ಜನರ ಆರ್ಥಿಕತೆ ಬೆಳೆದರೆ ದೇಶದ ಆರ್ಥಿಕತೆ ಬೆಳೆಯುತ್ತದೆ : ಬಸವರಾಜ ಬೊಮ್ಮಾಯಿ
ಗದಗ, 10 ಜನವರಿ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಯೋಜನೆಗಳಿಂದ ನಮ್ಮ ದೇಶದಲ್ಲಿ ಬಡವರು ಸ್ವಾಭಿಮಾನದಿಂದ ಬದುಕುವ ಕೆಲಸ ಆಗಿದೆ. ಇದರ ಪರಿಣಾಮ ಪ್ರತಿಯೊಬ್ಬ ಭಾರತೀಯನಿಗೆ ಹಣ ಗಳಿಸುವ ಮತ್ತು ಖರ್ಚು ಮಾಡುವ ಶಕ್ತಿ ಬಂದಿದೆ. ಸರ್ಕಾರ ಶ್ರೀಮಂತ ಇದ್ದರೆ ಬಹಳ ದೊಡ್ಡ ಪ್ರ
BsB


ಗದಗ, 10 ಜನವರಿ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಯೋಜನೆಗಳಿಂದ ನಮ್ಮ ದೇಶದಲ್ಲಿ ಬಡವರು ಸ್ವಾಭಿಮಾನದಿಂದ ಬದುಕುವ ಕೆಲಸ ಆಗಿದೆ. ಇದರ ಪರಿಣಾಮ ಪ್ರತಿಯೊಬ್ಬ ಭಾರತೀಯನಿಗೆ ಹಣ ಗಳಿಸುವ ಮತ್ತು ಖರ್ಚು ಮಾಡುವ ಶಕ್ತಿ ಬಂದಿದೆ. ಸರ್ಕಾರ ಶ್ರೀಮಂತ ಇದ್ದರೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಆದರೆ, ಜನರು ಶ್ರೀಮಂತ ಇದ್ದರೆ ಅವರ ಆರ್ಥಿಕತೆ ಬೆಳೆದರೆ ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಗದಗ ಜಿಲ್ಲೆಯ ಗಜೇಂದಗಢದ ದಿ. ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿ. ನ ಮಹಿಳಾ ಸಬಲೀಕರಣ ಸಾಲ ವಿತರಣೆ ಹಾಗೂ ಗ್ರಾಹಕರ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಬಂದ ನಂತರ ಸ್ಥಳೀಯ ಸರ್ಕಾರಗಳು ಅಂದರೆ ನಮ್ಮನ್ನು ನಾವೇ ಆಳಿಕೊಳ್ಳುವುದು ಅಂತ ಇದ್ದವು. ಅವರು ಸ್ಥಳೀಯವಾಗಿ ಊರಿನ ಅಭಿವೃದ್ಧಿ, ಜನರ ನಡುವೆ ಸುಸಂಸ್ಕೃತ ವಾತಾವರಣ, ಊರಿನ ಆರ್ಥಿಕತೆ ಬೆಳೆಸುವುದು, ಈಗ ಊರಿನ ಆರ್ಥಿಕತೆ ಅಂದರೆ ಹಣಕಾಸಿನ ಸಂಸ್ಥೆ ಬೇರೆ ನಾವು ಬೇರೆ ಅಂತ ಅಂದುಕೊಳ್ಳುತ್ತೇವೆ. ನಮ್ಮೂರಿಗೆ ಕರ್ನಾಟಕ ಬ್ಯಾಂಕ್ ಕೊಡಿ, ಮಲಪ್ರಭಾ ಬ್ಯಾಂಕ್ ಕೊಡಿ ಅಂತ ಬೇಡಿಕೆ ಬರುತ್ತವೆ. ನಾವು ಇನ್ನೊಬ್ಬರ ಬ್ಯಾಂಕಿನ ಮುಂದೆ ಹೋಗಿ ಕೈ ಚಾಚುವ ಬದಲು ನಾವೇ ಮಾಲಕರಾಗುವುದು ನಿಮ್ಮ ಶಕ್ತಿ ಎಷ್ಟು ದೊಡ್ಡದಿದೆ ಎನ್ನುವುದು ತೋರಿಸುತ್ತವೆ. ಭಾರತ ದೇಶ ಬಹಳ ಬಲಿಷ್ಠವಾಗಿ ಆರ್ಥಿಕವಾಗಿ ಬೆಳೆಯುವ ದೇಶ. ಕೊವಿಡ್ ಸಂದರ್ಭದಲ್ಲಿ ಅಮೇರಿಕ ಅನ್ನುವ ದೊಡ್ಡ ದೇಶ ನೆಲಕಚ್ಚಿತ್ತು. ಅಮೇರಿಕ ಈಗ ಶೇ 2 ರಷ್ಟು ಬೆಳವಣಿಗೆ ಆಗುತ್ತಿದೆ. ಜಪಾನ್ ಶೇ 4. ಚೀನಾ ಶೇ 3 ರಷ್ಟು ಬೆಳವಣಿಗೆ ಆಗುತ್ತಿದೆ. ಆದರೆ, ಭಾರತ ಮಾತ್ರ ಶೇ 7.5 ರಷ್ಟು ಬೆಳವಣಿಗೆ ಆಗುತ್ತಿದೆ. ಇದರಲ್ಲಿ ಸರ್ಕಾರದ ನೀತಿ, ಕಾರ್ಮಿಕರ, ರೈತರ ಶ್ರಮ ಉದ್ಯಮಿಗಳ ಪರಿಶ್ರಮ ಶಿಕ್ಷಣ ಮತ್ತು ಉದ್ಯೋಗ ಹೆಚ್ಚಳ ಆಗಿರುವುದು ಕಾರಣ ಎಂದು ಹೇಳಿದರು.

ಮೋದಿಯವರು ಪಧಾನಿ ಆದ ನಂತರ ಅವರು ಮಾಡಿರುವ ಯೋಜನೆಗಳಿಂದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಇಂತ ಸಾಧನೆ ಯಾವುದೇ ದೇಶದಲ್ಲಿ ಆಗಿಲ್ಲ. ಬಡತನಕ್ಕಿಂತ ಮೇಲೆ ಬರುವುದು ಅಂದರೆ, ಕೈಗೆ ಕೆಲಸ, ನೀರು, ಗ್ಯಾಸ್ ಸಿಕ್ಕಿದೆ. ಬಡವ ಸ್ವಾಭಿಮಾನದಿಂದ ಬದುಕುವ ಕೆಲಸ ನಮ್ಮ ದೇಶದಲ್ಲಿ ಆಗಿದೆ. ಇದರ ಪರಿಣಾಮ ಪ್ರತಿಯೊಬ್ಬ ಭಾರತೀಯನಿಗೆ ಹಣ ಗಳಿಸುವ ಮತ್ತು ಖರ್ಚು ಮಾಡುವ ಶಕ್ತಿ ಬಂದಿದೆ. ಸರ್ಕಾರ ಶ್ರೀಮಂತ ಇದ್ದರೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಆದರೆ, ಜನರು ಶ್ರೀಮಂತ ಇದ್ದರೆ ಅವರ ಆರ್ಥಿಕತೆ ಬೆಳೆದರೆ ದೇಶದ ಆರ್ಥಿಕತೆ ಬೆಳೆಯುತ್ತದೆ. ಜನರ ಕೈಯಲ್ಲಿ ಹಣ ಇದ್ದರೆ ದೇಶ ಬೆಳೆಯುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande