ಸೋಮನಾಥನ ಸಾವಿರ ವರ್ಷಗಳ ಗಾಥೆ ಡ್ರೋನ್ ಪ್ರದರ್ಶನ ; ಮಂತ್ರಮುಗ್ಧರಾದ ಪ್ರಧಾನಿ ಮೋದಿ
ಸೋಮನಾಥ, 11 ಜನವರಿ (ಹಿ.ಸ.) : ಆ್ಯಂಕರ್ : ಶತಮಾನಗಳ ಕಾಲ ಅನೇಕ ದಾಳಿಗಳನ್ನು ಎದುರಿಸಿದರೂ ಭಾರತದ ಅಚಲ ಚೈತನ್ಯದ ಸಂಕೇತವಾಗಿ ಹೆಮ್ಮೆಯಿಂದ ನಿಂತಿರುವ ಸೋಮನಾಥ ದೇವಾಲಯದ ಸಾವಿರ ವರ್ಷಗಳ ಇತಿಹಾಸ, ಶನಿವಾರ ರಾತ್ರಿ ಅರಬ್ಬಿ ಸಮುದ್ರದ ಮೇಲಿನ ಆಕಾಶದಲ್ಲಿ ಅದ್ಭುತ ದೃಶ್ಯರೂಪ ಪಡೆದುಕೊಂಡಿತು. ಮೂರು ಸಾವಿರ
Drone-show-on-arab-sea-today-pm-participated-


ಸೋಮನಾಥ, 11 ಜನವರಿ (ಹಿ.ಸ.) :

ಆ್ಯಂಕರ್ : ಶತಮಾನಗಳ ಕಾಲ ಅನೇಕ ದಾಳಿಗಳನ್ನು ಎದುರಿಸಿದರೂ ಭಾರತದ ಅಚಲ ಚೈತನ್ಯದ ಸಂಕೇತವಾಗಿ ಹೆಮ್ಮೆಯಿಂದ ನಿಂತಿರುವ ಸೋಮನಾಥ ದೇವಾಲಯದ ಸಾವಿರ ವರ್ಷಗಳ ಇತಿಹಾಸ, ಶನಿವಾರ ರಾತ್ರಿ ಅರಬ್ಬಿ ಸಮುದ್ರದ ಮೇಲಿನ ಆಕಾಶದಲ್ಲಿ ಅದ್ಭುತ ದೃಶ್ಯರೂಪ ಪಡೆದುಕೊಂಡಿತು.

ಮೂರು ಸಾವಿರಕ್ಕೂ ಹೆಚ್ಚು ಡ್ರೋನ್‌ಗಳ ಸಂಯೋಜನೆಯೊಂದಿಗೆ ಆಯೋಜಿಸಲಾದ ಭವ್ಯ ಪ್ರದರ್ಶನವು ದೇವಾಲಯದ ವೈಭವ, ತ್ಯಾಗ ಮತ್ತು ಪುನರುತ್ಥಾನದ ಕಥೆಯನ್ನು ಮನಮುಟ್ಟುವಂತೆ ನಿರೂಪಿಸಿತು.

ಈ ವಿಶಿಷ್ಟ ಡ್ರೋನ್ ಶೋ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂತ್ರಮುಗ್ಧಗೊಳಿಸಿತು. ಕಾರ್ಯಕ್ರಮದ ಹಲವು ಕ್ಷಣಗಳನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅರಬ್ಬಿ ಸಮುದ್ರದ ಮೇಲಿನ ಆಕಾಶದಲ್ಲಿ ಬೆಳಕಿನ ಚಿತ್ತಾರಗಳ ಮೂಲಕ ಸೋಮನಾಥ ದೇವಾಲಯ, ತ್ರಿಶೂಲ್, ಓಂ, ವೀರ ಹಮೀರ್‌ಜಿ, ಅಹಲ್ಯಾಬಾಯಿ ಹೋಳ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಪ್ರಧಾನಿ ಮೋದಿಯ ವೈಮಾನಿಕ ಚಿತ್ರಗಳು ಮೂಡಿ ಬಂದವು. ಪ್ರತಿಯೊಂದು ರೂಪಾಂತರದೊಂದಿಗೆ ದೇವಾಲಯ ಸಂಕೀರ್ಣ ‘ಹರ ಹರ ಮಹಾದೇವ್’ ಘೋಷಣೆ ಮತ್ತು ಚಪ್ಪಾಳೆಗಳ ನಾದದಿಂದ ಪ್ರತಿಧ್ವನಿಸಿತು.

ಡ್ರೋನ್ ಪ್ರದರ್ಶನದ ನಂತರ ನಡೆದ ವರ್ಣರಂಜಿತ ಪಟಾಕಿ ಪ್ರದರ್ಶನವು ಪ್ರೇಕ್ಷಕರನ್ನು ಇನ್ನಷ್ಟು ಆಕರ್ಷಿಸಿತು. ಈ ಸಂಪೂರ್ಣ ಕಾರ್ಯಕ್ರಮ ಪವಿತ್ರ ಸೋಮನಾಥ ಧಾಮವನ್ನು ಹಬ್ಬದ ಸಂಭ್ರಮ ಹಾಗೂ ಆಧ್ಯಾತ್ಮಿಕ ಉಲ್ಲಾಸದಿಂದ ತುಂಬಿತು. ಪ್ರಧಾನಿ ಮೋದಿಯವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಹಲವು ರಾಜ್ಯ ಸಚಿವರು ಉಪಸ್ಥಿತರಿದ್ದರು.

ಸೋಮನಾಥನ ಕಥೆ ಕೇವಲ ಒಂದು ದೇವಾಲಯದ ಇತಿಹಾಸವಲ್ಲ ಅದು ರಾಷ್ಟ್ರದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ರಕ್ಷಿಸಲು ತ್ಯಾಗ ಮಾಡಿದ ಭಾರತ ಮಾತೆಯ ಅಸಂಖ್ಯಾತ ಪುತ್ರರ ಅದಮ್ಯ ಧೈರ್ಯದ ಕಥೆಯಾಗಿದೆ. ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿರುವ ಸೋಮನಾಥನು ಭಾರತದ ಮೊದಲ ಜ್ಯೋತಿರ್ಲಿಂಗವಾಗಿ ಪ್ರಸಿದ್ಧ. ಪ್ರಭಾಸ್ ಕ್ಷೇತ್ರವೆಂದು ಕರೆಯಲ್ಪಡುವ ಈ ಪವಿತ್ರ ಭೂಮಿ, ನಂಬಿಕೆ, ಹೋರಾಟ ಮತ್ತು ಪುನರುತ್ಥಾನದ ಜೀವಂತ ಸಂಕೇತವಾಗಿದೆ.

ಮಧ್ಯಕಾಲೀನ ಯುಗದಲ್ಲಿ ಮಹಮ್ಮದ್ ಘಜ್ನಿ, ಅಲಾವುದ್ದೀನ್ ಖಿಲ್ಜಿ ಹಾಗೂ ಔರಂಗಜೇಬ್ ಮೊದಲಾದ ಆಕ್ರಮಣಕಾರರಿಂದ ದೇವಾಲಯವು ಹಲವು ಬಾರಿ ಧ್ವಂಸಗೊಂಡರೂ, ರಾಜಾ ಭೀಮದೇವ್, ಸಿದ್ಧರಾಜ್ ಜೈಸಿಂಗ್ ಮತ್ತು ಕುಮಾರ್‌ಪಾಲ್‌ರಂತಹ ವೀರರು ಅದನ್ನು ಪುನರ್ ನಿರ್ಮಿಸಿದರು. ಹಮೀರ್ ಗೋಹಿಲ್ ಮತ್ತು ವೇಗದ ಭಿಲ್‌ರಂತಹ ಯೋಧರು ತಮ್ಮ ನಂಬಿಕೆಯನ್ನು ಕಾಯ್ದುಕೊಳ್ಳಲು ಪ್ರಾಣ ತ್ಯಾಗ ಮಾಡಿದರು.

ಸ್ವಾತಂತ್ರ್ಯ ನಂತರ, ಜುನಾಗಢ ವಿಮೋಚನೆಯ ಬಳಿಕ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢಸಂಕಲ್ಪದಿಂದ ಆಧುನಿಕ ಸೋಮನಾಥ ದೇವಾಲಯದ ಕನಸು ಸಾಕಾರವಾಯಿತು. 1951ರ ಮೇ 11ರಂದು ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೇವಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ನಾಗರ ಶೈಲಿಯ ಶ್ರೇಷ್ಠ ಉದಾಹರಣೆಯಾಗಿರುವ ಇಂದಿನ ಸೋಮನಾಥ ದೇವಾಲಯವನ್ನು ಪ್ರಸಿದ್ಧ ವಾಸ್ತುಶಿಲ್ಪಿ ಪ್ರಭಾ ಶಂಕರ್ ಸೋಂಪುರ ವಿನ್ಯಾಸಗೊಳಿಸಿದ್ದು, ಅದು ಕೈಲಾಶ ಮಹಾಮೇರು ಪ್ರಸಾದ್ ಶೈಲಿಯ ವೈಭವವನ್ನು ಪ್ರತಿಬಿಂಬಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande