ಕೋಲಾರ ಜಿಲ್ಲಾ ಛಲವಾದಿ ಸಮಾವೇಶದ ಪೂರ್ವಭಾವಿ ಸಭೆ
ಕೋಲಾರ ಜಿಲ್ಲಾ ಛಲವಾದಿ ಸಮಾವೇಶದ ಪೂರ್ವಭಾವಿ ಸಭೆ
ಕೋಲಾರದಲ್ಲಿ ಛಲವಾದಿ ಸಮಾವೇಶದ ಪೂರ್ವಭಾವಿ ಸಭೆ ಶನಿವಾರ ನಡೆಯಿತು.


ಕೋಲಾರ, ೧೭ ಜನವರಿ (ಹಿ.ಸ) :

ಆ್ಯಂಕರ್ : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಛಲವಾದಿ ಮಹಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು ಶನಿವಾರ ನಚಿಕೇತನ ನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಧ್ಯಾನ ಮಂದಿರದಲ್ಲಿ ಮಹಾ ಸಮಾವೇಶದ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು ಎಂದು ಛಲವಾಧಿ ಮಹಾಸಭಾ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕ ಅಯ್ಯೂರು ರವೀಂದ್ರನಾಥ ತಿಳಿಸಿದರು.

ದಿವಂಗತ ಐಎಎಸ್ ಅಧಿಕಾರಿ ಶಿವರಾಂ ಹುಟ್ಟುಹಾಕಿದ ಛಲವಾದಿ ಮಹಾಸಭಾ ಸಂಘಟನೆಯನ್ನು ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ನಾವೆಲ್ಲರೂ ಮಾಡಬೇಕಿದೆ. ಈಗಾಗೀ ಜಿಲ್ಲೆಯಲ್ಲಿ ಛಲವಾಧಿ ಮಹಾಸಭಾದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಪೂರ್ವಭಾವಿ ಸಭೆಯಲ್ಲಿ ಹಲವು ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊ0ಡು ಯಾವ ರೀತಿಯಲ್ಲಿ ಸಮಾವೇಶ ನಡೆಸಬೇಕು ಎಂದು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಛಲವಾಧಿ ಮಹಾಸಭಾದ ಗೌರವಾಧ್ಯಕ್ಷ ಎಸ್. ಮುನಿಯಪ್ಪ ಮಾತನಾಡಿ, ಛಲವಾಧಿ ಮಹಾಸಭಾದ ಸಂಘಟನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಡಾ.ಅಂಬೇಡ್ಕರ್ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಮುಖಂಡರು ಮಾಹಿತಿ ನೀಡಿದ್ದಾರೆ. ಛಲವಾಧಿ ಮಹಾಸಭಾದ ಉಪಾಧ್ಯಕ್ಷೆ ಮಂಜುಳಾ ಆರ್ ಮಾತನಾಡಿ, ಜಿಲ್ಲೆಯಲ್ಲಿ ಛಲವಾಧಿ ಮಹಾಸಭಾ ಬೃಹತ್ ಸಮಾವೇಶ ನಡೆಸುವ ಜೊತೆಗೆ ಸಂಘಟನೆಯ ರಥವನ್ನು ಮುನ್ನಡೆಸಲು ಶಕ್ತಿಮೀರಿ ಪ್ರಯುತ್ನ ನಡೆಸಲಾಗುವುದು ಎಂದರು.

ಸಭೆಯಲ್ಲಿ ಛಲವಾಧಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ನಾರಾಯಣಪ್ಪ, ಜಂಟಿ ಕಾರ್ಯದರ್ಶಿ ಎಸ್. ಮುನಿವೆಂಕಟಪ್ಪ, ಸಂಘಟನೆ ಕಾರ್ಯದರ್ಶಿ ರಾಧಕೃಷ್ಣಪ್ಪ, ಖಜಾಂಚಿ ಕೃಷ್ಣಪ್ಪ, ಸದಸ್ಯ ಆಶೋಕ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.

ಚಿತ್ರ : ಕೋಲಾರದಲ್ಲಿ ಛಲವಾದಿ ಸಮಾವೇಶದ ಪೂರ್ವಭಾವಿ ಸಭೆ ಶನಿವಾರ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande