ಕರಾಟೆ ಸ್ಪರ್ಧೆಯಲ್ಲಿ ಧೀರಜ್ ಗೌಡ ದ್ವಿತೀಯ ಸ್ಥಾನ ; ಶಾಲಾ ಮಂಡಳಿ ಅಭಿನಂದನೆ
ಕರಾಟೆ ಸ್ಪರ್ಧೆಯಲ್ಲಿ ಧೀರಜ್ ಗೌಡ ದ್ವಿತೀಯ ಸ್ಥಾನ ; ಶಾಲಾ ಮಂಡಳಿ ಅಭಿನಂದನೆ
ವಿದ್ಯಾರ್ಥಿ ಧೀರಜ್ ಗೌಡರನ್ನು ಶ್ರೀ ಬಾಬಾ ವಿದ್ಯಾ ಸಂಸ್ಥೆಯ ಶಾಲಾ ಆಡಳಿತಮಂಡಳಿ ಅಭಿನಂದಿಸಿದರು.


ಕೋಲಾರ, ಜನವರಿ ೧೭ (ಹಿ.ಸ) :

ಆ್ಯಂಕರ್ : ಹಾಸನ ಜಿಲ್ಲಾ ಕರಾಟೆ ಅಸೋಸಿಯೇಶನ್ ಮತ್ತು ಮೌಲೆ ಶೂಟೋಕಾನ್ ಕರಾಟೆ ಡೊ ಅಸೋಸಿಯೇಶನ್ ಇಂಡಿಯಾ ಸಹಯೋಗದೊಂದಿಗೆ ಹಾಸನದ ಎಂಸಿಇ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಾಸನ್ ಓಪನ್ ೫ನೇ ರಾಷ್ಟç ಮಟ್ಟದ ಖೇಲೋ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರಾಟೆಯ ಕಟಾ ಮತ್ತು ಫೈಟಿಂಗ್ ವಿಭಾಗದಲ್ಲಿ ಶ್ರೀ ಬಾಬಾ ವಿದ್ಯಾ ಸಂಸ್ಥೆ ಕಾರಂಜಿಕಟ್ಟೆ ಕೋಲಾರ ಶಾಲೆಯ ವಿದ್ಯಾರ್ಥಿ ಧೀರಜ್ ಗೌಡ ಟಿ.ಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶಾಲಾ ಆಡಳಿತಮಂಡಳಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಚಿತ್ರ : ವಿದ್ಯಾರ್ಥಿ ಧೀರಜ್ ಗೌಡರನ್ನು ಶ್ರೀ ಬಾಬಾ ವಿದ್ಯಾ ಸಂಸ್ಥೆಯ ಶಾಲಾ ಆಡಳಿತಮಂಡಳಿ ಅಭಿನಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande