ಅನಾರೋಗ್ಯದಿಂದ ರಮೇಶಗೌಡ ನಿಧನ
ಪಾಟೀಲ


ವಿಜಯಪುರ, 05 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದ ರಮೇಶಗೌಡ ಚಂದ್ರಕಾಂತ ಪಾಟೀಲ (53) ಅನಾರೋಗ್ಯದಿಂದ ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಮುತ್ತಗಿ ಗೌರಿಶಂಕರ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರಾಗಿ, ಕೂಡಗಿಯಲ್ಲಿ ಅಥಣಿ ವಿಭಾಗದ ಶ್ರೀ ಮುರುಘರಾಜೇಂದ್ರ ಎಜುಕೇಶನ್ ಸೊಸೈಟಿ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರಿಗೆ ತಾಯಿ, ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಇಂದು ಮಲಘಾಣ ಗ್ರಾಮದಲ್ಲಿ ಇಂದು ಸಂಜೆ ನೆರವೇರಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande