ಕೆಜಿಎಫ್‌ನಲ್ಲಿ ಸನ್ನಡತೆಯ ಆಧಾರದ ಮೇಲೆ ಪಟ್ಟಿಯಿಂದ ರೌಡಿಗಳ ಬಿಡುಗಡೆ
ಕೆಜಿಎಫ್‌ನಲ್ಲಿ ಸನ್ನಡತೆಯ ಆಧಾರದ ಮೇಲೆ ರೌಡಿಗಳನ್ನು ಪಟ್ಟಿಯಿಂದ ಬಿಡುಗಡೆ
ಕೆಜಿಎಫ್ ನಗರದಲ್ಲಿ ನಡೆದ ರೌಡಿ ಪೆರೇಡ್‌ನಲ್ಲಿ ಎಸ್.ಪಿ ಶಿವಾಂಶು ರಜಪೂತ್ ಸನ್ನಡತೆಯ ಮೇಲೆ ರೌಡಿ ಪಟ್ಟಿಯಿಂದ ತೆಗೆಯಲಾಗಿದ್ದು, ಮುಂದೆ ಯಾವುದೇ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದರು.


ಕೋಲಾರ, ೦೫ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಮುಂಜಾಗೃತ ಕ್ರಮವಾಗಿ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ರೌಡಿ ಪೇರೆಡ್ ನಡೆಸಲಾಯಿತು. ಪೆರೇಡ್‌ನಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಾಂಶು ರಜಪೂತ್ ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಹೊಸದಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗದ ರೌಡಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಪರಿವರ್ತನೆಯಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಒಂದು ವೇಳೆ ಹಳೆ ಚಾಳಿ ಮುಂದುವರೆಸಿ ರೌಡಿ ಚಟುವಟಿಕೆಗಳನ್ನು ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿ.ಎ.ಆರ್ ಕವಾಯತು ಮೈದಾನದಲ್ಲಿ ರೌಡಿ ಪರೇಡ್ ಹಮ್ಮಿಕೊಂಡಿದ್ದು ಕೆ.ಜಿ.ಎಫ್ ಪೊಲೀಸ್ ಘಟಕದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೬೬೪ ರೌಡಿ ಶೀಟರ್‌ಗಳಿದ್ದು ಈ ಪೇರೆಡ್‌ಗೆ ಒಟ್ಟು ೨೮೦ ಜನ ಹಾಜರಾದರು. ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಸಾರ್ವಜನಿಕ ನೆಮ್ಮದಿಗೆ ತೊಂದರೆ ನೀಡಿದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಲು ತಿಳುವಳಿಕೆ ನೀಡಿ, ಒಂದು ವೇಳೆ ರೌಡಿಗಳು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಅಂತರ ವಿರುದ್ದು ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಎಚ್ಚರಿಕೆ ನೀಡಿದರು.

ಕಳೆದ ೧೦ ವರ್ಷಗಳಿಂದ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗದೆ ಇರುವ ಹಾಗೂ ನ್ಯಾಯಾಲಯಗಳಲ್ಲಿ ಯಾವುದೇ ಪ್ರಕರಣಗಳಳು ವಿಚಾರಣೆಯಲ್ಲಿ ಬಾಕಿ ಇರದ ಹಾಗೂ ಸಮಾಜದಲ್ಲಿ ಒಳ್ಳೆಯ ನಡೆತೆಯಿಂದ ಇರುವ ರೌಡಿಗಳ ವಿವರಗಳನ್ನು ಪೊಲೀಸ್ ಠಾಣೆಗಳಿಂದ ಪಡೆಯಲಾಯಿತು. ಪೆರೇಡ್ ನಲ್ಲಿ ಒಟ್ಟು ೧೮೭ ರೌಡಿ ಹಾಳೆಗಳನ್ನು ಪಟ್ಟಿ ಮಾಡಿದ್ದು, ಅವರು ಕಳೆದ ೧೦ ವರ್ಷಗಳಿಂದ ಯಾವುದೇ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಅವರ ಬಳಿ ಮುಚ್ಚಳಿಕೆ ಬರೆಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಇರುವಂತೆ ಎಚ್ಚರಿಕೆ ನೀಡಿ ಮುಕ್ತಾಯ ಮಾಡಲು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು.

ಮುಕ್ತಾಯದ ನಂತರ ಪುನಃ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಮತ್ತೆ ರೌಡಿ ಶೀಟ್ ತೆರೆಯುವುದರ ಜೊತೆಗೆ ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು. ರೌಡಿ ಪೇರೆಡ್‌ನಲ್ಲಿ ಗೈರು ಹಾಜರಾಗಿರುವ ರೌಡಿಗಳಿಗೆ ಮುಂದಿನ ದಿನಗಳಲ್ಲಿ ವೃತ್ತ ಕಛೇರಿಗಳಲ್ಲಿ ರೌಡಿ ಪೇರೆಡ್ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ರೌಡಿ ಪೆರೇಡ್‌ಗೆ ಗೈರುಹಾಜರಾದಲ್ಲಿ ಅಂತರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾಮಾಜಿಕ ಮಾಧ್ಯಮ(ಸೋಷಿಯಲ್ ಮೀಡಿಯಾ) ಗಳಲ್ಲಿ ರೌಡಿ ವರ್ತನೆಗಳನ್ನು ತೋರಿಸುವ ರೀತಿಯಲ್ಲಿ ಪೋಸ್ಟ್ ಮತ್ತು ರೀಲ್ಸ್ ಮಾಡುವವರ ವಿರುದ್ದ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ರೌಡಿ ಪೇರೆಡ್‌ನಲ್ಲಿ ಡಿ.ವೈ.ಎಸ್.ಪಿ. ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಎಸ್.ಟಿ.ಮಾರ್ಕೊಂಡಯ್ಯ, ಪಿ.ಎಂ.ನವೀನ್, ದಯಾನಂದ್, ರಂಗಶಾಮಯ್ಯ, ಆರ್.ಪಿ.ಐ ಸೋಮಶೇಖರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳಾದ ಬಿ.ಮಂಜುನಾಥ, ಚಂದ್ರಶೇಖರ್, ಗುರುರಾಜ ಚಿಂತಕಲ್, ಸಂಗಮೇಶ್ ಕೋಲ್ಹಾರ್, ಕೃಷ್ಣಮೂರ್ತಿ, ರಾಜಣ್ಣ.ಎಸ್.ವಿ. ಎನ್.ಪಿ.ಸಿಂಗ್, ಲಕ್ಷಿö್ಮನಾರಾಯಣ, ಮಲಾ.ಜಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಚಿತ್ರ : ಕೆಜಿಎಫ್ ನಗರದಲ್ಲಿ ನಡೆದ ರೌಡಿ ಪೆರೇಡ್‌ನಲ್ಲಿ ಎಸ್.ಪಿ ಶಿವಾಂಶು ರಜಪೂತ್ ಸನ್ನಡತೆಯ ಮೇಲೆ ರೌಡಿ ಪಟ್ಟಿಯಿಂದ ತೆಗೆಯಲಾಗಿದ್ದು, ಮುಂದೆ ಯಾವುದೇ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande