ಚಂದ್ರಗ್ರಹಣ ; ಬೆಂಗಳೂರಿನಲ್ಲಿ ದೇವಾಲಯಗಳ ಸಮಯ ಬದಲಾವಣೆ
ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಇಂದು ನಡೆಯಲಿರುವ ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣದ ಪರಿಣಾಮ ಬೆಂಗಳೂರು ನಗರದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ ಆಗಿದ್ದು, ಅನೇಕ ದೇವಾಲಯಗಳು ಮಧ್ಯಾಹ್ನದಿಂದ ಬಾಗಿಲು ಮುಚ್ಚಲಿವೆ. ಗವಿಗಂಗಾಧರೇಶ್ವರ ದೇವಾಲಯ ಬಾಗಿಲು ಮುಚ್ಚಲಾ
ಚಂದ್ರಗ್ರಹಣ ; ಬೆಂಗಳೂರಿನಲ್ಲಿ ದೇವಾಲಯಗಳ ಸಮಯ ಬದಲಾವಣೆ


ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಇಂದು ನಡೆಯಲಿರುವ ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣದ ಪರಿಣಾಮ ಬೆಂಗಳೂರು ನಗರದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ ಆಗಿದ್ದು, ಅನೇಕ ದೇವಾಲಯಗಳು ಮಧ್ಯಾಹ್ನದಿಂದ ಬಾಗಿಲು ಮುಚ್ಚಲಿವೆ.

ಗವಿಗಂಗಾಧರೇಶ್ವರ ದೇವಾಲಯ ಬಾಗಿಲು ಮುಚ್ಚಲಾಗಿದ್ದು ಸೋಮವಾರ ಬೆಳಗ್ಗೆ 6ಕ್ಕೆ ಶುದ್ಧೀಕರಣದ ಬಳಿಕ ದರ್ಶನ ಸಿಗಲಿದೆ.

ಬನಶಂಕರಿ ದೇವಿ ದೇವಾಲಯ ಇಂದು ದೇವಿಯ ಜನ್ಮದಿನೋತ್ಸವ. ಮಧ್ಯಾಹ್ನ ನಂತರ ಬಾಗಿಲು ಮುಚ್ಚಲಿದ್ದು, ಸೋಮವಾರ ಬೆಳಗ್ಗೆ 6ರಿಂದ ದರ್ಶನ ದೊರೆಯಲಿದೆ.

ಕಾಡುಮಲ್ಲೇಶ್ವರ ದೇವಾಲಯ ಬಂದ್ ಆಗಿದ್ದು ಸೋಮವಾರ ಬೆಳಗ್ಗೆ 4ಕ್ಕೆ ಶುದ್ಧೀಕರಣದ ಬಳಿಕ ತೆರೆಯಲಾಗುವುದು.

ಗಾಳಿ ಆಂಜನೇಯ ದೇವಾಲಯ, ಅಣ್ಣಮ್ಮ ದೇವಿ ದೇವಾಲಯ, ಬಂಡೆ ಮಹಾಕಾಳಿ ದೇವಾಲಯ ಸೇರಿದಂತೆ ನಗರದ ಎಲ್ಲ ದೇವಾಲಯಗಳ ಬಾಗಿಲು ಮುಚ್ಚಲಿದ್ದು, ಚಂದ್ರಗ್ರಹಣ ಮುಗಿದ ಬಳಿಕ ಎಲ್ಲಾ ದೇವಾಲಯಗಳಲ್ಲಿ ಶುದ್ಧೀಕರಣ, ಪುಣ್ಯಕಾಲ ಹೋಮ-ಹವನಗಳು ನಡೆಯಲಿದ್ದು, ಭಕ್ತರಿಗೆ ಸೋಮವಾರದಿಂದಲೇ ದರ್ಶನ ಸಿಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande