ಸಮ ಸಮಾಜ ನಿರ್ಮಾಣದ ಹರಿಕಾರ ಶ್ರೀ ನಾರಾಯಣ ಗುರುಜಿ : ರವಿ ಬೋಸರಾಜು
ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಜಿಲ್ಲಾಡಳಿತ, ನಗರಸಭೆ ವತಿಯಿಂದ ನಗರದ ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ‌ಯಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸ ಬೋಸರಾಜು ಅವರು ಭಾಗವಹಿಸಿ ಶ್ರೀ ನಾರಾಯಣ ಗ
ಸಮ-ಸಮಾಜ ನಿರ್ಮಾಣದ ಹರಿಕಾರ ಶ್ರೀ ನಾರಾಯಣ ಗುರುಜಿ- ರವಿ ಬೋಸರಾಜು


ಸಮ-ಸಮಾಜ ನಿರ್ಮಾಣದ ಹರಿಕಾರ ಶ್ರೀ ನಾರಾಯಣ ಗುರುಜಿ- ರವಿ ಬೋಸರಾಜು


ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಜಿಲ್ಲಾಡಳಿತ, ನಗರಸಭೆ ವತಿಯಿಂದ ನಗರದ ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ‌ಯಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸ ಬೋಸರಾಜು ಅವರು ಭಾಗವಹಿಸಿ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಮಾನವ ಕುಲದಲ್ಲಿ ಒಂದೆ ಜಾತಿ, ಒಂದೆ ಮತ, ಒಂದೆ ದೇವರು ಎಂಬ ಸಂದೇಶದೊಂದಿಗೆ ಮೌಡ್ಯತೆ ಹಾಗೂ ಜಾತಿ ಧರ್ಮದ ತಾರತಮ್ಯ ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಆದರ್ಶಪೂರ್ಣವಾದದ್ದು. ಎಲ್ಲರಲ್ಲೂ ಮಾನವೀಯತೆಯ ಸದಾಶಯವನ್ನು ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನರಸನಗೌಡ, ತಾಯನಗೌಡ, ನಾಗಿರಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶ್ರೀನಿವಾಸ ರಡ್ಡಿ, ಶ್ರೀಕಾಂತ್ ವಕೀಲ್, ಶ್ರೀನಿವಾಸ್, ಬಸವರಾಜ ಪಾಟೀಲ್ ಸೇರಿ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande