
ಕೊಪ್ಪಳ, 06 ಜನವರಿ (ಹಿ.ಸ.) :
ಆ್ಯಂಕರ್ : ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರತಿ ವರ್ಷದಂತೆ ಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂ ಜಾತ್ರಾ ಮಹೋತ್ಸವದಎರಡನೇ ಇಂದು ಉತ್ತರ ಕರ್ನಾಟಕದ ವಿಶೇಷ ಖಾದ್ಯವಾದ ಮಿರ್ಚಿ ವಿತರಿಸಲಾಯಿತು.
ಮಿರ್ಚಿತಯಾರಿಕೆಗೆ 25 ಕ್ವಿಂಟಾಲ್ ಹಸೆ ಹಿಟ್ಟು, 12ಬ್ಯಾರಲ್‍ಎಣ್ಣೆ, 22ಕ್ವಿಂಟಾಲ್ ಮೆಣಸಿನಕಾಯಿ, ರುಚಿಗೆ ತಕ್ಕಂತೆ ಅಜಿವಾನ, ಸಣ್ಣ ಉಪ್ಪು, ಸೊಡಾಪುಡಿ ಬಳಸಲಾಗಿದೆ.
ಮಿರ್ಚಿ ತಯಾರಿಕೆಗೆ ಐವತ್ತು ಜನರ ನಾಲ್ಕು ತಂಡದಂತೆ ಒಟ್ಟು 400ಜನ ಬಾಣಸಿಗರು ಹಾಗೂ ಅವರಿಗೆ 150 ಜನ ಸಹಾಯ ಮಾಡುವುದರ ಮೂಲಕ ಮಿರ್ಚಿ ತಯಾರಿಕೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಒಟ್ಟು 6 ಲಕ್ಷಮಿರ್ಚಿಗಳನ್ನು ವಿವಿಧ ಗ್ರಾಮದ ಬಾಣಸಿಗರು ಆಗಮಿಸಿ ತಯಾರಿಸುವುದರ ಮೂಲಕ ಸೇವೆಗೈದರು ಎಂದು ಶ್ರೀ ಗವಿಮಠದ ತಿಳಿಸಿದೆ.
ಶ್ರೀ ಗವಿಸಿದ್ಧೇಶ್ವರಜಾತ್ರಾ ಮಹೋತ್ಸವದಲ್ಲಿ ದಿನಾಂಕ 5/01/2026 ರಿಂದ 8/01/2026ರವರೆಗೆ 04 ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಹಾಗೂ ಭಾರತೀಯರೆಡ್‍ಕ್ರಾಸ್ ಸಂಸ್ಥೆ, ಜಿಲ್ಲಾಘಟಕ, ಕೊಪ್ಪಳ ಇವರುಗಳ ಸಹಯೋಗದೊಂದಿಗೆ “ಬೃಹತ್‍ರಕ್ತದಾನ ಶಿಬಿರ”ವನ್ನು ಬೆಳೆಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಹಮ್ಮಿಕೊಳ್ಳಲಾಗಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ನಿನ್ನೆ ಮತ್ತು ಇಂದು ವಿದ್ಯಾರ್ಥಿನಿಲಯದ ಹತ್ತಿರ ಇರುವ ಸಂಚಾರಿ ವಾಹನದಲ್ಲಿ-68 ಹಾಗೂ ಮಹಾದಾಸೋಹದ ಹತ್ತಿರ ಇರುವ ಸಂಚಾರಿ ವಾಹನದಲ್ಲಿ-155 ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿವ 75- ಒಟ್ಟು 298 ಜನ ಸ್ವಯಂ ಪ್ರೇರಿತರಾಗಿರಕ್ತದಾನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9060896550 ಸಂಪರ್ಕಿಸಲು ಗವಿಮಠ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್