ಗ್ರಹಣ ಸಮಯದಲ್ಲಿ ದೇವಸ್ಥಾನ ಎಂದಿನಂತೆ ದರ್ಶನಕ್ಕೆ ಮುಕ್ತ
ಗದಗ, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಇಂದು ನಡೆಯಲಿರುವ ರಾಹುಗ್ರಸ್ತ ಖಗ್ರಾಸ್ ಚಂದ್ರಗ್ರಹಣದ ಹಿನ್ನೆಲೆ ಗದಗ ಜಿಲ್ಲೆಯ ಐತಿಹಾಸಿಕ ತ್ರಿಕೂಟೇಶ್ವರ ಹಾಗೂ ಸೂರ್ಯನಾರಾಯಣ ದೇವಾಲಯಗಳಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಗರ ಹೃದಯಭಾಗದಲ್ಲಿರುವ ತ್ರಿಕೂಟೇಶ್ವರ ದೇವಸ್ಥಾನವು ತನ್ನ ವಿಶಿಷ
ಪೋಟೋ


ಗದಗ, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಇಂದು ನಡೆಯಲಿರುವ ರಾಹುಗ್ರಸ್ತ ಖಗ್ರಾಸ್ ಚಂದ್ರಗ್ರಹಣದ ಹಿನ್ನೆಲೆ ಗದಗ ಜಿಲ್ಲೆಯ ಐತಿಹಾಸಿಕ ತ್ರಿಕೂಟೇಶ್ವರ ಹಾಗೂ ಸೂರ್ಯನಾರಾಯಣ ದೇವಾಲಯಗಳಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ನಗರ ಹೃದಯಭಾಗದಲ್ಲಿರುವ ತ್ರಿಕೂಟೇಶ್ವರ ದೇವಸ್ಥಾನವು ತನ್ನ ವಿಶಿಷ್ಟತೆಯಿಂದ ದೇಶವ್ಯಾಪಿಯಾಗಿ ಖ್ಯಾತಿ ಪಡೆದಿದೆ. ಇಲ್ಲಿ ಒಂದೇ ಗರ್ಭಗುಡಿಯಲ್ಲಿ ಒಂದೇ ಪಾಣಿ ಬಟ್ಟಲಿನಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳ ಉದ್ಭವ ಲಿಂಗವಿದೆ. ಅದೇ ರೀತಿ ಸಾವಿತ್ರಿ, ಗಾಯತ್ರಿ, ಸರಸ್ವತಿ ದೇವಿಯರೂ ಒಂದೇ ಗರ್ಭಗುಡಿಯಲ್ಲಿ ಪೂಜಿತವಾಗಿದ್ದಾರೆ. ಜೊತೆಗೆ ಪುರಾತನ ಸೂರ್ಯನಾರಾಯಣ ದೇವಾಲಯವೂ ಇಲ್ಲಿ ಸ್ಥಾಪಿತವಾಗಿದ್ದು, ಭಕ್ತರಿಗೆ ಆಕರ್ಷಣೆಯ ಕೇಂದ್ರವಾಗಿದೆ.

ಗ್ರಹಣದ ಸಂದರ್ಭದಲ್ಲೂ ದೇವಸ್ಥಾನ ಬಂದ್ ಆಗದೆ ಎಂದಿನಂತೆ ದರ್ಶನ ಇರಲಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಬೆಳಗ್ಗಿನಿಂದಲೇ ದೈನಂದಿನ ಪೂಜೆ-ಕೈಂಕರ್ಯಗಳು ನೆರವೇರಿಸಲ್ಪಟ್ಟಿವೆ. ಆದರೆ ಗ್ರಹಣ ಕಾಲದಲ್ಲಿ ದೇವರಿಗೆ ನಿರಂತರ ಜಲಾಭಿಷೇಕ ಮಾತ್ರ ನಡೆಯಲಿದ್ದು, ಭಕ್ತರಿಗೆ ತೀರ್ಥ-ಪ್ರಸಾದ ವಿತರಣೆ ಇರುವುದಿಲ್ಲ. ರಾತ್ರಿ ವೇಳೆ ಗ್ರಹಣ ಸಂಭವಿಸುವ ಕಾರಣ ಹೋಮ, ಹವನ ಮುಂತಾದ ಹೋಮಾಹುತಿಗಳು ಇಲ್ಲ.

ಗ್ರಹಣ ಮುಗಿದ ನಂತರ ದೇವಸ್ಥಾನದಲ್ಲಿ ಪುನಃ ಜಲಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕದಂತಹ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ವೇಳೆ ಭಕ್ತರು ದೇವರ ದರ್ಶನ ಪಡೆದುಕೊಳ್ಳಬಹುದಾಗಿದೆ. ಅರ್ಚಕರ ಹೇಳಿಕೆಯಂತೆ, ಗ್ರಹಣ ಕಾಲದಲ್ಲಿ ಜಪ, ತಪ, ದೇವರ ಸ್ಮರಣೆ ಮಾಡುವುದು ಪವಿತ್ರವಾಗಿದ್ದು, ತಮ್ಮ ದೋಷ ನಿವಾರಣೆಗಾಗಿ ಸಂಕಲ್ಪ ಮಾಡಿ ಹರಕೆ ತೀರಿಸಬಹುದಾಗಿದೆ.

ಭಕ್ತರ ಸುರಕ್ಷತೆ ಹಾಗೂ ಸರಿಯಾದ ದರ್ಶನ ವ್ಯವಸ್ಥೆಗೆ ದೇವಸ್ಥಾನ ನಿರ್ವಹಣಾ ಸಮಿತಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಚಂದ್ರಗ್ರಹಣದ ಪವಿತ್ರ ಘಳಿಗೆಯಲ್ಲಿ ತ್ರಿಕೂಟೇಶ್ವರ ಕ್ಷೇತ್ರದಲ್ಲಿ ಸಾವಿರಾರು ಭಕ್ತರ ಆಗಮನ ನಿರೀಕ್ಷಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande