ಗಂಗಾವತಿ ವ್ಯಕ್ತಿ ಕಾಣೆ
ಗಂಗಾವತಿ, 19 ಜನವರಿ (ಹಿ.ಸ.) : ಆ್ಯಂಕರ್ : ಗಂಗಾವತಿಯ ಜೈಭೀಮ ನಗರದ ಮಹ್ಮದ ತಂದೆ ಆಲಂಬಾಷ (27) ಕಾಣೆಯಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಪತ್ನಿ ರೇಷ್ಮಾ ಬಾನು ಅವರು.ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಂಗಾವತಿ ನಗರ .ಪ
Gangavathi man missing


ಗಂಗಾವತಿ, 19 ಜನವರಿ (ಹಿ.ಸ.) :

ಆ್ಯಂಕರ್ : ಗಂಗಾವತಿಯ ಜೈಭೀಮ ನಗರದ ಮಹ್ಮದ ತಂದೆ ಆಲಂಬಾಷ (27) ಕಾಣೆಯಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಪತ್ನಿ ರೇಷ್ಮಾ ಬಾನು ಅವರು.ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಂಗಾವತಿ ನಗರ .ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 207/2025 ರಡಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿ ಚಹರೆ ವಿವರ: ಮಹ್ಮದ ತಂದೆ ಆಲಂಬಾಷ ವಯಸ್ಸು 27 ವರ್ಷ, 5.5 ಎತ್ತರ, ಗೋದಿ ಮೈಬಣ್ಣ, ದುಂಡನೇಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.

ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ. ದೂ.ಸಂ: 08539-230111, ಗಂಗಾವತಿ ಡಿವೈಎಸ್ಪಿ ದೂ.ಸಂ: 08533-230853, ಗಂಗಾವತಿ ನಗರ .ಪೊಲೀಸ್ ಠಾಣೆಯ .ಪೊಲೀಸ್ ಇನ್ಸಪೆಕ್ಟರ್ ಮೊ.ಸಂ: 9480803752 ಹಾಗೂ ದೂ.ಸಂ: 08533-230633, 08533-230100 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ನಗರ .ಪೊಲೀಸ್ ಠಾಣೆಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande