ಶಿಕ್ಷಕರ ವೃತ್ತಿ ಶ್ರೇಷ್ಠ ಸೇವೆ : ಎನ್ಎಸ್ ಬೋಸರಾಜು
ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಹಾಗೂ ನಾವೆಲ್ಲರು ಸ್ವಾವಲಂಬಗಳಾಗಿ ಜೀವನ ನಡೆಸುವಲ್ಲಿ ನಮ್ಮ ಹಿಂದೆ ಶಿಕ್ಷಕರ ಕೊಡುಗೆ ಪ್ರಮೂಖವಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಶಿಕ್ಷಕರ ಕೈಯಲ್ಲಿದೆ.
ಶಿಕ್ಷಕರ ವೃತ್ತಿ ಶ್ರೇಷ್ಠವಾದ ಸೇವೆಯಾಗಿದೆ- ಎನ್ಎಸ್ ಬೋಸರಾಜು


ಶಿಕ್ಷಕರ ವೃತ್ತಿ ಶ್ರೇಷ್ಠವಾದ ಸೇವೆಯಾಗಿದೆ- ಎನ್ಎಸ್ ಬೋಸರಾಜು


ಶಿಕ್ಷಕರ ವೃತ್ತಿ ಶ್ರೇಷ್ಠವಾದ ಸೇವೆಯಾಗಿದೆ- ಎನ್ಎಸ್ ಬೋಸರಾಜು


ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಹಾಗೂ ನಾವೆಲ್ಲರು ಸ್ವಾವಲಂಬಗಳಾಗಿ ಜೀವನ ನಡೆಸುವಲ್ಲಿ ನಮ್ಮ ಹಿಂದೆ ಶಿಕ್ಷಕರ ಕೊಡುಗೆ ಪ್ರಮೂಖವಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಜೀವನದ ಮೌಲ್ಯಗಳನ್ನು ಕಲಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ತಿಳಿಸಿದರು.

ರಾಯಚೂರಿನ ವಿದ್ಯಾಭಾರತ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಮಾತನಾಡಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.

ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಶಿಸ್ತಿನಿಂದ ಜೀವನ ಮಾಡಬೇಕಾದರೆ ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಣವಿಲ್ಲದೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಅಂತಹ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕರ ಸೇವೆ ಆವಿಸ್ಮರಣೀಯವಾಗಿದೆ ಎಂದು ಶಿಕ್ಷಕ ವೃತ್ತಿಯ ಶ್ರೇಷ್ಠತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಶಿಕ್ಷಕ ದಿನಾಚರಣೆಯ ಶುಭ ಕೋರಿದರು.

ಕಾರ್ಯಕ್ರಮಕ್ಕೂ ಮುನ್ನ ಸಸಿಗೆ ನೀರೆರೆಯುವ ಮೂಲಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಡಾ. ರವಿರಾಜನ್, ಖಾತ್ಯಾಯಿನಿ ಹೆಗಡೇಕಟ್ಟಿ, ವೆಂಕಟೇಶ ರಾವ್, ಹಜರಾ ಬೇಗಂ, ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ಜಯಣ್ಣ, ಜಯವಂತರಾವ್ ಪತಂಗಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಬಸವರಾಜ ಸೇರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande