆಯಾಗುತ್ತಿರುವಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಜಾನಪದವನ್ನು ಉಳಿಸುವ, ಬೆಳೆಸುವ ಹಾಗೂ ಕಲಿಸುವ ಪ್ರಯತ್ನಗಳನ್ನು ಕೆಲವು ಜಾನಪದ ಗಾಯಕರು ಕೈಗೊಂಡಿರುವುದು ಸಂತೋಷದ ಸಂಗತಿ. ಅವರಲ್ಲಿ ಕಡುಬಗೆರೆ ಮುನಿರಾಜು ಪ್ರಮುಖರು.
ಕನ್ನಡ ಜಾನಪದ ಸಂಗೀತ ಲೋಕದಲ್ಲಿ ಇಂದು ಟ್ರೆಂಡಿಂಗ್ನಲ್ಲಿರುವ ಗಾಯಕನೆಂದರೆ ಕಡುಬಗೆರೆ ಮುನಿರಾಜು. ಜಾನಪದ ಸಂಗೀತಕ್ಕೆ ಅಗತ್ಯವಿರುವ ಕಂಚಿನ ಕಂಠ, ರಾಗಪದ್ಧತಿ, ಲಯಕ್ಕೆ ತಕ್ಕ ಧ್ವನಿಯ ಏರಿಳಿತಗಳು ಈ ಎಲ್ಲ ಲಕ್ಷಣಗಳನ್ನು ಹೊಂದಿರುವ ಮುನಿರಾಜುವರು.
ಬೆಂಗಳೂರು ಸಮೀಪದ ಕಡುಬಗೆರೆ ಗ್ರಾಮದಲ್ಲಿ ಜನಿಸಿದ ಇವರು, ಗ್ರಾಮೀಣ ಸಂಸ್ಕøತಿ, ಭಾμÉ, ಭಾವ, ರಾಗ, ತಾಳ ಮತ್ತು ಲಯಗಳನ್ನು ಬಾಲ್ಯದಲ್ಲೇ ಅರಿತುಕೊಂಡವರು. ಮಾತೃಭೂಮಿ ಸಂಘದ ಸಂಚಾಲಕರಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಜಾಗೃತಿ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದರ ಜೊತೆಗೆ ಸಾಕ್ಷರತಾ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಸಾಕ್ಷರತೆಯ ಮಹತ್ವವನ್ನು ಸಾರಿದ್ದಾರೆ. ಕಾಲಜ್ಞಾನಿ ನೀಲಿ ಸಿದ್ದಪ್ಪಾಜಿಯ ಕಥಾ ಪ್ರಸಂಗದ ‘ಆದಿ ಜ್ಯೋತಿ ಬನ್ನಿ, ಜ್ಯೋತಿ ಬನ್ನಿ’ ಎಂಬ ಜಾನಪದ ಹಾಡು ಇವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟ ಗೀತೆ. ಈ ಗೀತೆ ಜಾನಪದ ಲೋಕದಲ್ಲಿ ಅವರಿಗೆ ಶಾಶ್ವತ ಸ್ಥಾನವನ್ನು ನೀಡಿತು.
1992–93ರಿಂದಲೇ ಜಾನಪದ ಗೀತೆಗಳ ಮೇಲಿನ ಹವ್ಯಾಸವನ್ನು ಬೆಳೆಸಿಕೊಂಡಿರುವ ಕಡುಬಗೆರೆ ಮುನಿರಾಜು, ಚಲನಚಿತ್ರಗಳಿಗೆ ಹಾಡುವ ಮೂಲಕ ಸಿನಿಮಾಲೋಕಕ್ಕೂ ಕಾಲಿಟ್ಟರು. ಇದುವರೆಗೆ 40ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಅವರು ಹಾಡಿದ್ದಾರೆ. ಜನಮನದಲ್ಲಿ “ಜಾನಪದ ಗಾರುಡಿಗ” ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಮುನಿರಾಜು, ಈಗಾಗಲೇ ಹಲವಾರು ಜಾನಪದ ಆಲ್ಬಮ್ಗಳನ್ನು ಬಿಡುಗಡೆ ಮಾಡಿದ್ದಾರೆ.
---------------------------------------------------------------------
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಪ್ರಾಣೇಶ ಗಂಗಾವತಿ ಖ್ಯಾತ ಹಾಸ್ಯ ಕಲಾವಿದರು
ಗಂಗಾವತಿ ಪ್ರಾಣೇಶ (ಜನನ: 8 ಸೆಪ್ಟೆಂಬರ್ 1960) ಕನ್ನಡ ನಾಡಿನ ಜನಪ್ರಿಯ ಹಾಸ್ಯ ಕಲಾವಿದ, ವಾಗ್ಮಿ ಹಾಗೂ ಸಮಾಜ ಚಿಂತಕನಾಗಿ ಗುರುತಿಸಿಕೊಂಡವರು. ‘ಗಂಗಾವತಿ ಬೀಚಿ’, ‘ಜೂನಿಯರ್ ಬೀಚಿ’ ಎಂಬಪ್ರಸಿದ್ಧರು. ಲೋಕಾನುಭವಗಳನ್ನು ಹಾಸ್ಯದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಅಪೂರ್ವ ಕಲೆಗಾರ.
ಕನ್ನಡದ ಜನಪ್ರಿಯ ಟಾಕ್ ಶೋ “ಹರಟೆ” (Harate) Guest Speaker, Weekend with Ramesh (Season 3) ಮುಂತಾದ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿಥಿ ಭಾಷಣಕಾರರಾಗಿ ಭಾಗವಹಿಸಿವರು. ಅಲ್ಲದೆ Comedy Kiladigalu, Kannadada Kanmani ಮೊದಲಾದ ರಿಯಾಲಿಟಿ ಶೋಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ, ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದವರು. ಪ್ರಾಣೇಶವರು ಕರ್ನಾಟಕ ರಾಜ್ಯದ ಸುಮಾರು 1000ಕ್ಕೂ ಹೆಚ್ಚು ಸ್ಥಳಗಳಲ್ಲಿ 5,500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇದಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ದುಬೈ, ಸಿಂಗಪುರ, ಇಂಗ್ಲೆಂಡ್ ಸೇರಿದಂತೆ 11 ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ಮಾಡಿ, ವಿದೇಶದಲ್ಲಿರುವ ಕನ್ನಡಿಗರಿಗೆ ತಮ್ಮ ಹಾಸ್ಯದ ಸೊಗಡನ್ನು ತಲುಪಿಸಿದ್ದಾರೆ. ಹಾಸ್ಯೋತ್ಸವಗಳ ಮೂಲಕವೂ ಅವರು ಕನ್ನಡ ನಾಡಿನಲ್ಲಿ ಹೊಸ ಚಳವಳಿಗೆ ನಾಂದಿ ಹಾಡಿದ್ದಾರೆ. ಬಸವರಾಜ ಮಹಾಮನಿ ನರಸಿಂಹ ಜೋಶಿ ಮುಂತಾದ ಕಲಾವಿದರೊಂದಿಗೆ ಸೇರಿ “ಹಾಸ್ಯೋತ್ಸವ”, “ಹಾಸ್ಯ ಸಂಜೆ”, “ಹ್ಯೂಮರ್ ಫೆಸ್ಟಿವಲ್” ಎಂಬ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮಗಳನ್ನು ಆರಂಭಿಸಿ, ಹಾಸ್ಯವನ್ನು ಜನೋತ್ಸವದ ರೂಪಕ್ಕೆ ತಂದವರು. ಪ್ರಾಣೇಶ ಸಾಹಿತ್ಯ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಗಮನಾರ್ಹ. “ನಗಿಸುವವನ ನೋವುಗಳು”, “ವಾಘ್ಬಾಣಗಳು”, “ಪ್ರಾಣೇಶ ಪಯಣ”, ಪ್ರಾಣೇಶ ಪಂಚ್”, “ನಕ್ಕವ ಗೆದ್ದವ” ಸೇರಿದಂತೆ ಐದುಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಪ್ರತೀ ಬುಧವಾರ ವಿಶ್ವವಾಣಿ ಕನ್ನಡ ಪತ್ರಿಕೆಯ ಅಂಕಣಕಾರರಾಗಿ, ‘ಮುಸ್ಸಂಜೆ ಮಾತು’ ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಲನಚಿತ್ರರಂಗಕ್ಕೂ ಪ್ರವೇಶ ಪಡೆದವರು. ನಗುವಿನ ಮೂಲಕ ಬದುಕಿನ ಸತ್ಯಗಳನ್ನು ಹೇಳುವ, ಸಮಾಜವನ್ನು ಸಂವೇದನಾಶೀಲವಾಗಿಸುವ, ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಹೆಮ್ಮೆ ತರುವ ಮಹತ್ವದ ಹಾಸ್ಯ ಕಲಾವಿದರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್