
ಕೊಪ್ಪಳ, 06 ಜನವರಿ (ಹಿ.ಸ.) :
ಆ್ಯಂಕರ್ : ಸಾಯಂಕಾಲ 6:00ಗೆ ಕೈಮಠದ ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.. ಕಾರ್ಯಕ್ರಮದ ಸಾನಿಧ್ಯವನ್ನು ಶೇಗುಣಸಿ ವಿರಕ್ತಮಠದ ಪರಮಪೂಜ್ಯ ಶ್ರೀಮನಿಪ್ರ ಮಹಾಂತಪ್ರಭು ಮಹಾಸ್ವಾಮಿಗಳು ಹಾಗೂ ಗದಗ -ರಾಜೂರ- ಅಡ್ನೂರ ಬ್ರಹನ್ಮಠದ ಪರಮಪೂಜ್ಯ ಶ್ರೀಮ.ಘ.ಚಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.
ಬೆಂಗಳೂರಿನ ವೈದ್ಯರು ಲೇಖಕರು ಹಾಗೂ ಕ್ವಿಜ್ ಮಾಸ್ಟರ್(ಥಟ್‍ಅಂತ ಹೇಳಿ) ಕಾರ್ಯಕ್ರಮದ ಖ್ಯಾತಿಯಡಾ.ನಾ ಸೋಮೇಶ್ವರ ಇವರು ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಿರುತೆರೆ ಮತ್ತು ಹಿರಿತೆರೆ ಕಲಾವಿದರಾದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಇವರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ಮುನಿರಾಜು ಕಡಬಿಗೆರಿ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಜನಪದ ಛಾವಡಿ ಕಾರ್ಯಕ್ರಮ ನಡೆಯಲಿದೆ. ಗಂಗಾವತಿಯ ಬಿ.ಪ್ರಾಣೇಶ್ ಇವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಇದೆ ಎಂದು ಶ್ರೀಮಠದ ತಿಳಿಸಿದೆ.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳ್ಳುವ ಇತರ ಪರಮಪೂಜ್ಯರು: ಜಾತ್ರಾ ಮಹೋತ್ಸವದಲ್ಲಿ ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಶ್ರೀಮನಿಪ್ರಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಹಳ್ಳಿ ಹಿರೇಮಠದ ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಗುಂದಿಕೊಪ್ಪಶಾಖಾಶಿವಯೋಗ ಮಂದಿರದ ಶ್ರೀಮನಿಪ್ರ ಶಿವಬಸವಮಹಾಸ್ವಾಮಿಗಳು, ಬಿಜಕಲ್‍ಶ್ರೀಮನಿಪ್ರಶಿವಲಿಂಗ ಮಹಾಸ್ವಾಮಿಗಳು, ಭಾಗ್ಯನಗರದ ಶ್ರೀ ಶಂಕರಮಠದ ಶ್ರೀ ಸದ್ಗುರು ಶಿವರಾಮ ಕೃಷ್ಣನಂದಸ್ವಾಮಿಗಳು, ಹೂವಿನಹಡಗಲಿ ಶಾಖಾ ಗವಿಮಠದ ಪೂಜ್ಯರಾದ ಶ್ರೀಮನಿಪ್ರ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ಸಂತೆಕಲ್ಲೂರು ಮಹಾಂತೇಶ್ವರಮಠದ ಶ್ರೀ ಷಬ್ರ ಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳು, ಅಮಲಝರಿ-ಮೆಳ್ಳಿಗೇರಿಯ ಪರಮಪೂಜ್ಯ ಶ್ರೀ ಜ್ಞಾನಮಯಾನಂದ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್