ನಕಲಿ ಪೊಲೀಸ್ ಆರೋಪಿ, ಪೊಲೀಸರ ವಶಕ್ಕೆ
ವಿಜಯಪುರ, 06 ಜನವರಿ (ಹಿ.ಸ.) : ಆ್ಯಂಕರ್ : ಪೊಲೀಸ್ ವೇಷ ಧರಿಸಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನವನಗರ ಸೆಕ್ಟರ್‌ ನಂ.26ರ ನಿವಾಸಿ ಅರುಣ ಬಂಡಿವಡ್ಡರ್ ಬಂಧಿತ ಆರೋಪಿ. ಪೊಲೀಸ್ ಅಧಿಕಾರಿ ವೇಷ ಧರಿಸಿ ಮೋಟಾರ್ ಸೈಕಲ್‌ನಲ್ಲಿ ಬಂ
ನಕಲಿ ಪೊಲೀಸ್ ಆರೋಪಿ, ಪೊಲೀಸರ ವಶಕ್ಕೆ


ವಿಜಯಪುರ, 06 ಜನವರಿ (ಹಿ.ಸ.) :

ಆ್ಯಂಕರ್ : ಪೊಲೀಸ್ ವೇಷ ಧರಿಸಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವನಗರ ಸೆಕ್ಟರ್‌ ನಂ.26ರ ನಿವಾಸಿ ಅರುಣ ಬಂಡಿವಡ್ಡರ್ ಬಂಧಿತ ಆರೋಪಿ. ಪೊಲೀಸ್ ಅಧಿಕಾರಿ ವೇಷ ಧರಿಸಿ ಮೋಟಾರ್ ಸೈಕಲ್‌ನಲ್ಲಿ ಬಂದ ಆರೋಪಿ, ಅನಿಲ ಎಂಬುವವರನ್ನು ಬೆದರಿಸಿ 2 ಸಾವಿರ ಕಿತ್ತುಕೊಂಡು ಪರಾರಿಯಾಗಿದ್ದ.

ನಗದು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್‌ ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande