ಕೋಲಾರ, ೦೭ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ತಾಲೂಕಿನ ಹುತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೨೫ ಕೋಟಿ ವೆಚ್ಚದ ೧೦ ಎಕರೆಗಳಷ್ಟು ವಿಸ್ತೀರ್ಣದಲ್ಲಿ ೫೦೦ ವಿಧ್ಯಾರ್ಥಿಗಳ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಮಾಡಿಸಲಾಗುತ್ತದೆ ಎಂದು ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು.
ಕೋಲಾರ ತಾಲೂಕಿನ ಹುತ್ತೂರು ಗ್ರಾಮದಲ್ಲಿ ಭಾನುವಾರ ನೂತನ ಡೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭಾಗದ ಜನತೆ ನನಗೆ ನಾಲ್ಕು ಬಾರಿ ಮತ ನೀಡಿ, ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ನಿಮ್ಮಗಳ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳ ಋಣ ನನ್ನ ಮೇಲಿದೆ ಈ ಭಾಗದಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ ಇದಕ್ಕಾಗಿ ಜಿಲ್ಲೆಗೆ ಒಂದು ಅಂಬೇಡ್ಕರ್ ವಸತಿ ಶಾಲೆಯ ಮಂಜೂರು ಆಗಿದ್ದು ಅದನ್ನು ಹುತ್ತೂರು ಹೋಬಳಿಗೆ ನೀಡಿದ್ದೇನೆ ಎಂದರು.
ಹುತ್ತೂರು ಹೋಬಳಿಯ ಪ್ರತಿಯೊಂದು ಗ್ರಾಮದಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣ ಹಾಗೂ ಸಿಮೆಂಟ್ ರಸ್ತೆಗಳಿಗೆ ಸುಮಾರು ೧೦ ಕೋಟಿ ಅನುದಾನ ಮೀಸಲಿಡಲಾಗಿದೆ ಅದನ್ನು ನಿಮ್ಮ ಗ್ರಾಮದಲ್ಲಿ ಚರ್ಚೆ ಮಾಡಿ ಯಾವುದಕ್ಕೆ ಅವಶ್ಯಕತೆ ಇದೆ ಅದಕ್ಕೆ ಬಳಸಿಕೊಳ್ಳಿ ಪ್ರತಿ ಗ್ರಾಮಕ್ಕೆ ಕನಿಷ್ಠ೧೦ ರಿಂದ ೨೦ ಲಕ್ಷ ಸಿಮೆಂಟ್ ರಸ್ತೆ ಉಳಿದಿದ್ದು ಡಾಂಬರ್ ರಸ್ತೆಗೆ ನಾನು ಶಾಸಕನಾದ ಮೇಲೆ ಈ ಭಾಗದಲ್ಲಿ ಮೂರು ನಾಲ್ಕು ಬಾರಿ ರಸ್ತೆಗಳನ್ನು ಮಾಡಿಸಲಾಗಿದೆ ಆದರೂ ಕಿತ್ತುಹೋಗಿದೆ ಆದರೂ ಸಹ ಮತ್ತೊಂದು ಬಾರಿ ರಸ್ತೆ ಹಾಕಿಸುತ್ತೇನೆ ಬಿಜೆಪಿ ಸರ್ಕಾರವಿದ್ದಾಗ ಒಂದು ಹಿಡಿಯಷ್ಟು ಮಣ್ಣು ಏನಾದರೂ ಹಾಕಿದ್ದಾರೆ. ತೋರಿಸಲಿ ಎಂದರು.
ರಾಜಕೀಯ ನಿಂತ ನೀರಲ್ಲ ಚಲುಸುವ ಮೋಡಗಳು ಇದ್ದಂತೆ ಹಿಂದೆ ಎಷ್ಟೋ ಜನ ಕುಇಡ ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ ಅದೇ ರೀತಿ ಕೋಮುಲ್ ನಿರ್ದೇಶಕ ವಡಗೂರು ಹರೀಶ್ ಕೂಡ ತವರು ಮನೆಗೆ ಬರುವುದು ತಪ್ಪಲ್ಲ ಎಲ್ಲಿ ಗೌರವ ಸಿಗುತ್ತೇ ಅಲ್ಲಿ ಇದ್ದರೆ ಸೂಕ್ತ ಈಭಾಗದಲ್ಲಿ ಸೋಲಾರ್ ವಿದ್ಯುತ್ ನಿರ್ಮಾಣಕ್ಕಾಗಿ ರಸ್ತೆ ಮುಚ್ಚಲು ಹೊರಟಿದ್ದರು ಅದನ್ನು ರದ್ದು ಮಾಡಿ ಅದೇ ರಸ್ತೆ ಅಭಿವೃದ್ಧಿಗೆ ೬೦ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಹುತ್ತೂರು ಗ್ರಾಮದಲ್ಲಿ ಡೇರಿ ಕಟ್ಟಡ ಕಟ್ಟಲು ನನ್ನ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದಿಂದ ೧೦ ಲಕ್ಷ, ಕೋಮುಲ್ ೩ ಲಕ್ಷ, ಕೆಎಂಎಫ್ ೪.೫೦ ಲಕ್ಷ ಧರ್ಮಸ್ಥಳ ಸಂಘದಿAದ ೧.೫೦ ಲಕ್ಷ ಅನುದಾನ ಬಿಡುಗಡೆ ಮಾಡಿಸಿ ಮುಂದಿನ ವರ್ಷದೊಳಗೆ ಹೊಸ ಕಟ್ಟಡ ನಿರ್ಮಾಣ ಮಾಡಿಸಲಾಗುತ್ತದೆ ಎಂದರು.
ಕೋಮುಲ್ ನಿರ್ದೇಶಕ ವಡಗೂರು ಡಿ.ವಿ ಹರೀಶ್ ಮಾತನಾಡಿ ಗ್ರಾಮೀಣ ಜನತೆಯ ಆದಾಯದ ಮೂಲ ಹೈನುಗಾರಿಕೆಯಾಗಿದೆ ಇವತ್ತು ಹಾಲು ಉತ್ಪಾದಕರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಕೋಮುಲ್ ನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನನ್ನನ್ನು ಸೇರಿದಂತೆ ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು
ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶದ, ಹುತ್ತೂರು ಡೇರಿ ಅಧ್ಯಕ್ಷ ಚಂದ್ರಪ್ಪ ಕಾರ್ಯದರ್ಶಿ ಶ್ರೀಲಕ್ಷ್ಮೀ, ಕಾಂಗ್ರೆಸ್ ಮುಖಂಡರಾದ ಹರಳಕುಂಟೆ ವೆಂಕಟೇಶ್, ಮಲ್ಲಂಡಹಳ್ಳಿ ಬಾಬು, ಚಲಪತಿ, ಮಲ್ಲಂಡಹಳ್ಳಿ ಬಾಬು ನದಂಬಳ್ಳಿ ವಿಜಿಕುಮಾರ್ ತಿಮ್ಮಸಂದ್ರ ಶ್ರೀನಿವಾಸ್, ವಿಟ್ಟಪ್ಪನಹಳ್ಳಿ ಸುನಿಲ್, ಉದಯ್, ಮೋಹನ್, ಮುಂತಾದವರು ಇದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಹುತ್ತೂರು ಗ್ರಾಮದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಲು ಉತ್ಪಾದಕರ ಸಂಘ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್