ವಿಶೇಷ ಮಕ್ಕಳ ಪುನರ್ವಸತಿಗಾಗಿ ಬಸ್ ವಿತರಣೆ
ಬೀದರ್, 06 ಜನವರಿ (ಹಿ.ಸ.) : ಆ್ಯಂಕರ್ : ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ, ಬೀದರ್ ನಗರದ ಉಟಗೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಮಕ್ಕಳ ಪುನರ್ವಸತಿಗಾಗಿ ಬಸ್ ವಿತರಣೆ ಕಾರ್ಯಕ್ರಮವನ್ನು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ
Khandre


ಬೀದರ್, 06 ಜನವರಿ (ಹಿ.ಸ.) :

ಆ್ಯಂಕರ್ : ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ, ಬೀದರ್ ನಗರದ ಉಟಗೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಮಕ್ಕಳ ಪುನರ್ವಸತಿಗಾಗಿ ಬಸ್ ವಿತರಣೆ ಕಾರ್ಯಕ್ರಮವನ್ನು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ವಿಕಲಚೇತನರು ದೇವರ ಮಕ್ಕಳು. ಅವರ ಜೀವನದಲ್ಲಿ ಆತ್ಮವಿಶ್ವಾಸ, ಗೌರವ ಹಾಗೂ ಸ್ವಾವಲಂಬನೆ ಬೆಳೆಸುವುದು ನಮ್ಮ ಸರ್ಕಾರದ ಪ್ರಮುಖ ಕರ್ತವ್ಯ” ಎಂದು ಹೇಳಿದರು. ವಿಕಲಚೇತನರ ಉಜ್ವಲ ಭವಿಷ್ಯಕ್ಕೆ ಸರ್ಕಾರ ಸಂಪೂರ್ಣವಾಗಿ ಕಂಕಣಬದ್ದವಾಗಿದ್ದು, ಅವರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳೊಂದಿಗೆ ಮುನ್ನಡೆಯಬೇಕು ಎಂಬುದೇ ಸರ್ಕಾರದ ದೃಢ ಸಂಕಲ್ಪ ಎಂದು ಅವರು ತಿಳಿಸಿದರು.

ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ, ಆರೋಗ್ಯ, ಉದ್ಯೋಗ, ಪುನರ್ವಸತಿ ಹಾಗೂ ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. “ಯಾವುದೇ ಕ್ಷೇತ್ರದಲ್ಲಿಯೂ ವಿಕಲಚೇತನರು ಹಿಂದೆ ಉಳಿಯಬಾರದು. ಸರ್ಕಾರದ ಸೌಲಭ್ಯಗಳು ಮತ್ತು ಬೆಂಬಲ ಸಮಯಕ್ಕೆ ಸರಿಯಾಗಿ ಅವರಿಗೆ ತಲುಪಬೇಕು ಎಂಬುದು ನಮ್ಮ ನಿಲುವು” ಎಂದು ಅವರು ಸ್ಪಷ್ಟಪಡಿಸಿದರು.

ವಿಶೇಷ ಮಕ್ಕಳ ಸುರಕ್ಷಿತ ಸಂಚಾರ, ಶಿಕ್ಷಣ ಹಾಗೂ ಪುನರ್ವಸತಿಗೆ ಈ ಬಸ್ ವಿತರಣೆ ಕಾರ್ಯಕ್ರಮ ಮಹತ್ವದ ಸಹಕಾರ ನೀಡಲಿದೆ ಎಂಬ ವಿಶ್ವಾಸವನ್ನೂ ಸಚಿವ ಈಶ್ವರ ಖಂಡ್ರೆ ಅವರು ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande