ಜ. 21 ರಿಂದ ಆಯ್ಕೆ ಪ್ರಕ್ರಿಯೆ
ಕೊಪ್ಪಳ, 17 ಜನವರಿ (ಹಿ.ಸ.) : ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ಶಾಲೆಗಳಿಗೆ 2026-27ನೇ ಸಾಲಿನ ಪ್ರವೇಶಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಜನವರಿ 21 ರಿಂದ ಜ. 27ರ ವರೆಗೆ ಹಮ್ಮಿಕೊಳ್ಳಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾ
ಜ. 21 ರಿಂದ ಆಯ್ಕೆ ಪ್ರಕ್ರಿಯೆ


ಕೊಪ್ಪಳ, 17 ಜನವರಿ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ಶಾಲೆಗಳಿಗೆ 2026-27ನೇ ಸಾಲಿನ ಪ್ರವೇಶಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಜನವರಿ 21 ರಿಂದ ಜ. 27ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ/ವಸತಿ ನಿಲಯಕ್ಕೆ 4ನೇ ತರಗತಿ, 7ನೇ ತರಗತಿ ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ, ಬಾಲಕಿಯರಿಗೆ ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಬಾಸ್ಕೆಟ್‍ಬಾಲ್ ಕ್ರೀಡೆಗಳಲ್ಲಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಜರುಗಿಸಲಾಗುತ್ತಿದ್ದು, ಜ. 21 ರಂದು ಗಂಗಾವತಿ ತಾಲೂಕು ಕ್ರೀಡಾಂಗಣ ಮತ್ತು ಕುಕನೂರಿನ ಗುರುಕುಲ ಶಾಲಾ ಆವರಣದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅದೇ ರೀತಿ ಜ. 22 ರಂದು ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣ ಮತ್ತು ಯಲಬುರ್ಗಾದ ಶ್ರೀ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ, ಜ. 23 ರಂದು ಕಾರಟಗಿಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಮತ್ತು ಕುಷ್ಟಗಿಯ ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ಜ. 24 ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ 27 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಆಯ್ಕೆ ಪ್ರಕ್ರಿಯೆಗೆ ಆಸಕ್ತಿಯುಳ್ಳ ಬಾಲಕ, ಬಾಲಕಿಯರು ಪಾಲ್ಗೊಳ್ಳಬಹುದು.

ಅಥ್ಲೆಟಿಕ್ಸ್ ಕ್ರೀಡೆಯಲ್ಲಿ 4ನೇ ತರಗತಿಗೆ (01.06.2026ಕ್ಕೆ 11ವರ್ಷ ಮೀರಿದ) 140 ಸೆಂ.ಮೀ ಎತ್ತರದ ಬಾಲಕ ಮತ್ತು ಬಾಲಕಿಯರು ಭಾಗವಹಿಸಬಹುದು. 7ನೇ ತರಗತಿಗೆ (01.06.2026ಕ್ಕೆ 14ವರ್ಷ ಮೀರಿರಬಾರದು) ಎತ್ತರ ಬಾಲಕರಿಗೆ-165ಸೆಂ.ಮೀ ಹಾಗೂ ಬಾಲಕಿಯರಿಗೆ 160ಸೆಂ.ಮೀ ನಿಗದಿಪಡಿಸಲಾಗಿದೆ. 10ನೇ ತರಗತಿಗೆ (17ವರ್ಷದ ಒಳಗಿನವರಿಗೆ) ಬಾಲಕರು 170ಸೆಂ.ಮೀ, ಬಾಲಕಿಯರು 165 ಸೆಂ.ಮೀ ಎತ್ತರ ಹೊಂದಿರಬೇಕು. ವಾಲಿಬಾಲ್ ಕ್ರೀಡೆಯಲ್ಲಿ 4ನೇ ತರಗತಿಗೆ (01.06.2026ಕ್ಕೆ 11ವರ್ಷ ಮೀರಿರಬಾರದು) ಎತ್ತರ ಬಾಲಕರಿಗೆ-145 ಸೆಂ.ಮೀ, ಬಾಲಕಿಯರಿಗೆ 145 ಸೆಂ.ಮೀ ನಿಗದಿಪಡಿಸಿದೆ. 7ನೇ ತರಗತಿಗೆ (01.06.2026ಕ್ಕೆ 14ವರ್ಷ ಮೀರಿರಬಾರದು) ಎತ್ತರ ಬಾಲಕರಿಗೆ-172 ಸೆಂ.ಮೀ, ಬಾಲಕಿಯರಿಗೆ-163 ಸೆಂ.ಮೀ ನಿಗದಿಪಡಿಸಲಾಗಿದೆ.

10ನೇ ತರಗತಿಗೆ (17ವರ್ಷದ ಒಳಗಿನವರಿಗೆ) ಎತ್ತರ ಬಾಲಕರಿಗೆ 184 ಸೆಂ.ಮೀ ಹಾಗೂ ಬಾಲಕಿಯರಿಗೆ-168 ಸೆಂ.ಮೀ ನಿಗದಿ ಮಾಡಲಾಗಿದೆ. ಬಾಸ್ಕೆಟ್‍ಬಾಲ್ ಕ್ರೀಡೆಗೆ 7ನೇ ತರಗತಿಗೆ (01.06.2026ಕ್ಕೆ 14ವರ್ಷ ಮೀರಿರಬಾರದು) ಬಾಲಕರಿಗೆ-172ಸೆಂ.ಮೀ ಹಾಗೂ ಬಾಲಕಿಯರಿಗೆ-162 ಸೆಂ.ಮೀ ಮತ್ತು 10ನೇ ತರಗತಿಗೆ (17ವರ್ಷದ ಒಳಗಿನವರಿಗೆ) ಎತ್ತರ ಬಾಲಕರಿಗೆ 184 ಸೆಂ.ಮೀ ಹಾಗೂ ಬಾಲಕಿಯರಿಗೆ-167 ಸೆಂ.ಮೀ ಅವಶ್ಯವಿರುತ್ತದೆ.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಚ್ಛೀಸುವ ಆಸಕ್ತ ಅಭ್ಯರ್ಥಿಗಳು ಪ್ರಸ್ತುತ ಸಾಲಿನಲ್ಲಿ 4ನೇ, 7ನೇ ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುಖ್ಯೋಪಾಧ್ಯಯರಿಂದ ಶಾಲಾ ದೃಢೀಕರಣ ಪತ್ರ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 94488-30108, 94486-33146, 86604-55969, 80881-43003 ಅಥವಾ ಕಛೇರಿ ದೂರವಾಣಿ ಸಂಖ್ಯೆ: 08539-230121ಗೆ ಸಂಪರ್ಕಿಸುವಂತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande