
ಭೋಪಾಲ್, 02 ಜನವರಿ (ಹಿ.ಸ.) :
ಆ್ಯಂಕರ್ : ಭಾರತದಲ್ಲಿನ ಯುವಶಕ್ತಿ ಜಾಗೃತವಾಗಿದೆ ದೇಶವನ್ನು ಸಾಮರ್ಥ್ಯವಂತಾಗಿಸಲು ಅವರು ಸಂಕಲ್ಪಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಸಂಘವು ತನ್ನ ಸ್ಥಾಪನೆಯಿಂದಲೇ ಧರ್ಮ–ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಭಾರತವನ್ನು ಪರಮ ವೈಭವದತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದು, ಸಂಘದ ಪ್ರತಿಯೊಬ್ಬ ಸ್ವಯಂಸೇವಕನೂ ಅದಕ್ಕೆ ಪ್ರತಿಜ್ಞಾಬದ್ಧನಾಗಿದ್ದಾನೆ ಎಂದು ಅವರು ತಿಳಿಸಿದರು.
ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್‌ನ ಕುಶಾಭಾವು ಠಾಕ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ಅವರು ಯುವಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
“ಯಾವುದೇ ರಾಷ್ಟ್ರವು ಸಮಗ್ರ ಸಮಾಜದ ಕೊಡುಗೆಯಿಂದಲೇ ಮಹತ್ತಾಗುತ್ತದೆ. ನಾಯಕತ್ವ, ನೀತಿ ಮತ್ತು ವ್ಯವಸ್ಥೆಗಳು ಸಮಾಜ ಗುಣಸಂಪನ್ನವಾಗಿದ್ದಾಗ ಮಾತ್ರ ಫಲಪ್ರದವಾಗುತ್ತವೆ. ಇಂದಿನ ಯುವಕರು ದೇಶವನ್ನು ಬಲಿಷ್ಠಗೊಳಿಸಲು ಮುಂದಾಗಿದ್ದಾರೆ” ಎಂದು ಡಾ. ಭಾಗವತ್ ಹೇಳಿದರು.
ಸಂಘದ ಮುಖ್ಯಸ್ಥರು ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಭೋಪಾಲ್ ಪ್ರವಾಸದಲ್ಲಿದ್ದಾರೆ. ಮೊದಲ ದಿನ ನಡೆದ ಯುವ ಸಂವಾದದಲ್ಲಿ ಮಧ್ಯಭಾರತ ಪ್ರಾಂತ್ಯದ 16 ಜಿಲ್ಲೆಗಳ ಯುವಕರು ಭಾಗವಹಿಸಿ ಸರಸಂಘಚಾಲಕರೊಂದಿಗೆ ನೇರವಾಗಿ ಪ್ರಶ್ನೋತ್ತರ ನಡೆಸಿದರು.
ಈ ವೇಳೆ, “ಯುವಕರು ಸಂಘದ ಶಾಖೆಗಳಿಗೆ ಬರಲಿ ಅಥವಾ ಸಂಘದ ಯೋಜನೆಗಳಡಿ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸೇರಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಲಿ” ಎಂದು ಅವರು ಕರೆ ನೀಡಿದರು.
ಅಹಂಕಾರ–ಸ್ವಾರ್ಥ ತ್ಯಜಿಸಬೇಕು ದೇಶಕ್ಕಾಗಿ ಏನಾದರೂ ಮಾಡಲು ಹೊರಟರೆ ಗುಣಗಳನ್ನು ಧಾರಣೆ ಮಾಡಬೇಕು ಅಹಂಕಾರ ಮತ್ತು ಸ್ವಾರ್ಥವನ್ನು ಬಿಟ್ಟುಬಿಡಬೇಕು. ಉತ್ತಮ ಅಭ್ಯಾಸಗಳನ್ನು ರೂಪಿಸುವ ಏಕೈಕ ಪದ್ದತಿಯನ್ನು ಸಂಘವೇ ನೀಡಿದೆ. ಸಂಘ ಸ್ಥಾಪಕ ಡಾ. ಕೆಶವ ಬಲಿರಾಮ ಹೆಡಗೇವಾರ್ ಅವರು ದೇಶದಲ್ಲಿ ಏಕತೆ ಹೇಗೆ ಮೂಡಬೇಕು ಎಂಬ ಚಿಂತನೆಯೊಂದಿಗೆ ವ್ಯಕ್ತಿ ನಿರ್ಮಾಣಕ್ಕೆ ಒತ್ತು ನೀಡಿದರು ಎಂದು ಡಾ. ಭಾಗವತ್ ಹೇಳಿದರು.
ಸಂಘದ ಶಾಖೆಗಳು ದೇಶಭಕ್ತಿಯನ್ನು ಕಲಿಸುತ್ತವೆ ಯಾವುದೇ ಬಿಗಿತವಿಲ್ಲದೆ ಉದ್ದೇಶವನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಲು ಶಾಖೆಯೇ ಸೂಕ್ತ ಸ್ಥಳ ಎಂದು ಅವರು ತಿಳಿಸಿದರು. “ಭಯ ಮತ್ತು ಅಸುರಕ್ಷತೆಯೊಂದಿಗೆ ಬದುಕುವ ಬದಲು ಭಯಮುಕ್ತವಾಗಿ ಬದುಕಬೇಕು. ಸ್ವಂತ ಅಭಿವೃದ್ಧಿಯಿಂದ ಕುಟುಂಬ ಹಾಗೂ ದೇಶ ಪ್ರಗತಿಯಲ್ಲಿದೆಯೇ ಎಂಬುದನ್ನು ಯೋಚಿಸಬೇಕು. ದೇಶ ನಿರ್ಮಾಣದಲ್ಲಿ ಯುವಕರ ಪಾತ್ರವೇ ಪ್ರಮುಖ” ಎಂದರು.
ಯುವಕರು ದೇಶದ ವಿಷಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಬೇಕಿದ್ದು, ಅದಕ್ಕಾಗಿ ಅರ್ಹತೆ ಬೆಳೆಸಿಕೊಳ್ಳಬೇಕು. “ಸಂಘಕ್ಕೆ ಬಂದು ಸಿದ್ಧರಾಗಿರಿ ಸಂಘದ ಅನುಭವ ಪಡೆಯಿರಿ” ಎಂದು ಅವರು ಮನವಿ ಮಾಡಿದರು.
ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಸಂಘದ ಪಾತ್ರ ಕುರಿತು ಮಾತನಾಡಿದ ಅವರು, “ವಿಶ್ವವು ಶಕ್ತಿಯ ಮಾತು ಕೇಳುತ್ತದೆ. ಸಂಘವು ಸಂಪೂರ್ಣ ಸಮಾಜವನ್ನು ಜೊತೆಯಾಗಿ ಕೊಂಡೊಯ್ದು ಧರ್ಮರಕ್ಷಣೆ ಮಾಡುವ ಮೂಲಕ ದೇಶಕ್ಕೆ ಹೊಸ ದಾರಿ ತೋರಿಸುತ್ತಿದೆ. ಭಾರತ ಮಹಾಶಕ್ತಿಯಾಗಿ ರೂಪುಗೊಳ್ಳುತ್ತಿದೆ” ಎಂದರು. ಫ್ಯಾಷನ್ ಕುರಿತು ಮಾತನಾಡುತ್ತಾ, “ಯುವಕರು ಕಾಲಕ್ಕೆ ತಕ್ಕಂತೆ ಫ್ಯಾಷನ್ ಅನುಸರಿಸುತ್ತಾರೆ ಆದರೆ ಸಮಾಜಕ್ಕೆ ಅರ್ಥಪೂರ್ಣವಾದ ಫ್ಯಾಷನ್‌ನ್ನು ಉತ್ತೇಜಿಸುವ ಯುವಕರನ್ನು ನಾವು ನಿರ್ಮಿಸುತ್ತಿದ್ದೇವೆ” ಎಂದು ಹೇಳಿದರು.
ಭದ್ರತೆ ಮತ್ತು ವೃತ್ತಿ ಕುರಿತು ಕೇಳಿದ ಪ್ರಶ್ನೆಗೆ, “ಪೂರ್ಣ ಭದ್ರತೆಗೆ ಯಾರೂ ಭರವಸೆ ನೀಡಲಾರರು. ಚಿಂತೆರಹಿತವಾಗಿ ಬದುಕಿ. ಮಾನವನು ಅಪಾಯ ಸ್ವೀಕರಿಸುವುದರಿಂದಲೇ ವಿಭಿನ್ನನು. ಯಶಸ್ಸಿನ ದಾರಿಗೆ ಹೋದಾಗ ಸಂಘರ್ಷ ಕಂಡು ಹೆದರುವ ಬದಲು, ಭಯವಿಲ್ಲದೆ ಶ್ರೇಷ್ಠತೆ ತೋರಿಸಬಹುದಾದ ವೃತ್ತಿಯನ್ನೇ ಆರಿಸಬೇಕು. ಸೌಲಭ್ಯದಿಂದಲೇ ಸುಖ ಸಿಗುವುದಿಲ್ಲ” ಎಂದು ಉತ್ತರಿಸಿದರು. ಕೃತಕ ಬುದ್ಧಿಮತ್ತೆ ಕುರಿತು, “ನಾವು ಎಐಯನ್ನು ನಿಯಂತ್ರಿಸಬೇಕು ಅದರ ಮೂಲಕ ದೇಶಹಿತಕ್ಕೆ ಅಭಿವೃದ್ಧಿ ಸಾಧಿಸಬೇಕು” ಎಂದರು.
