ನಾಳೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಕುರಿತು ತರಬೇತಿ
ವಿಜಯಪುರ, 10 ಜನವರಿ (ಹಿ.ಸ.) : ಆ್ಯಂಕರ್ : ಡಿಜಿಟಲ್ ಇ-ಸ್ಟ್ಯಾಪ್ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸುವ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ ಉಪ ನೊಂದಣಾಧಿಕಾರಿಗಳು, ಸಿಬ್ಬಂದಿ ವರ್ಗ, ಡಿಇಓಗಳು, ಉಪ ನೊಂದಣಿ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ದಸ್ತು ಬರಹಗಾರರು, ವಕೀಲರು,
ನಾಳೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಕುರಿತು ತರಬೇತಿ


ವಿಜಯಪುರ, 10 ಜನವರಿ (ಹಿ.ಸ.) :

ಆ್ಯಂಕರ್ : ಡಿಜಿಟಲ್ ಇ-ಸ್ಟ್ಯಾಪ್ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸುವ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ ಉಪ ನೊಂದಣಾಧಿಕಾರಿಗಳು, ಸಿಬ್ಬಂದಿ ವರ್ಗ, ಡಿಇಓಗಳು, ಉಪ ನೊಂದಣಿ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ದಸ್ತು ಬರಹಗಾರರು, ವಕೀಲರು, ಬ್ಯಾಂಕ್ ಪ್ರತಿನಿಧಿಗಳು, ಸಿಎಸ್‍ಸಿ ಕರ್ನಾಟಕ ಒನ್ ಕೇಂದ್ರಗಳ ನಿರ್ವಾಕರು ಹಾಗೂ ಆಸಕ್ತ ಸಾರ್ವಜನಿಕರಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಸೃಜನೆ ಪರಿಶೀಲನೆ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಬಳಕೆ ಕುರಿತು ಜನವರಿ 11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ನೊಂದಣಿ ಕಚೇರಿಯಲ್ಲಿ ತರಬೇತಿ ಆಯೋಜಿಸಲಾಗಿದೆ.

ಈ ತರಬೇತಿಗೆ ನೊಂದಣಿ ಕಚೇರಿಯ ಅಧೀನದಲ್ಲಿರುವ ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವಂತೆ ಉಪನೊಂದಣಾಧಿಕಾರಿಗಳು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande