ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಲೆಗಳಿಂದ ನಮ್ಮ ಸಂಸ್ಕೃತಿ, ಸಂಸ್ಕಾರ - ಸನಾತನ ಧರ್ಮ ಉಳಿದು ಬೆಳೆಯುತ್ತದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವರಾಜೇಶ್ವರಿ ಶಾಲೆಯಲ್ಲಿ ನಡೆದ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‍ನ 53ನೆಯ ವಾರ್ಷಿಕೋತ್ಸವ ಹಾಗು ಪಂಚಮ ವರ್ಷದ ಯುಗಾದಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನಲ್ಲಿ ನಿರಂತರ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳಿಂದಾಗಿ ಸನಾತನ ಧರ್ಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹ ಎಂದರು.
ಕಮ್ಮರಚೇಡು ಕಲ್ಯಾಣಸ್ವಾಮಿ ಮಠದ ಕಲ್ಯಾಣ ಶ್ರೀಗಳು, ನಮ್ಮ ಸಂಸ್ಕೃತಿ, ಧರ್ಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಬಿ. ದೇವಾನಂದ್, ಉದ್ಯಮಿ ನಾಮಾ ನಾಗರಾಜು, ಡಾ. ರಾಜಶೇಖರ್, ರಾಂ ಬ್ರಹ್ಮಂ, ತಿಮ್ಮಾರೆಡ್ಡಿ, ರಾಜಶೇಖರ್ ಅವರಿಗೆ ಯುಗಾದಿ ಪ್ರಶಸ್ತಿಯನ್ನು, ಅನಂತಪುರದ ಸಾದುಶೇಕರ್, ಚೀಲಕಲ ರಾಮಗೋವಿಂದ ಸಾಗರ್, ವಿಶಾಖಪಟ್ಟಣಂ ಸಾಮವೇದ ಬಾಲಸುಬ್ರಮಣ್ಯಂ, ಬಸಯ್ಯ, ಅಂಜಿನಪ್ಪ, ಕಡಪದ ಸಾಯಿ ಕೃಷ್ಣವೇಣಿ ಅವರಿಗೆ ರಾಘವ ಪ್ರಶಸ್ತಿ, ರವಿಕುಮಾರ್, ವೆಂಕಟೇಶ್, ಪ್ರಕಾಶ್, ಸಿದ್ದಿಮಲ್ಲಗೆ ಕಲಭೂಷನ್ ಭೀಮಪ್ಪಸೆಟ್ಟಿ ಪ್ರಶಸ್ತಿ, ವೆಂಕೋಬ ಶೆಟ್ಟಿ ಡಾ. ದೇವನ್ನ, ಟಿ.ನಾಗಭೂಷಣ್, ನೇತಿ ರಘುರಾಮ್ ಅವರಿಗೆ ಕಲಾಬಂಧು ಪಂಡರಿನಾಥ್ ಪ್ರಶಸ್ತಿ, ಮುರಳಿಮೋಹನ್, ಹನುಮಂತ ರೆಡ್ಡಿ ಅವರಿಗೆ ಧರ್ಮಾವರಂ ರಾಮಕೃಷ್ಣಮಾಚಾರ್ಯ ಪ್ರಶಸ್ತಿ, ತಿಪ್ಪೇರುದ್ರ, ಡಾ. ಸುಧಾಕರ್ ಅವರಿಗೆ ಕೋಲಾಚಲಂ ಶ್ರೀನಿವಾಸ ರಾಂ ಪ್ರಶಸ್ತಿ, ಚಂದ್ರಶೇಖರ್ ಆಚಾರಿ, ಚೂರನೂರು ಕೊಟ್ರಪ್ಪ, ವೀರೇಶಪ್ಪ ಅವರಿಗೆ
ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ, ಎ.ಎಂ.ಪಿ. ವೀರೇಶ್, ಎಲೂರು ಯಂಗನ್ನ, ರಾಮಲಿಂಗಾರೆಡ್ಡಿ ಅವರಿಗೆ ದ್ವಿಭಾಷಾ ರತ್ನ ಚಂದ್ರಶೇಖರ್ ರೆಡ್ಡಿ ಪ್ರಶಸ್ತಿ, ವಸುದ, ರೇಖಾ ಧನ್ವಂತ್ರಿಗೆ ಗಾನಕೋಗಿಲೆ ಪ್ರಶಸ್ತಿ, ಸಿ.ವಿ. ರಾವ್, ಮಜ್ಜಿಗ ಬಾಬುಗೆ ಘಂಟಸಾಲ ಪ್ರಶಸ್ತಿ, ವಿದ್ಯಾಶ್ರೀ, ಡಾ. ಧೃವ, ಅರ್ಚನಾ ಕಟ್ಟಿ, ಹರಿಣಿ, ಕುಮಾರ್ ಕೋಲಾ, ಕಟ್ಟೆ ಬಸವರಾಜಯ್ಯ, ರಾಧಾಕೃಷ್ಣ, ಸಂಜನಾ, ರಶ್ಮಿ, ಮನಸ್ವಿತ ಜೋಷಿ, ಬಿಂದು ಆಶ್ರೀತ ಅವರಿಗೆ ನಟರಾಜ ನೃತ್ಯ ಕಲಾರತ್ನ ಪ್ರಶಸ್ತಿ, ವಿ. ರಾಮಚಂದ್ರ, ಜಯರಾಜ್, ದ್ವಾರಕೀಶ್ ರೆಡ್ಡಿಗೆ ರವಿವರ್ಮ ಪ್ರಶಸ್ತಿ, ಕೊಟ್ರೇಶ್, ಮಹಾಬೂಬ್, ತಿರುಮಲಗೆ ಎಸ್.ಎಂ. ಪಂಡಿತ್ ಪ್ರಶಸ್ತಿ, ಜ್ಯೋತಿ, ರೇಣುಕಾ ಬಾವಳ್ಳಿಗೆ ಸುಭದ್ರಮ್ಮ ಮನ್ಸೂರ್ ಪ್ರಶಸ್ತಿ, ವಿಶ್ವನಾಥ್, ಎಲ್ಲನಗೌಡ, ರಂಗಾರೆಡ್ಡಿ ಗೆ ಜಾನಪದ ಕಲಾ ಪ್ರಶಸ್ತಿ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಕಲಾವಿದರ ನೃತ್ಯ, ಗಾಯನ ಪ್ರೇಕ್ಷಕರನ್ನು ರಂಜಿಸಿತು.
ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‍ನ ಗೌರವ ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಅಧ್ಯಕ್ಷ ಯಶವಂತ್ ರಾಜ ನಾಗಿರೆಡ್ಡಿ, ಕಾರ್ಯದರ್ಶಿ ವಿ. ರಾಮಚಂದ್ರ, ಉಪಾಧ್ಯಕ್ಷ ಪಿ. ಗಾದೆಪ್ಪ, ಅವ್ವಾರು ಮಂಜುನಾಥ, ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ರಾಮಕೃಷ್ಣ, ರಾಮಮೂರ್ತಿ, ನಾಗಭೂಷಣ್, ಖಜಾಂಚಿ ಡಾ. ಮಲ್ಲೇಶ್, ಡಾ. ಮಣಿಪಾಲ್, ರಘುರಾಮ್, ಶ್ರೀನಿವಾಸ ರಾವ್, ಶೇಷಾರೆಡ್ಡಿ, ಮಂಜುನಾಥ್, ಭೀಮನೇನಿ ಭಾಸ್ಕರ್ ನಾಯುಡು, ಶಿವಾಜಿರಾವು, ರಾಮಚಂದ್ರರೆಡ್ಡಿ, ರಾಜಾರೆಡ್ಡಿ, ಆಸೀಫ್ ಇನ್ನಿತರರು ವೇದಿಕೆಯಲ್ಲಿದ್ದರು.
ಸತ್ಯನಾರಾಯಣ ಅವರು ಕಾರ್ಯಕ್ರಮ ನಿರೂಪಿಸಿದರು. ಮಲ್ಲೇಶ್ ಅವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್