
ಕೊಪ್ಪಳ, 19 ಜನವರಿ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸಾಂಸ್ಕøತಿಕ ಸಂಘ ಸಂಸ್ಥೆಗಳಿಗೆ ಧನಸಹಾಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಸಂಘ-ಸಂಸ್ಥಗಳಿಗೆ ಮಾರ್ಗಸೂಚಿಯನುಸಾರ ಸಂಬಂಧಿತ ದಾಖಲೆಗಳನ್ನು ಮರು ಸಲ್ಲಿಸಲು ಕಾಲಾವಕಾಶ ಕಲ್ಪಿಸಲಾಗಿದೆ.
ಸಾಂಸ್ಕøತಿಕ ಸಂಘ ಸಂಸ್ಥೆಗಳಿಗೆ ಧನಸಹಾಯ ಯೋಜನೆಯ ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ನಾಡಿನ ಭಾμÁ ಸಂವರ್ಧನೆ, ಕಲೆ, ಸಾಹಿತ್ಯ ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ ಅಥವಾ ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲು 2025-26ನೇ ಸಾಲಿನ ಸಾಮಾನ್ಯ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೇವಾಸಿಂಧು Sevasindhu.karnataka.gov.in ಮುಖಾಂತರ ದಿನಾಂಕ: 01.12.2025 ರಿಂದ ದಿನಾಂಕ:09.01.2026 ರವರೆಗೆ ಕಾಲಾವಕಾಶ ನೀಡಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಸಂಘ-ಸಂಸ್ಥೆಗಳು ಸೇವಾಸಿಂಧು ತಂತ್ರಾಂಶದಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಸರ್ಕಾರದ ಮಾರ್ಗಸೂಚಿಯನುಸಾರ ಪರಿಶೀಲಿಸಿದಾಗ ಈ ಅರ್ಜಿಗಳಲ್ಲಿ ತಾಂತ್ರಿಕ ಕಾರಣದಿಂದ ದಾಖಲೆಗಳು ಸರಿಯಾಗಿ ಅಪ್ಲೋಡ್ ಆಗದೇ ಇರುವುದರಿಂದ, ತಪ್ಪಾಗಿ ಸಲ್ಲಿಕೆಯಾಗಿರುವುದರಿಂದ, ಬಿಟ್ಟುಹೊಗಿರುವುದರಿಂದ ಹಾಗೂ ಅಸ್ಪಷ್ಟವಾಗಿರುವುದರಿಂದ, ಈ ಅಂಶಗಳ ಪ್ರಯುಕ್ತ ಸೇವಾಸಿಂಧು ತಂತ್ರಾಂಶದಲ್ಲಿ ಹಿಂದಿರುಗಿಸಲಾಗಿದ್ದು, ಅದರನ್ವಯ ಸರ್ಕಾರದ ಮಾರ್ಗಸೂಚಿಯನುಸಾರ ಸಂಬಂಧಿಸಿದ ದಾಖಲೆಗಳನ್ನು ಮರು ಸಲ್ಲಿಸಲು 2026ರ ಜನವರಿ 25 ರವರೆಗೆ ಕಾಲಾವಾಕಾಶ ಕಲ್ಪಿಸಲಾಗಿರುತ್ತದೆ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್