ಮಹಾಚೇತನ ಖಂಡ್ರೆ
ಬಳ್ಳಾರಿ, 17 ಜನವರಿ (ಹಿ.ಸ.) : ಆ್ಯಂಕರ್ : ಅಸಾಧರಣ ಪ್ರತಿಭೆಯ ತೀಕ್ಷ್ಮಮತಿಯ ಕಾಯಕಯೋಗಿ ಶತಾಯುಷಿ ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ, ಹೈದರಾಬಾದ್ - ಕರ್ನಾಟಕ ವಿಮೋಚನೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿ ನಾಡು - ನುಡಿ, ಸಮಾಜ - ಸಂಘಟನೆಗಾಗ
ಮಹಾನ್‍ಚೇತನ ಭೀಮಣ್ಣ ಖಂಡ್ರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು


ಮಹಾನ್‍ಚೇತನ ಭೀಮಣ್ಣ ಖಂಡ್ರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು


ಬಳ್ಳಾರಿ, 17 ಜನವರಿ (ಹಿ.ಸ.) :

ಆ್ಯಂಕರ್ : ಅಸಾಧರಣ ಪ್ರತಿಭೆಯ ತೀಕ್ಷ್ಮಮತಿಯ ಕಾಯಕಯೋಗಿ ಶತಾಯುಷಿ ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ, ಹೈದರಾಬಾದ್ - ಕರ್ನಾಟಕ ವಿಮೋಚನೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿ ನಾಡು - ನುಡಿ, ಸಮಾಜ - ಸಂಘಟನೆಗಾಗಿ ಅವಿರತ ಶ್ರಮಿಸಿದ್ದು, ಅವರ ನಿಧನದಿಂದಾಗಿ ಸಮಾಜಕ್ಕೆ ಮತ್ತು ಶ್ರೀಮಠಕ್ಕೆ ದೊಡ್ಡ ನಷ್ಟವಾಗಿದೆ ಎಂದು

ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಭೀಮಣ್ಣ ಖಂಡ್ರೆ ಅವರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಿರುವ ಶ್ರೀಗಳು, ಭೀಮಣ್ಣ ಖಂಡ್ರೆ ಅವರ ಸಾಧನೆ ವಿಭಿನ್ನ - ವಿಶಿಷ್ಟ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಹಕಾರ ಕ್ಷೇತ್ರ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಕೊಡುಗೆ ಸದಾ ಸ್ಮರಣೀಯ ಮತ್ತು ಸ್ಫೂರ್ತಿದಾಯಕ ಎಂದು ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಸಮಾಜವನ್ನು ಒಟ್ಟುಗೂಡಿಸಲು ನಡೆಸಿದ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ. ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ನಮ್ಮ ಗುರುಗಳಾದ ಪೂಜ್ಯಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳ ಜೊತೆ ನಿರಂತರ ಒಡನಾಟ ಹೊಂದಿ 2010 ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಶತಮಾನೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ನಿರಂತರ ಶ್ರಮಿಸಿದ ಮಹಾಚೇತನ ಭೀಮಣ್ಣ ಖಂಡ್ರೆ ಅವರು ಸ್ಮರಣೆ ಮಾಡಿದ್ದಾರೆ.

ಸಮಸ್ತ ವೀರಶೈವ ಲಿಂಗಾಯಿತ ಸಮಾಜದ ಧ್ವನಿಯಾಗಿ, ಸಮಾಜದ ಸಂಘಟನೆಗಾಗಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಅತ್ಯಂತ ಬದ್ಧತೆಯಿಂದ, ಶಿಸ್ತುಬದ್ಧವಾದ ಯೋಜನೆಗಳಿಂದ ಅವಿರದ ಹೋರಾಡುತ್ತಿದ್ದ ಭೀಮಣ್ಣ ಖಂಡ್ರೆ ಅವರ ನಿಧನ ಆಘಾತವನ್ನೇ ಮೂಡಿಸಿದೆ. ಮೃತರ ಆತ್ಮಕ್ಕೆ ಬಸವಾದಿ ಶರಣರು ಚಿರಶಾಂತಿಯನ್ನು ಕರುಣಿಸಲೆಂದು ಶೋಕ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande