ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ
ಕೊಪ್ಪಳ, 05 ಜನವರಿ (ಹಿ.ಸ.) : ಆ್ಯಂಕರ್ : ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ಆವರಣದಲ್ಲಿ ಕೃಷಿ ಇಲಾಖೆಯಿಂದ ಜನವರಿ 5 ರಿಂದ 7 ರವರೆಗೆ ಕೃಷಿ ಇಲಾಖೆಯಿಂದ ರೈತರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳು, ನವೀನ ತಾಂತ್ರಿಕತೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳ ಮಾಹಿತಿ
ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ


ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ


ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ


ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ


ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ


ಕೊಪ್ಪಳ, 05 ಜನವರಿ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ಆವರಣದಲ್ಲಿ ಕೃಷಿ ಇಲಾಖೆಯಿಂದ ಜನವರಿ 5 ರಿಂದ 7 ರವರೆಗೆ ಕೃಷಿ ಇಲಾಖೆಯಿಂದ ರೈತರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳು, ನವೀನ ತಾಂತ್ರಿಕತೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳ ಮಾಹಿತಿ ನೀಡುವ ಜೊತೆಗೆ ಕೃಷಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ.ಕೃಷ್ಣಮೂರ್ತಿ ಅವರು, ಈ ವರ್ಷದ ಕೃಷಿ ವಸ್ತು ಪ್ರದರ್ಶನದಲ್ಲಿ ಇಲಾಖೆಯ ಯೋಜನೆಗಳ ಪ್ರಚಾರದ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಿಕೊಂಡು, ರಾಸಾಯನಿಕ ಗೊಬ್ಬರಗಳ ಮಿತಬಳಕೆಯ ಮೂಲಕ ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಲು ಹೆಚ್ಚು ಒತ್ತು ನೀಡಲಾಗಿದೆ. ಈ ಭಾಗದ ರೈತರು ಮಣ್ಣಿನ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಸಿರಿಧಾನ್ಯಗಳ ಕೃಷಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು.

ಈ ಕೃಷಿಗೆ ಪ್ರೋತ್ಸಾಹಧನವನ್ನು ಸಹ ನೀಡಲಾಗುತ್ತದೆ. ಮಣ್ಣು ಮತ್ತು ಜಲಾನಯನ ಸಂರಕ್ಷಣೆಯ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು, ಜಲಾನಯನ ಇಲಾಖೆಯಲ್ಲಿ ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಕೃಷಿ ಜಮೀನು ಇಲ್ಲದ ಕುಟುಂಬಗಳಿಗೆ ಜೀವನೋಪಾಯ ಚಟುವಟಿಕೆಗಳಾದ ಬೇಕರಿ ಮೇಕಿಂಗ್, ಬ್ಯೂಟಿ ಪಾರ್ಲರ್ ಹಾಗೂ ಇತರೆ ತರಬೇತಿ ನೀಡುವ ಹಾಗೂ ಸರ್ಕಾರದ ಸಹಾಯಧನದಿಂದ ಬದುಕು ರೂಪಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಡಿ ಕೊಪ್ಪಳ ಜಿಲ್ಲೆಯು ಆಯ್ಕೆಯಾಗಿದ್ದು, ಈ ಯೋಜನೆಯಡಿ ಕೃಷಿ ಹಾಗೂ ಸಂಬಂಧಿತ ಎಲ್ಲ ಇಲಾಖೆಗಳು ಕೇಂದ್ರ ಸರ್ಕಾರದ ವಲಯದ ಯೋಜನೆಗಳಡಿ ನೀಡುವ ಸಹಾಯಧನದ ಬಗ್ಗೆ ಒಗ್ಗೂಡಿಸುವಿಕೆಗೆ ಪೂರಕವಾಗಿ ಕೃಷಿ ಭಾಗ್ಯ, ರೈತ ಸಂಜೀವಿನಿ ಮುಂತಾದ ಯೋಜನೆಗಳಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ರಾಜ್ಯ ಸರ್ಕಾರದ ಅನುದಾನವನ್ನು ಸಂಯೋಜಿತಗೊಳಿಸಿ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಈ ವರ್ಷ ಕೃಷಿ ಹಾಗೂ ಸಂಬಂಧಿತ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತಂದು, ಪ್ರಧಾನ ಮಂತ್ರಿ ಧನ-ಧಾನ್ಯ ಯೋಜನೆಯಡಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಇದರಲ್ಲಿ ತೋಟಗಾರಿಕೆ ಇಲಾಖೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆಗಳನ್ನು ಒಗ್ಗೂಡಿಸಲಾಗಿದೆ. ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತವೆ. ಮುಖ್ಯವಾಗಿ ರೈತರಿಗೆ ಬೇಕಾದ ಕೃಷಿ ಸಾಲದ ಬಗ್ಗೆ ಲೀಡ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕುಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಪಿಎಂಇಎಂಇ ಯೋಜನೆಯಡಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದ ಮೂಲಕ ರೈತರ ಆರ್ಥಿಕ ವೃದ್ಧಿಗೆ ಸಹಕರಿಸಲಾಗುತ್ತದೆ.

ಈ ಕಾರ್ಯಕ್ರಮದಡಿ ಸರ್ಕಾರದಿಂದ ರೂ. 15 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದುಕೊಂಡು ಯಶಸ್ವಿಯಾದ ರೈತರ ಉತ್ಪನ್ನಗಳ ಪ್ರದರ್ಶನವನ್ನು ಸಹ ಇಲ್ಲಿ ಏರ್ಪಡಿಸಲಾಗಿದೆ. ಇಂದಿನ ಜನಾಂಗಕ್ಕೆ ಪಾರಂಪರಿಕ ಕೃಷಿ ಪರಿಕರಗಳನ್ನು ಪರಿಚಯಿಸಲು ರೋಣದ ಮಲ್ಲಯ್ಯ ಗುರುಬಸಯ್ಯ ಅವರಿಂದ ಕೃಷಿ ಪರಿಕರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಕೃಷಿ ವಸ್ತು ಪ್ರದರ್ಶನವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಕೆಳಕಂಡ ಯೋಜನೆಗಳು ಹಾಗೂ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.

ಪ್ರಧಾನಮಂತ್ರಿ ಕೃಷಿ ಧನ್ ಧಾನ್ಯ ಯೋಜನೆ

ಈ ಯೋಜನೆಯು ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಯಾಗಿದೆ. ಈ ಯೋಜನೆಯಡಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ರೇμÉ್ಮ, ಮೀನುಗಾರಿಕೆ, ಹೈನುಗಾರಿಕೆ, ಕೈಗಾರಿಕೆ, ನೀರಾವರಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಯೋಜನೆಗಳನ್ನು ಒಗ್ಗೂಡಿಸಿ, ಕಡಿಮೆ ಉತ್ಪಾದಕತೆ, ಕಡಿಮೆ ಬೆಳೆ ತೀವ್ರತೆ ಹಾಗೂ ಸಾಲ ಸೌಲಭ್ಯ ಕಡಿಮೆ ಇರುವ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತದೆ. ಮಣ್ಣಿನ ಆರೋಗ್ಯ ಸುಧಾರಣೆ, ಬೆಳೆ ವೈವಿಧ್ಯೀಕರಣ, ನೈಸರ್ಗಿಕ ಕೃಷಿ ಉತ್ತೇಜನ ಮತ್ತು ರೈತರಿಗೆ ಆರ್ಥಿಕ ಬೆಂಬಲ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್

