
ಕೊಪ್ಪಳ, 19 ಜನವರಿ (ಹಿ.ಸ.) :
ಆ್ಯಂಕರ್ : ಗಂಗಾವತಿಯ ಪಾಟೀಲ್ ನಸಿರ್ಂಗ್ ಹತ್ತಿರದ ಶರಣೇಗೌಡ ಸಿಂಗಾಪುರ(47 ) ಕಾಣೆಯಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 38/2025 ರಡಿ ಪ್ರಕರಣ ದಾಖಲಾಗಿದೆ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿ ಚಹರೆ ವಿವರ: ಶರಣೇಗೌಡ ಸಿಂಗಾಪುರ್ ವಯಸ್ಸು 47 ವರ್ಷ, 5.6 ಎತ್ತರ ಗೋದಿ ಮೈಬಣ್ಣ, ಕೋಲು ಮುಖ ಸಾಧಾರಣ ಮೈಕಟ್ಟು ಹೊಂದಿದ್ದಾನೆ.
ಕಾಣೆಯಾದಾಗ ಬಾದಾಮಿ ಬಣ್ಣದ ಫುಲ್ ಶರ್ಟ್ ಚಾಕಲೇಟ್ ಬಣ್ಣದ ಪ್ಯಾಂಟ್ ಹಾಗೂ ಚಾಕ್ಲೇಟ್ ಬಣ್ಣದ ಜಾಕೆಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.
ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ. ದೂ.ಸಂ: 08539-230111, ಗಂಗಾವತಿ ಡಿವೈಎಸ್ಪಿ ದೂ.ಸಂ: 08533-230853, ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊ.ಸಂ: 9480803752 ಹಾಗೂ ದೂ.ಸಂ: 08533-230633, 08533-230100 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್