ದಾಖಲೆ ಬರೆದ ಸಿದ್ದರಾಮಯ್ಯ ; ವಿಜಯಪುರದಲ್ಲಿ ಸಂಭ್ರಮಾಚರಣೆ
ಮುಖ್ಯಮಂತ್ರಿ ಗಳಾಗಿರುವ
ಸಿಎಂ


ವಿಜಯಪುರ, 06 ಜನವರಿ (ಹಿ.ಸ.) :

ಆ್ಯಂಕರ್ : ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ.‌ ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದಲ್ಲಿ ಡಿ ದೇವರಾಜ್ ಅರಸುರವರ ಏಳು ವರ್ಷ 2139 ದಿನಗಳ ಸುದೀರ್ಘ ಅವಧಿಯ ಮುಖ್ಯಮಂತ್ರಿಯ ದಾಖಲೆಯನ್ನು ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ದಾಟಿ ಮುನ್ನುಗ್ಗುತ್ತಿರುವ ನಿಮಿತ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೋಹನ ದಳವಾಯಿ , ಸತೀಶ್ ಅಡವಿ, ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೀರಪ್ಪ ಜುಮನಾಳ, ಕುರುಬ ಸಮಾಜ ಮುಖಂಡರಾದ ದೇವಕಾಂತ ಬಿಜ್ಜರಗಿ, ವಾಗ್ಮಿಗಳಾದ ಮೋಹನ ಮೇಟಿ ಇನ್ನಿತರ ಸಮಾಜ ಮುಖಂಡರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande