ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 18ರ ವರೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಕತ್ತು ಮತ್ತು ಭುಜನೋವು, ಭುಜ ಹಿಡಿಯುವುದು, ಭುಜ ಎತ್ತುವಲ್ಲಿ ಅಶಕ್ತ(ಫ್ರೋಝನ್ ಶೋಲ್ಡರ್), ಕೀಲುಗಳಲ್ಲಿ ನೋವು, ಹಿಡಿತ, ಊತ (ರುಮಟಾಯ್ಡ ಅರ್ಥರೈಟಿಸ್) ರೋಗ, ಕೀಲುಗಳಲ್ಲಿ ನೋವು, ಸಂಧಿಗಳ ನೋವು ಹಾಗೂ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ (ಆಸ್ಟಿಯೊಪೋರೊಸಿಸ್) ಸೇರಿದಂತೆ ನಾನಾ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ನೀಡಲಾಗುವುದು.
ಸೆಪ್ಟೆಂಬರ್ 11 ರಂದು ದೇಶದ ಪ್ರತಿಷ್ಠಿತ ಆಯುರ್ವೇದ ಸಂಸ್ಥೆ ಝಂಡು ಹೆಲ್ತಕೇರ್ ಅವರ ಸಹಯೋಗದಲ್ಲಿ ಮೊದಲಿಗೆ ಬರುವ 100 ಜನರಿಗೆ ವಿಶೇಷವಾಗಿ ಮೂಳೆಗಳ ಸಾಂಧ್ರತೆ ಮಾಪನ ಯಂತ್ರದಿಂದ ಉಚಿತ ತಪಾಸಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ.7975160825 ಮತ್ತು 9513397413 ಸಂಪರ್ಕಿಸಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande