
ಹಾವೇರಿ, 10 ಜನವರಿ (ಹಿ.ಸ.) :
ಆ್ಯಂಕರ್ : ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಭಾನುವಾರ ಹಾವೇರಿ ಲೋಕ ಸಭಾ ಕ್ಷೇತ್ರದ ಸಂಸದರ ಕ್ರೀಡಾ ಮಹೋತ್ಸವ 2025-26 ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಸಂಸದ ಬಸವರಾಜ ಬೊಮ್ಮಾಯಿಯವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕಬಡ್ಡಿ, ಖೋ ಖೊ, ವಾಲಿಬಾಲ್, ಹಗ್ಗ ಜಗ್ಗಾಟ ಸೇರಿದಂತೆ ಗುಂಪು ಕ್ರೀಡೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ 100 ಮೀಟರ್, 400 ಮೀಟರ್, 400x100 ಮೀಟರ್ ರಿಲೇ, ಉದ್ದ ಜಿಗಿತ, ಶಾಟ್ ಫುಟ್, ಚಕ್ರ ಎಸೆತ, ಗೋಣಿ ಚೀಲದ ಓಟ ಹಾಗೂ ವಿಶೇಷ ಚೇತನರಿಗೆ 50 ಮೀಟರ ಓಟದ ಕ್ರೀಡೆಗಳು ನಡೆಯಲಿವೆ.
16 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಈ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಮಹೊತ್ವಸ ಯಶಸ್ವಿ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa