
ಕೋಲಾರ, ೧೦ ಜನವರಿ (ಹಿ.ಸ) :
ಆ್ಯಂಕರ್ : ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು, ರೈತರನ್ನು ಬಡ್ಡಿಮಾಫಿಯಾದಿಂದ ರಕ್ಷಿಸಲು ಬದ್ದತೆ ಹೊಂದಿರುವವರು ಮಾತ್ರ ಸಹಕಾರಿಗಳಾಗಲು ಸಾಧ್ಯ ಎಂಬ ಧ್ಯೇಯದೊಂದಿಗೆ ೨೦ ಲಕ್ಷದಲ್ಲಿ ಆರಂಭವಾದ ಎಂದು ಗೋಲ್ಡ್ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಲಿಮಿಟೆಡ್ ಇದೀಗ ೧೦ ಕೋಟಿರೂ ವಹಿವಾಟು ನಡಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.
ನಗರದಲ್ಲಿನ ಸಂಸ್ಥೆಯ ಕಚೇರಿಯಲ್ಲಿ ಈ ೨೦೨೬ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಹಕಾರ ರಂಗ ಬಲವರ್ಧನೆಯಾದರೆ ಮಾತ್ರವೇ ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ನೆರವು ಸಿಗಲು ಸಾಧ್ಯ. ಸಹಕಾರ ಸಂಘಗಳನ್ನು ಸಾಲ ಪಡೆಯಲು ಮಾತ್ರ ಬಳಸಿಕೊಳ್ಳದೇ ಅಲ್ಲೇ ಉಳಿತಾಯ ಮಾಡುವ ಮನೋಭಾವವೂ ಜನತೆಯಲ್ಲಿ ಹೆಚ್ಚಬೇಕಾಗಿದೆ, ಈ ನಿಟ್ಟಿನಲ್ಲಿ ಗ್ರಾಮೀಣ,ನಗರ ಪ್ರದೇಶದ ಜನತೆ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯುವ ಮೂಲಕ ಇಲ್ಲಿ ಸಿಗುವ ಸೌಲಭ್ಯ ಬಳಸಿಕೊಳ್ಳಲು ಮುಂದೆ ಬರಬೇಕು.
ಕೋಲಾರ ಜಿಲ್ಲೆ ಉಳಿದಿರುವುದೇ ಸಹಕಾರಿ ಕ್ಷೇತ್ರದಿಂದ ಎಂದ ಅವರು, ಗ್ರಾಮೀಣ ಹಾಲು ಉತ್ಪಾದಕರ ಸಹಕಾರ ಸಂಘಗಳಿ0ದಾಗಿ ಜಿಲ್ಲೆಯ ರೈತರು ಆರ್ಥಿಕವಾಗಿ ಉಸಿರಾಡುತ್ತಿದ್ದಾರೆ, ಇಲ್ಲವಾದಲ್ಲಿ ಇತರೆ ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲೂ ರೈತರ ಆತ್ಮಹತ್ಯೆಯನ್ನು ಕಾಣಬೇಕಾಗಿತ್ತು ಎಂದು ತಿಳಿಸಿ, ಸಹಕಾರಿ ರಂಗದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೇ ಜನರ ಸಹಭಾಗಿತ್ವದಲ್ಲಿ ಮುಂದುವರೆಸಬೇಕು ಎಂದು ತಿಳಿಸಿದರು.
ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸಬೇಕು, ಈ ವಿಷಯದಲ್ಲಿ ನಿಷ್ಟೂರದಿಂದ ನಡೆದುಕೊಳ್ಳುವ ಅಗತ್ಯವಿದೆ, ಮತ್ತಷ್ಟು ಮಂದಿಗೆ ಸಾಲ ನೀಡಬೇಕಾದಲ್ಲಿ ಸಾಲ ಮರುಪಾವತಿ ಅತಿ ಮಹತ್ವ ಪಡೆದುಕೊಂಡಿದೆ ಎಂದ ಅವರು, ಸಾಲ ಮರುಪಾವತಿಯಲ್ಲಿ ನಿರ್ದೇಶಕರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗೋಲ್ಡ್ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಲಿ. ನ ಉಪಾಧ್ಯಕ್ಷ ಎನ್.ರಂಗಯ್ಯ, ನಿರ್ದೇಶಕರಾದ ವಿ.ಶ್ರೀರಾಮ್, ವರಲಕ್ಷಿö್ಮ,ಪರ್ವತ್ ಸ್ಪೋರ್ಟ್ಸ್ನ ರೋಟರಿ ಆನಂದರೆಡ್ಡಿ, ಸೊಸೈಟಿ ನಿರ್ದೇಶಕರಾದ ಡಿ.ನಾಗರಾಜಪ್ಪ, ಎ.ಎಸ್.ನಂಜು0ಡೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಕೆ.ಎಂ.ಸುಬ್ಬಾರೆಡ್ಡಿ, ಎಂ. ಲೋಕೇಶಮೂರ್ತಿ, ಸಿ. ನಾಗರಾಜ್, ವೈ.ಎನ್.ವೆಂಕಟರಮಣಪ್ಪ,ಎಸ್.ವಿ.ನಾರಾಯಣರೆಡ್ಡಿ, ಶ್ರೀದೇವಿ, ಹೆಚ್.ಎನ್.ನಾಗೇಶ್, ಸಿಬ್ಬಂದಿ ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಚಿತ್ರ ; ಕೋಲಾರದಲ್ಲಿ ಗೋಲ್ಡ್ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಲಿಮಿಟೆಡ್‌ನಿಂದ ೨೦೨೬ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್