ಕೊಪ್ಪಳ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾಗ್ಯನಗರದ ಗಾನಾಮೃತ ಸಂಗೀತ ಪ್ರತಿಷ್ಠಾನವು ಕೊಪ್ಪಳದ ಅಶೋಕ ದಿ ಗ್ರೇಟ್ ಇಂಗ್ಲಿಷ್ ಮಿಡಿಯಂ ಶಾಲೆಯ ರಂಗ ವೇದಿಕೆಯಲ್ಲಿ `ಸ್ವರ ಸಾಗರ’ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಅಶೋಕ ದಿ ಗ್ರೇಟ್ ಇಂಗ್ಲಿಷ್ ಮಿಡಿಯಂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ದೀಪ್ತಿ ಬುಳ್ಳಾ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಒಳ್ಳೆಯ ನಡತೆ ಮೂಡಲು ಸಂಗೀತ - ಸಾಂಸ್ಕøತಿಕ ಚಟುವಟಿಕೆಗಳು ಪೂರಕ ಎಂದರು.
ಬಸವರಾಜ ಬಂಗಾರಿ ಅವರು ಅತಿಥಿಗಳಾಗಿ, ನಿರಂತರ ಪ್ರಯತ್ನದಿಂದ ಮಾತ್ರ ಸಂಗೀತ ಒಲಿಯುತ್ತದೆ.ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದರು.
ವಿನಯ್ ಬುಳ್ಳಾ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಧಾ ಪಾಟೀಲ್ , ಸುಮೀತ್ರಾ ನಾಯ್ಕ , ಅಕ್ಷತಾ, ಮಹಾಲಕ್ಷ್ಮೀ ಕೋಣಿ ವೇದಿಕೆಯಲ್ಲಿದ್ದರು.
ಸುಗಮ ಸಂಗೀತ ರಾಮಚಂದ್ರಪ್ಪ ಉಪ್ಪಾರ, ಭಾವಗೀತೆಗಳು ಕಿರಣ್ ಕುಮಾರ್ , ಜಾನಪದ ಗೀತೆ ಪ್ರವೀಣ್ ಉಪ್ಪಾರ , ದಾಸವಾಣಿ ಪ್ರಾರ್ಥನಾ ಕೊಣಿ ಮತ್ತು ಸಂಜನಾ ಕೊಣಿ ಅವರಿಂದ ಮೂಡಿತು.
ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ್ ಸಾಥ್ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್