ಮರಿಯಮ್ಮನಹಳ್ಳಿ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಯೋಧ್ಯ ಶ್ರೀರಾಮಮಂದಿರ ಮಾದರಿಯನ್ನು ಮರಿಯಮ್ಮನಹಳ್ಳಿಯ ನಗರೇಶ್ವರ ದೇವಸ್ಥಾನದಲ್ಲಿ ಸೆಪ್ಟಂಬರ್ 8ರ ಸೋಮವಾರದಿಂದ ಸೆಪ್ಟಂಬರ್ 14ರ ಭಾನುವಾರದವರೆಗೂ ನಿತ್ಯ
ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯರೆಗೆ ಪ್ರದರ್ಶನ ಮಾಡಲಾಗುತ್ತಿದೆ.
ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಡಿ. ರಾಘವೇಂದ್ರ ಶೆಟ್ಟಿ ಅವರು ಈ ಮಾಹಿತಿ ನೀಡಿದ್ದು, ತುಮಕೂರಿನ ಬಿದರೆಯ ವಿನಯರಾಂ ಅವರು ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಟ್ಟಡದ ಮಾದರಿಯನ್ನು ಸಿದ್ಧಪಡಿಸಿ ರಾಜ್ಯದ 108 ಕಡೆ ಅಯೋಧ್ಯೆ ಶ್ರೀ ರಾಮಮಂದಿರ ಮಾದರಿ ಪ್ರದರ್ಶನ ಮಾಡಲು ಸಂಕಲ್ಪಿಸಿ 2022 ರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಮರಿಯಮ್ಮನಹಳ್ಳಿಯ ಆರ್ಯವೈಶ್ಯ ಸಮಾಜ ಹಾಗೂ ನಗರೇಶ್ವರ ದೇವಸ್ಥಾನದ ಸಹಯೋಗದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮರಿಯಮ್ಮನಹಳ್ಳಿಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಯೋಧ್ಯಶ್ರೀ ರಾಮ ಮಂದಿರದ ಮಾದರಿಯ ಹಾಗೂ ಬಾಲರಾಮನ ದರ್ಶನ ಪಡೆಯಬಹುದು ಎಂದು ಅವರು ತಿಳಿಸಿದರು.
ಶ್ರೀರಾಮ ಮಂದಿರ ಮಾದರಿಯ ತಯಾರಕ ಹಾಗೂ ಆಧ್ಯಾತ್ಮಕ ಚಿಂತಕ ವಿನಯರಾಂ ಅವರು, ವಯಸ್ಸಾದವರು, ಬಹಳಷ್ಟು ಜನರು ಆಯ್ಯೋಧ್ಯೆಗೆ ಹೋಗಿ ಶ್ರೀರಾಮಮಂದಿರ ನೋಡಲು ಆಗದವರಿಗೆ ಶ್ರೀರಾಮ ಮಂದಿರ ವೀಕ್ಷಣೆ ಮಾಡಲಿ ಎಂಬ ಉದ್ದೇಶದಿಂದ ಸ್ವತಃ ತಾವೇ, ಮಂದಿರದ ಮಾದರಿಯನ್ನು ತಯಾರಿಸಿ ಪ್ರದರ್ಶನ ಏರ್ಪಡಿಸಿರುವೆ. ಶ್ರೀರಾಮ ಮಂದಿರದಲ್ಲಿ ಇರುವ ಬೆಳಕಿನ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದರು.
ಶ್ರೀರಾಮರ ಆದರ್ಶ ತತ್ವಗಳು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಲ್ಲ. ಶ್ರೀರಾಮನ ಆದರ್ಶ ಗುಣಗಳು ಸರ್ವರಲ್ಲಿ ಬರಬೇಕು ಎನ್ನುವ ಉದ್ದೇಶ ಹೊಂದಿರುವೆ. ಈಗ ಮರಿಯಮ್ಮನಹಳ್ಳಿಯಲ್ಲಿ 90ನೇ ಪ್ರದರ್ಶನ. 15 ಜಿಲ್ಲೆಗಳಲ್ಲಿ ಪ್ರದರ್ಶನವಾಗಿದೆ. ಇನ್ನೂ 18 ಜಿಲ್ಲೆಗಳಲ್ಲಿ ಪ್ರದರ್ಶನಗೊಂಡರೆ ಒಟ್ಟು 108 ಪ್ರದರ್ಶನ ಮಾಡಿ ಶ್ರೀರಾಮನ ಆದರ್ಶನ ಜೀವನದ ಬಗ್ಗೆ ಸರ್ವಾಜನಿಕರಿಗೆ ಉಚಿತವಾಗಿ ಯಾವುದೇ ಫಲ ಆಪೇಕ್ಷೆ ಇಲ್ಲದೇ ಸೇವೆಯೆಂದು ತಿಳಿಸಿಕೊಡು ಶ್ರೀರಾಮನ ಸೇವೆ ಸಲ್ಲಿಸುತ್ತಿದ್ದೇನೆ. ಇದರ ಹಿಂದೆಗ ಹಣ ಗಳಿಕೆಯ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮರಿಯಮ್ಮನಹಳ್ಳಿಯಲ್ಲಿ ಏಳು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಶ್ರೀರಾಮ ಮಂದಿರ ಮದರಿಯ ಪ್ರದರ್ಶನ ವೀಕ್ಷಿಸಲು ಬರುವ ಜನರಿಗೆ ಪ್ರತಿನಿತ್ಯ ಸಂಜೆ 6 ಗಂಟೆಯಿಂದ ಶ್ರೀರಾಮನ ಆದರ್ಶ ಗುಣಗಳ ಬಗ್ಗೆ ಮಾಹಿತಿಯ ವಿವರಣೆ ನೀಡಲಾಗುತ್ತಿದೆ. ಸ್ಥಳೀಯ ಭಜನಾ ತಂಡಗಳು ಭಜನೆ ಕಾರ್ಯಕ್ರಮ ನಡೆಸಿಕೊಡುವರು. ಮಕ್ಕಳಲ್ಲಿ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಕೊನೆಯ ದಿನ ಕ್ವೀಜ್ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಆರ್ಯವೈಶ್ಯ ಸಂಘದ ಉಪಾಧ್ಯಕ್ಷ ಜಿ. ಸತ್ಯನಾರಾಯಣ ಶೆಟ್ಟಿ, ಖಜಾಂಚಿ ಎನ್. ಶ್ರೀನಿವಾಸ ಶೆಟ್ಟಿ, ಯುವ ಜನ ಸಂಘದ ಕಾರ್ಯದರ್ಶಿ ಡಿ. ವಿನೋದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್