ಇದು ರೈತರಿಗೆ ರಾಸಾಯನಿಕ ಇನ್‍ಪುಟ್‍ಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಮತ್ತು ವೆಚ್ಚ ಕಡಿಮೆ ಮಾಡುವ ಹಾಗೂ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಮಣ್ಣಿನ ಆರೋಗ್ಯ ಸುಧಾರಣೆ, ಜೀವ ವೈವಿಧ್ಯ ಸಂರಕ್ಷಣೆ, ರೈತರ ಆದಾಯ ವೃದ್ಧಿ ಹಾಗೂ ದೀರ್ಘಕಾಲಿಕ ಕೃಷಿ ಅಭಿವೃದ್ಧಿ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಮಳಿಗೆಯಲ್ಲಿ ಃಖಅ ಗಳು (ಜೈವಿಕ ಪರಿಕರ ಉತ್ಪಾದಕರು) ಜೀವಾಮೃತ, ಘನ ಜೀವಾಮೃತ, ಬೀಜಾಮೃತ, ನೀಮಾಸ್ತ್ರ, ಅಗ್ನಿಯಾಸ್ತ್ರ ಹಾಗೂ ಬ್ರಹ್ಮಾಸ್ತ್ರ ತಯಾರಿಕೆ ವಿಧಾನ ಮತ್ತು ಬಳಕೆಯ ಕುರಿತು ವಿವರ ನೀಡಲಾಗುತ್ತದೆ.

ರೈತ ಉತ್ಪಾದಕ ಸಂಸ್ಥೆ

ಈ ಯೋಜನೆಯು ಸಣ್ಣ ಮತ್ತು ಅತಿಸಣ್ಣ ರೈತರು ಒಟ್ಟಾಗಿ ಸಂಘಟಿತರಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಮಾಡಲು ಉತ್ತೇಜಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯಡಿ ರೈತರಿಗೆ ಸಂಸ್ಥಾ ಬಲವರ್ಧನೆ, ಆರ್ಥಿಕ ಸಹಾಯ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸಲಾಗುತ್ತದೆ. ಇದರಿಂದ ರೈತರಿಗೆ ಉತ್ತಮ ಬೆಲೆ, ಕಡಿಮೆ ವೆಚ್ಚ ಮತ್ತು ಹೆಚ್ಚಿನ ಆದಾಯ ಲಭ್ಯವಾಗುತ್ತದೆ. ಕೊಪ್ಪಳ ಸಿರಿ, ಧರಣಿ ಮತ್ತು ಕಾಯಕ ಮಿತ್ರ ಈPಔಗಳು ಸಿರಿಧಾನ್ಯ ಹಾಗೂ ಸಾವಯವ ಕೃಷಿಯಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡಲಿವೆ

ಪ್ರಧಾನಮಂತ್ರಿ ಸೂಕ್ಷ್ಮ ಅಹಾರ ಸಂಸ್ಕರಣಾ ಉದ್ಯಮಗಳ ಅಧಿಕೃತಗೊಳಿಸುವಿಕೆ ಯೋಜನೆ :

ಈ ಯೋಜನೆಯು ಅಸಂಘಟಿತ ಕ್ಷೇತ್ರದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ಅಧಿಕೃತಗೊಳಿಸಿ ಬಲಪಡಿಸುವ ಉದ್ದೇಶ ಹೊಂದಿದ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯಡಿ ಹಣಕಾಸು ಸಹಾಯ, ತರಬೇತಿ, ತಾಂತ್ರಿಕ ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸಲಾಗುತ್ತದೆ.

ಈ ಯೋಜನೆಯಡಿ ಭೀಮಾ ನ್ಯಾಚುರಲ್ಸ್, ಕೊಪ್ಪಳ ಇವರು ಸಹಾಯಧನ ಪಡೆದು ಅಣಬೆ ಮತ್ತು ಅದರ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಅದರ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ರಾಜಭೂಮಿ ಸ್ಪೇಸಸ್, ಕೊಪ್ಪಳ ಇವರಿಂದ ಸಾಂಬಾರ್ ಹಾಗೂ ಮಸಾಲೆ ಪದಾರ್ಥಗಳ ತಯಾರಿಕೆ, ಸೋಮೇಶ್ವರ ಎಂಟರ್‍ಪ್ರೈಸಸ್, ಇಂದರಗಿ ಇವರಿಂದ ನೈಸರ್ಗಿಕ ಜೇನು ಉತ್ಪಾದನೆಯ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಆತ್ಮ ಯೋಜನೆ :

ಆತ್ಮ ಯೋಜನೆಯಡಿ ಆಹಾರ ಭದ್ರತಾ ಗುಂಪುಗಳನ್ನು ರಚಿಸಲಾಗಿದ್ದು, ಈ ಗುಂಪುಗಳಿಂದ ಉತ್ಪಾದಿಸಲಾದ ಸಾವಯವ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ - ಜಲಾನಯನ ಅಭಿವೃದ್ಧಿ ಘಟಕ :

ಇದು ಮಳೆನೀರಿನ ಸಂರಕ್ಷಣೆ, ಭೂ ಮತ್ತು ಜಲ ಸಂಪನ್ಮೂಲಗಳ ಸಮಗ್ರ ಅಭಿವೃದ್ಧಿ ಹಾಗೂ ಬರಪೀಡಿತ ಪ್ರದೇಶಗಳ ಉತ್ಪಾದಕತೆ ಹೆಚ್ಚಿಸುವ ಉದ್ದೇಶ ಹೊಂದಿದ ಯೋಜನೆಯಾಗಿದೆ. ಈ ಯೋಜನೆಯಡಿ ಮಣ್ಣಿನ ಸಂರಕ್ಷಣೆ, ನೀರು ಸಂಗ್ರಹಣಾ ರಚನೆಗಳ ನಿರ್ಮಾಣ, ಬೆಳೆ ಉತ್ಪಾದಕತೆ ವೃದ್ಧಿ ಮತ್ತು ಗ್ರಾಮೀಣ ಜೀವನೋಪಾಯ ಸುಧಾರಣೆ ಕೈಗೊಳ್ಳಲಾಗುತ್ತಿದ್ದು, ಇದರ ಅಂಗವಾಗಿ ಲೈವ್ ಮಾದರಿಯನ್ನು ಪ್ರದರ್ಶಿಸಲಾಗಿದೆ.

ರಾಷ್ಟ್ರೀಯ ಅಹಾರ ಭದ್ರತಾ ಮಿಷನ್ - ಪೌಷ್ಠಿಕ ಧಾನ್ಯಗಳ ಘಟಕ :

ಜೋಳ, ರಾಗಿ, ಸಜ್ಜೆ, ನವಣೆ ಮೊದಲಾದ ಪೌಷ್ಠಿಕ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಿ, ಪೌಷ್ಠಿಕ ಭದ್ರತೆ ಮತ್ತು ರೈತರ ಆದಾಯ ವೃದ್ಧಿ ಮಾಡುವ ಉದ್ದೇಶ ಹೊಂದಿದ ಯೋಜನೆಯಾಗಿದೆ. ಈ ಯೋಜನೆಯಡಿ ಸುಧಾರಿತ ಬೀಜಗಳು, ತಂತ್ರಜ್ಞಾನ, ತರಬೇತಿ ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಪೌಷ್ಠಿಕ ಧಾನ್ಯಗಳ ಬೆಳೆಯನ್ನು ಉತ್ತೇಜಿಸಲಾಗುತ್ತದೆ. ಇದರ ಕುರಿತು ಸಿರಿಧಾನ್ಯಗಳಿಂದ ರಂಗೋಲಿ ರಚಿಸಿ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ.

ಪಾರಂಪರಿಕ ಕೃಷಿ ಉಪಕರಣಗಳ ಪ್ರದರ್ಶನ :

ಶ್ರೀ ಮಲ್ಲಯ್ಯ ತಂದೆ ಗುರುಬಸಯ್ಯ ಸಾ.ರೋಣ ಇವರಿಂದ ಕಳೆದ 30 ವರ್ಷಗಳಿಂದ ಸಂಗ್ರಹಿಸಲಾದ ಕೃಷಿಯಲ್ಲಿ ಉಪಯೋಗವಾಗುವ ಪಾರಂಪರಿಕ ಕೃಷಿ ಉಪಕರಣಗಳು ಹಾಗೂ ಬೀಜಗಳು, ಗ್ರಾಮೀಣ ಭಾಗದಲ್ಲಿ ದಿನನಿತ್ಯ ಕೃಷಿ ಕಾರ್ಯದಲ್ಲಿ ಬಳಸುವ ಎತ್ತಿನ ಬಂಡಿ, ಮಡಿಕೆ, ನೇಗಿಲು, ಕುಂಟೆ, ಕೂಡ ಮೊದಲಾದ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande