ವಿಶ್ವ ಹಿಂದಿ ದಿನ ; ಓಂ ಬಿರ್ಲಾ, ನಿತಿನ್ ಗಡ್ಕರಿ ಸೇರಿ ಕೇಂದ್ರ ಸಚಿವರ ಶುಭಾಶಯ
ನವದೆಹಲಿ, 10 ಜನವರಿ (ಹಿ.ಸ.) : ಆ್ಯಂಕರ್ : ವಿಶ್ವ ಹಿಂದಿ ದಿನದ ಅಂಗವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಕೇಂದ್ರ ಸಚಿವರು ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಮಾಜಿ
Hindi diwas


ನವದೆಹಲಿ, 10 ಜನವರಿ (ಹಿ.ಸ.) :

ಆ್ಯಂಕರ್ : ವಿಶ್ವ ಹಿಂದಿ ದಿನದ ಅಂಗವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಕೇಂದ್ರ ಸಚಿವರು ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ, ವಿಶ್ವ ಹಿಂದಿ ದಿನದ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಹಿಂದಿ ಕೇವಲ ಒಂದು ಭಾಷೆಯಲ್ಲ ಅದು ಭಾರತದ ಆತ್ಮ, ಸಂವೇದನೆ ಮತ್ತು ಸಾಂಸ್ಕೃತಿಕ ಏಕತೆಯ ಶಕ್ತಿಶಾಲಿ ಅಭಿವ್ಯಕ್ತಿ. ಹಿಂದಿ ನಮ್ಮ ವೈವಿಧ್ಯಮಯ ದೇಶವನ್ನು ಒಂದಾಗಿ ಕೊಂಡೊಯ್ಯುವ ಸೇತುವೆಯಾಗಿದೆ. ಹಿಂದಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳು ವಿಶ್ವ ವೇದಿಕೆಯಲ್ಲಿ ಇನ್ನಷ್ಟು ಬಲಿಷ್ಠವಾಗಲಿ, ಮಾನವೀಯತೆಯನ್ನು ಒಂದಾಗಿಸಿ ಜ್ಞಾನ ಹರಡುವಿಕೆಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಲಿ ಎಂದು ಆಶಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,

ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿರುವ ಹಿಂದಿಗೆ ಸಮರ್ಪಿತವಾದ ವಿಶ್ವ ಹಿಂದಿ ದಿನದ ಹಾರ್ದಿಕ ಶುಭಾಶಯಗಳು. ಹಿಂದಿ ಭಾರತವನ್ನು ಏಕತೆಯ ದಾರಿಯಲ್ಲಿ ಬಿಗಿಯಾಗಿ ಬಂಧಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು,

ಹಿಂದಿ ಕೇವಲ ಸಂವಹನದ ಮಾಧ್ಯಮವಲ್ಲ; ಅದು ಭಾರತದ ಆತ್ಮ, ಸಂವೇದನೆ ಮತ್ತು ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ. ಅದರ ಸರಳತೆ ಹಾಗೂ ಸಮಗ್ರತೆಯು ಭಾರತದ ವೈವಿಧ್ಯಮಯ ಸಮಾಜವನ್ನು ಭಾವನಾತ್ಮಕವಾಗಿ ಸದಾ ಒಂದಾಗಿಸಿದೆ ಎಂದು ಹೇಳಿದರು.

ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ , ಹಿಂದಿ ಕೇವಲ ಭಾಷೆಯಲ್ಲ ಅದು ಭಾರತದ ಆತ್ಮದ ಅಭಿವ್ಯಕ್ತಿ. ಅದು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಜೀವನ ದರ್ಶನದ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande