
ಪ್ರಯಾಗರಾಜ್, 15 ಜನವರಿ (ಹಿ.ಸ.) :
ಆ್ಯಂಕರ್ : ಮಾಘ ಮೇಳದ ಎರಡನೇ ಪ್ರಮುಖ ಸ್ನಾನೋತ್ಸವವಾದ ಮಕರ ಸಂಕ್ರಾಂತಿಯಂದು, ಪ್ರಯಾಗರಾಜನ ಪವಿತ್ರ ಸಂಗಮ ದಡಗಳಲ್ಲಿ ಭಕ್ತರ ಅಪಾರ ದಂಡೆ ಕಂಡು ಬಂದಿತು. ಬೆಳಿಗ್ಗೆ 8 ಗಂಟೆಯವರೆಗೆ ಸುಮಾರು 21 ಲಕ್ಷ ಭಕ್ತರು ಗಂಗಾ–ಯಮುನಾ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಆಡಳಿತವು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಎಲ್ಲಾ ಘಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣೆಯ ಮೂಲಕ ನಿರಂತರ ನಿಗಾವಹಿಸಲಾಗಿದೆ.
ಮಾಘ ಮೇಳದ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಪಾಂಡೆ ಮಾತನಾಡಿ, “ಬೆಳಿಗ್ಗೆಯಿಂದಲೇ ಸಂಗಮ ಪ್ರದೇಶದತ್ತ ಭಕ್ತರ ನಿರಂತರ ಹರಿವು ಕಂಡುಬಂದಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ 21 ಲಕ್ಷಕ್ಕೂ ಹೆಚ್ಚು ಭಕ್ತರು ಭಕ್ತಿ–ಶ್ರದ್ಧೆಯಿಂದ ಪವಿತ್ರ ಸ್ನಾನ ಮಾಡಿದ್ದಾರೆ. ಭಕ್ತರ ಅನುಕೂಲತೆ, ಭದ್ರತೆ ಹಾಗೂ ಮಾಘ ಮೇಳದ ಸುಗಮ ನಿರ್ವಹಣೆಗೆ ಆಡಳಿತ ಸಂಪೂರ್ಣ ಸಿದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ” ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa