
ಕೊಪ್ಪಳ, 05 ಜನವರಿ (ಹಿ.ಸ.) :
ಆ್ಯಂಕರ್ : ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ವರ್ಗದಲ್ಲಿರುವ ಗವಿಸಿದ್ದಪ್ಪ ಕೆಳಗೆ ಇಳಿದು ಬಂದು ಎಲ್ಲರ ಮನದಲ್ಲಿ ಇರುವಂತದ್ದು ಕಾಣಿಸುತ್ತದೆ. ಇದು ಎಲ್ಲ ವರ್ಗದ ಜನರು ಐಕ್ಯತೆಯಿಂದ ಪಾಲ್ಗೊಳ್ಳುವ ಜಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಅದ್ಭುತವಾಗಿರುವ ಚಿರಸ್ಮರಣೀಯವಾಗಿರುವ ಭಕ್ತಿ ಭಾವದ ಜಾತ್ರೆ, ಎಲ್ಲ ವರ್ಗದ ಎಲ್ಲ ಸಮಾಜದವರು ಐಕ್ಯತೆಯಿಂದ ನೆರವೇರಿಸುವಂತ ಗವಿ ಸಿದ್ದೇಶ್ವರ ಜಾತ್ರೆ. ಈ ಜಾತ್ರೆಗೆ ಬಂದವರೆಲ್ಲರೂ ಪುನೀತರಾಗಿದ್ದಾರೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa