
ಕೊಪ್ಪಳ, 17 ಜನವರಿ (ಹಿ.ಸ.) :
ಆ್ಯಂಕರ್ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ (ರಿ), ಹಳಿಯಾಳ ವತಿಯಿಂದ 30 ದಿನಗಳ ಉಚಿತ ಸೋಲಾರ ಟೆಕ್ನೀಷಿಯನ್ ಮತ್ತು ಮಹಿಳೆಯರಿಗಾಗಿ ಹೊಲಿಗೆ ತರಬೇತಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಭಾಗದ ನಿರುದ್ಯೋಗ ಯುವಕ, ಯುವತಿಯರಿಗಾಗಿ ಫೆಬ್ರವರಿ ತಿಂಗಳಿನಲ್ಲಿ 30 ದಿನಗಳ ಉಚಿತ ಸೋಲಾರ ಟೆಕ್ನಿಷಿಯನ್ ಮತ್ತು ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಪ್ರಾರಂಭಿಸಲಾಗುತ್ತಿದ್ದು, ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ಸ್ವಯಂ ಉದ್ಯೋಗ ಮಾಡಲು ಈ ತರಬೇತಿಯು ಅನುಕೂಲವಾಗಲಿದ್ದು, 18 ರಿಂದ 50 ವಯಸ್ಸಿನ ಒಳಗಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಈ ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನೇತರ ಮಾಹಿತಿಗಳನ್ನು ಸಹ ಉಚಿತವಾಗಿ ನೀಡಲಾಗುವುದು.
ತರಬೇತಿಯಲ್ಲಿ ಭಾಗವಹಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕಿಸಲು ಹಾಗೂ ಸಂಸ್ಥೆಯ ವಾಟ್ಸಾಪ್ ನಂಬರಗೆ 9483485489 ಜನವರಿ 31 ರೊಳಗಾಗಿ ಹಾಯ್ ಎಂದು ಸಂದೇಶ ಕಳುಹಿಸುವುದರ ಮುಖಾಂತರ ತಮ್ಮ ಹೆಸರನ್ನು ನೊಂದಾಯಿಸವುದು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 9980510717, 8970145354, 9482188780 ಗೆ ಸಂಪರ್ಕಿಸುವಂತೆ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್