ಹೃದಯಗಳನ್ನು ತಲುಪುವ ಕಾರ್ಯ
ಕಾರ್ಯಕ್ರಮದ ಮೊದಲ ಅಧಿವೇಶನದಲ್ಲಿ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ದೀಪಕ್ ವಿಸ್ಪುತೆ ಸಂಘದ ನೂರು ವರ್ಷದ ಪಯಣವನ್ನು ವಿವರಿಸಿದರು. “ಸಂಘಕ್ಕೆ ಖ್ಯಾತಿ ದೊರಕಿದರೂ, ವಿರೋಧಿಗಳು ಅದನ್ನು ನಕಾರಾತ್ಮಕವಾಗಿ ಚಿತ್ರಿಸಿದ್ದಾರೆ. 1925ರಲ್ಲಿ ನಾಗಪುರದಲ್ಲಿ ಆರಂಭವಾದ ಸಂಘ ಕಾರ್ಯವನ್ನು ಡಾ. ಹೆಡಗೇವಾರ್ ಸಮಾಜದೊಳಗೆ ಕೊಂಡೊಯ್ದರು. ಸ್ವಾಮಿ ವಿವೇಕಾನಂದರ ಸಂಘಟನೆ, ವ್ಯಕ್ತಿ ನಿರ್ಮಾಣ ಮತ್ತು ದೇಶಪ್ರಾಥಮ್ಯ ಎಂಬ ಮೂರು ಆಲೋಚನೆಗಳ ಮೇಲೆ ಸಂಘ ಕಾರ್ಯನಿರ್ವಹಿಸುತ್ತಿದೆ” ಎಂದರು.
ಕಾಲಾನುಸಾರ ಅಗತ್ಯ ಕಂಡು ಎಬಿವಿಪಿ, ಭಾರತೀಯ ಮಜ್ದೂರ್ ಸಂಘ, ಸೇವಾ ಭಾರತೀ ಮುಂತಾದ ಸಂಘಟನೆಗಳನ್ನು ಸ್ಥಾಪಿಸಿರುವುದನ್ನು ಉಲ್ಲೇಖಿಸಿದ ಅವರು, “ಸಂಘ ನೂರು ವರ್ಷ ಪೂರೈಸಿದ ಸಂಭ್ರಮ ಆಚರಿಸುವುದಕ್ಕಿಂತ ಮನೆಮನೆಗೂ, ಮನಸ್ಸುಮನಸ್ಸಿಗೂ ತಲುಪುವ ಕಾರ್ಯದಲ್ಲಿ ತೊಡಗಿದೆ” ಎಂದು ಹೇಳಿದರು.
ಯುವರನ್ನು ಸಾಮರ್ಥ್ಯವಂತರಾಗಿಸುವ ಸಂಘ
ಭೋಪಾಲ್ ಕಾರ್ಯಾಲಯದ ಪ್ರಮುಖ ಸುದೇಶ್ ಶಾಂಡಿಲ್ಯ ಮಹಾರಾಜ ಮಾತನಾಡಿ, “ಸಮರ್ಥತೆ ಎಂದರೆ ನೈತಿಕ ಶುದ್ಧತೆ. ಪರೋಪಕಾರ, ಸದುಪಚಾರ, ಜನಕಲ್ಯಾಣ ಮತ್ತು ಯಶಸ್ಸಿನ ಹಿಂದೆ ಓಡದ ಮನೋಭಾವ ಸಂಘದಲ್ಲಿಯೇ ಕಾಣಿಸುತ್ತದೆ. ಸೂರ್ಯ ಮತ್ತು ಗಂಗೆಯಂತೆ ಎಲ್ಲರನ್ನು ಸಮಾವೇಶಗೊಳಿಸುವ ಸಾಮರ್ಥ್ಯ ಯುವಕರಲ್ಲಿರಬೇಕು. ಭಾರತದಲ್ಲಿ ಯುವರನ್ನು ಸಾಮರ್ಥ್ಯವಂತರಾಗಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವುದು ಸಂಘವೇ” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa